ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

bo೬ ಕರ್ಣಾಟಕ ನಂದಿಸಿ ಸತ್ಕರಿಸಿ ಎಲ್ಲರಿಗೂ ಪ್ರತ್ಯೇಕ ಪ್ರತ್ಯೇಕ ಬಿಡಾರಗಳನ್ನು ಹಾಕಿಸಿದನು. ಉದಯಪುರದಲ್ಲಿ ಎಲ್ಲೆಲ್ಲಿ ನೋಡಿದರೂ ಸೈನಿಕರ ಕೋಲಾಹಲವೂ ರಾಜ ಪುತ್ರರ ಸಮರೋತ್ಸಾಹವೂ ತುಂಬಿ ತುಳುಕುತ್ತಿದ್ದುವು, ಪ್ರತಿ ದಿನವೂ ರಾಜಸಿಂಹನು ಅಶ್ವಾರೂಢನಾಗಿ ಬಂದು, ಸಹಾಯಕ್ಕಾಗಿ ಬಂದಿರುವ ರಾಜ ಪ್ರತ್ರರೆಲ್ಲರಿಗೂ ಸರಿಯಾಗಿ ಉಪಚಾರಗಳು ನಡೆಯುವವೋ ಹೇಗೆಂಬು ದನ್ನು ರಹಸ್ಯವಾಗಿ ತಿಳಿದುಕೊಳ್ಳುತ್ತಲೂ ಸಮಕ್ಷ ಸಂಭಾಷಣೆಯಿಂದವ ರನ್ನು ಸಂಭಾವಿಸುತ್ತಲೂ ಬರುತ್ತಿದ್ದನು. ಸೈನಿಕರು ಯವನರ ಗರ್ವಭಂಗ ಮಾಡುವ ಸುಯೋಗವು ಪ್ರಾಪ್ತವಾಯಿತೆಂಬ ಸಂತೋಷದಿಂದ ಪರಮಾ ತ್ಮನ ಭಜನ ಸಂಕೀರ್ತನೆಗಳನ್ನು ಮಾಡುತ್ತಲೂ ಪರಸ್ಪರ ಅಭಿಮಾನದಿಂದ ಸಂಭಾಷಿಸುತ್ತಲೂ ಸಂಗೀತ ವಾದ್ಯಗಳಿಂದ ಮನಸ್ಸನ್ನು ಉಲ್ಲಾಸಗೊಳಿಸು ತಲೂ ಬಗೆಬಗೆಯಾಗಿ ತಮ್ಮ ಸಂತೋಷೋತ್ಸಾಹಗಳನ್ನು ಪ್ರದರ್ಶಿಸುತ್ತಿ ದ್ದರು, ಪುರಜನರು ಸಹಾಯಕರಾಗಿ ಬಂದಿರುವ ಸೇನಾಸಮೂಹವನ್ನು ನೋಡುವ ಕುತೂಹಲದಿಂದ ಗುಂಪು ಗುಂಪಾಗಿ ಬಂದು ಬುರುಜುಗಳ ಮೇಲೆಯೂ ಗುಡ್ಡದ ಮೇಲೆಯೂ ನಿಂತು ನೋಡುತ್ತ ಬಂದಿರುವ ಸೇನೆಗೆ ಇಲ್ಲಿ “ ಬುಂದೇರಾಜನ ಸೇನೆ ಇದು, ಭರತ ಪುರಾಧೀಶನ ಸೇನೆ ಇದು, ಜೋಧಪುರದ ಚಂದ್ರಾವತೀ ರಾಣಿ ಸೇನೆ ಇದು, ಅಲ್ವಾರ ರಾಜನ ಸೇನೆ ಇದು ” ಎಂದು ಹೇಳಿಕೊಳ್ಳುತ್ತ ತಮ್ಮ ರಾಜನಿಗೇ ಜಯಲಕ್ಷ್ಮಿಯು ಒಲಿವಳೆಂದು ನಿರ್ಧರಿಸಿ ಸಂತೋಷ ಪಡುತ್ತಿದ್ದರು. ರಾಜಸಿಂಹನ ವಿಶ್ವಾಸಗೌರವಕ್ಕೆ ಪಾತ್ರನಾಗಿದ್ದ ದುರ್ಗಾಚರಣ ಬೋಯಿಸನಿಂಬವನೊಬ್ಬ ಜ್ಯೋತಿಷಶಾಸ್ತ್ರಜ್ಞನು ಉದಯಪುರದಲ್ಲಿಯೇ ಇದ್ದನು. ಈತನೂ ಸೈನ್ಯವನ್ನು ನೋಡಬಂದವನು ತಾನು ಎಲ್ಲರಂತೆಯೂ ಸುಮ್ಮ ಸಿರದೆ ತನ್ನ ಜ್ಯೋತಿಷಶಾಸ್ತ್ರ ಪಾಂಡಿತ್ಯವನ್ನು ಇವರಲ್ಲಿ ಪ್ರದರ್ಶಿ ಸುವೆನೆಂದು ಆಲೋಚಿಸಿ, ಒಂದೆಡೆ ಗುಂಪಾಗಿ ನಿಂತಿದ್ದ ಕಾ ಒಪುತ್ರರ ಮಧ್ಯೆ ಸುಗ್ಗಿ-“ ಎಳ್ಳೆ, ಪೀರರೇ ! ನಿಮಗೆ ಒಯವಾಗುವುದು, ನಿಮಗೆ ಒಯ