ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫9 ಕರ್ಣಾಟಕ ನಂದಿನಿ ಮುಪ್ಪತ್ತನೆಯ ಪ್ರಕರಣ ವಿಜಯಸಿಂಗನ ಸಹಾಯಕ್ಕಾಗಿ ರಾಜಪುತ್ರರೆಲ್ಲರೂ ಬರುವರೆಂ ಬುದನ್ನು ತಿಳಿದು ಸಾದತ್ ಖಾನನು ಭೀತನಾಗಿ ತನಗೆ ಸಹಾಯಕ್ಕಾಗಿ ಸೈನ್ಯವನ್ನು ಕಳುಹಿಸಬೇಕೆಂದು ದಿನವೂ ಬಾದಶಹನಿಗೆ ಬರೆಯುತ್ತಿದ್ದನು. ಹೀಗೆ ದಿನವೂ ಬರೆದು ಕಳುಹುತ್ತಿದ್ದುದನ್ನು ನೋಡಿ ಬಾದಶಹನು, ರಾಜ, ಪುತ್ರರೆಲ್ಲರೂ, ಐಕ್ಯಮತದಿಂದ ತನ್ನ ಮೇಲೆ ದಂಡೆತ್ತಿ ಬರುವುದಲ್ಲದೆ ಅವ ರೆಲ್ಲರಿಗೂ ರಾಜಸಿಂಹನೇ ಮುಖಂಡನಾಗಿ ನಿಲ್ಲು ವುದರಿಂದ ತಾನೂ ಬಲ ವಯತ್ನವನ್ನೇ ಮಾಡಬೇಕೆಂದೂ ಈ ಯುದ್ದದಲ್ಲಿ ರಾಜಪುತ್ರರೂ ರಾಜ ಸಿಂಹನೂ ತನಗೆ ಕೈಸೆರೆ ಸಿಕ್ಕು ದುದೇ ಆದರೆ ಮುಂದೆ ತಾನು ನಿರಾತಂಕ ವಾಗಿರಬಹುದೆಂದೂ ಯೋಚಿಸಿ, ತನ್ನ ಸೈನ್ಯವೆಲ್ಲವನ್ನೂ ಒಟ್ಟುಗೂಡಿಸಿ ಯುದ್ಧಕ್ಕೆ ಹೊರಡಬೇಕೆಂದಿದ್ದನು. ಇಷ್ಟರಲ್ಲಿ ಮತ್ತೊಂದು ಕಾಗ ದವು ಸಾದತ್ ಖಾನನಿಂದ ಕಳುಹಲ್ಪಟ್ಟಿತು, ಅದನ್ನು ಓದಿಕೊಂಡಾ ಕ್ಷಣವೇ ಬಾದಶಹನು ತನ್ನ ಸೇನಾನಾಯಕರಲ್ಲೊಬ್ಬನನ್ನು ಕರೆಯಿಸಿ ರೂಸನಗರದ ಮೇಲೆ ಇಂದಿನ ದಿನವೇ ದಂಡೆತ್ತಿ ಹೊರಡಬೇಕೆಂದೂ ತಾನು ನಾಳೆಯೇ ಹೊರಟು ಬರುವನೆಂದೂ ಹೇಳಿಕಳುಹಿದನು. ಇಷ್ಟು ಮಾಡಿದ ಬಳಿಕ ಬಾದಶಹನು ಈ ಸಂಗತಿಯನ್ನು ತನ್ನ ಪಟ್ಟಿ ಮಹಿಷಿಯಾದ ಉದಯವರಿಗೆ ಹೇಳಬೇಕೆಂದು ಅಂತಃಪುರಕ್ಕೆ ಹೊರಟು ಬಂದನು. ಉದಯಪುರಿಯು ಇಂದಿರೆಯನ್ನು ಕಾಣದಂದಿನಿಂದ ಅತ್ಯಂತ ಪರಿತಾಪಪಡುತ್ತ ತನಗೆ ಸಾಧ್ಯವಾದ ಮಟ್ಟಿಗೂ ಡಿಲ್ಲಿ ನಗರದಲ್ಲೆಲ್ಲಾ ಹುಡುಕಿಸಿ ತನ್ನ ಪ್ರಾಣವನ್ನು ಕಾಪಾಡಿದುದಕ್ಕಾಗಿ ಆಕೆಗೆ ಬಹುಮಾನವನ್ನು ಕೂಡ ಕೊಡಲಿಲ್ಲವಲ್ಲಾ ಎಂದು ವಿಚಾರಗ್ರಸ್ತಳಾಗಿದ್ದಳು ; ತನ್ನ ಮೇಲಿನ ದ್ವೇಷದಿಂದ ರೋಷನಾರೆಯು ಇಂದಿರೆಯನ್ನು ಅಪಹರಿಸಿರಬಹುದೆಂದೂ