ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ. ೨೪೭ ರಾಜ:-ಏನು ? ಆ ಬಾಲನೇ ಚಂದ್ರಾವತಿ, ಕುಮಾರನೇ ? ಅಜಿತಸಿಂಗನೆ ? ರಾಜಸಿಂಹನ ಆತುರತೆಯನ್ನು ನೋಡಿ ಆತನಿಗೆ ನಯನಪಾಲನು, ಚಂದ್ರಾವತಿಗೆ ಮಾಡಿದ ಮೋಸವನ ಇಂದಿರಾ ದುರ್ಗಾದಾಸರ ರಾಜ ಭಕ್ತಿ-ಶೌರ್ಯ-ಧೈರ್ಯಗಳನ್ನೂ ಪಡೈಯ ಚಮತ್ಕಾರವನ್ನೂ ಸವಿ ಸ್ವಾರವಾಗಿ ಹೇಳಿ, ಇನ್ನೂ ಸ್ವಲ್ಪ ಕಾಲದವರೆಗೆ ಈ ಬಾಲನನ್ನು ಇಲ್ಲಿಯೇ ಕಾಪಾಡಬೇಕಾಗಿರುವುದೆಂದೂ ಹೇಳಿದನು, ರಾಜಸಿಂಹನು ಅದನ್ನೆಲ್ಲಾ ಕೇಳಿ ಔರಂಗಜೇಬನ ದುರ್ನಡತೆಗೆ ಖತಿಗೊಂಡು ಆತನನ್ನು ತನ್ನಲ್ಲಿಯೇ ಧಿಕ್ಕರಿಸುತ್ತಿದ್ದನು. ವೈಕುಂಠಯೋಗಿ:-ರಾಜಸಿಂಹ! ನೀನು ಬಂದ ಉದ್ದೇಶವೇನು? ರಾಜ: ಪರಾಭಿಪ್ರಾಯ ತತ್ವಜ್ಞರಲ್ಲಿ ವಿಜ್ಞಾಪಿಸಬೇಕೇ ? ಬಾದಷ ಹನು ಇನ್ನು ಎರಡು ಮೂರು ದಿನಗಳಲ್ಲಿಯೆ ಯುದ್ಧಕ್ಕೆ ಬರುವನಂತೆ. ಯೋಗಿ:-ಕಾರಣವೇನು ? ರಾಜ-ರೂಪನಗರಾಧೀಶನಾದ ವಿಜಯಸಿಂಹನ ಮಗಳಾದ ವಿಮಲಾದೇವಿಯನ್ನು ತಾನು ಪರಿಗ್ರಹಿಸಬೇಕೆಂದು ಬಾದಷಹನು ತನ್ನ ಸೈನ್ಯ ವನ್ನು ರೂಪನಗರಕ್ಕೆ ಕಳುಹಲು ಸೈನ್ಯವುಬಂದು ಆ ಪಟ್ಟಣವನ್ನು ಮುತ್ತಿ ರುವುದು, ಕ್ಷಾ ತಾ ತೇಜೋ ವಿರಾಜಮಾನನಾನ ವಿಜಯಸಿಂಹನು ಹೆದ ರದೆ ಪ್ರಾಣವಿರುವವರೆಗೆ ಕ್ಷಾತ್ರಧರ್ಮವನ್ನು ಕಾಪಾಡುವೆನೆಂದು ಶಪಥ ಮಾಡಿರುವನು. ರಾಜಪುತ್ರರೆಲ್ಲರಿಗೂ ಈ ವೇಳೆಯಲ್ಲಿ ಸಹಾಯಮಾಡು ವುದು ಅಗತ್ಯವೆಂದು ಬರೆದು ಕಳುಹಿರುವನು, ಸುಕುಮಾರಿಯಾದ ವಿವ ಲಾದೇವಿಯ ತನ್ನ ಅವಸ್ಥೆಯನ್ನು ಹೃದಯದ್ರಾವಕರೀತಿಯಲ್ಲಿ ವರ್ಣಿಸಿ ಯವನರಪಾಲುಮಾಡದೆ ತನ್ನ ಸತೀಧರ್ಮವನ್ನೂ ಆದರೊಡನೆಯೇ ಕ್ಷಾತ್ರತೇಜಸ್ಸನ್ನೂ ಕಾಪಾಡಬೇಕೆಂದು ಪ್ರಾರ್ಥಿಸಿರುವಳು, ಹಾಗೆ ಸಂರ ಕ್ಷಿಸದಿದ್ದರೆ ಯಜ್ಞೆಶ್ವರನಿಗೆ ಆಹುತಿಯಾಗುವುದಾಗಿಯ ಸಂಕಲ್ಪಿಸಿರು