ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ. 함ng하 ಲಕ್ಷ್ಮೀ ಪ್ರಸನ್ನಳಾಗುವಳು. ನಾನು ಜ್ಯೋತಿಷ್ಯ ವನ್ನು ನೋಡಿ ಹೇಳುವ ವನು. ನನ್ನ ಮಾತು ಸುಳ್ಳಾಗುವುದಿಲ್ಲ.” ಎಂದು ಹೇಳುತ್ತಿದ್ದನು. ಇದನ್ನು ಕೇಳಿ ಭಟರಲ್ಲಿ ಕೆಲವರು ತಮಗೆ ಮದುವೆಯಾವಾಗಲಾಗುವುದೆಂದೂ ಇನ್ನು ಕೆಲವರು ತಮ್ಮ ಸಂಸಾರವು ತಮ್ಮೊಡನೆ ಸೇರುವುದಾವಾಗಲೆಂದೂ ಇನ್ನು ಕೆಲವರು ಯುದ್ಧದಲ್ಲಿ ಯಾರಿಗೆ ಜಯವಾಗುವುದೆಂದೂ ಹೀಗೆ ಬಗೆ ಬಗೆಯಾಗಿ ಕೇಳುತ್ತ ಆ ಜೋಯಿಸನನ್ನು ಪೀಡಿಸಲಾರಂಭಿಸಿದರು. ಜೋಯಿ ಸನು ತಾಳ್ಮೆಯಿಂದ ಅವರವರ ಪ್ರಶ್ನೆಗಳಿಗೆ ಪ್ರಕೃತೋಚಿತಗಳಿಂದ ಉತ್ತರ ಗಳನ್ನು ಕೊಡುತ್ತ ಬಂದನು. ಇಷ್ಟರಲ್ಲಿ ಶ್ಯಾಮಲಪಂಡಿತನೂ ಅಲ್ಲಿಗೆ ಬಂದನು. ಈತನು ರಾಜ ಸಿಂಹನ ಅರಮನೆಯನ್ನು ಪ್ರವೇಶಿಸಿದಂದಿನಿಂದಲೂ ಜೋಯಿಸರಿಗೆ ಅತ್ಯಂತ ಸ್ನೇಹವುಳ್ಳವನಾಗಿದ್ದನು. ಜೋಯಿಸನೂ ಆತನ ಹಾಸ್ಯೆಕ್ತಿಗಳಿಗೆ ಆನಂದಿಸುತ್ತ ಆತನೊಡನೆಯೇ ಕಾಲವನ್ನು ಕಳೆಯುತ್ತಿದ್ದನು. ಅವರಿ ಬ್ಬರೂ ಅಣ್ಣ ತಮ್ಮಂದಿರಂತೆ ಎಲ್ಲಿಗೆ ಹೋದರೂ ಜೊತೆಯಲ್ಲಿಯೇ ಹೋಗು ತಿದ್ದರು. ಆದರೆ ಈ ದಿನ ಮಾತ್ರ ಜೋಂಸನು ಹೇಳದೆ ಹೊರಟು ಬಂದು ದರಿಂದ ಅವನನ್ನು ಎಲ್ಲೆಲ್ಲಿಯೋ ಹುಡುಕಿ ಕಪಗೆ ಈ ಗುಂಪಿನಲ್ಲಿದ್ದವನನ್ನು ಕಂಡು ಬಹುಪ್ರಯಾಸದಿಂದ ಜನರ ಗುಂಪನ್ನು ಭೇದಿಸಿಕೊಂಡು ಬಂದು ಬೋಯಿಸನನ್ನು ಸೇರಿದನು. ಜೋಯಿಸನು ಆತನನ್ನು ಆದರಿಸಿ ತನ್ನ ಪಕ್ಕದಲ್ಲಿದ್ದ ಬಂಡೆಯಮೇಲೆ ಕುಳ್ಳಿರಿಸಿಕೊಂಡನು. ಶ್ಯಾಮಲಪಂಡಿತನು ಜೋಯಿಸನನ್ನು ನೋಡಿ.... “ ಬೋಯಿಸರೇ ! ಎಲ್ಲರಿಗೂ ಬೋತಿಷ್ಯವನ್ನು ಹೇಳುವಿರಿ ; ನನಗೆ ಮಾತ್ರ ಹೇಳಬೇಡವೋ ? ಎಲ್ಲಿ ಹೇಳಿರಿ, ನಾನೊಂದು ಕಾರ್ಯವನ್ನು ಈಗ ಮನಸ್ಸಿನಲ್ಲಿ ನೆನಸಿಕೊಂಡಿರುವೆನು. ಅದಕ್ಕೆ ಫಲವನ್ನು ಹೇಳಬೇಕು. ಜೋಯಿಸ:- ನೀವು ಸ್ಮರಿಸಿದ ಕಾರ್ಯವು ಸಿದ್ಧಿಸುವುದು, ಯುದ್ಧದಲ್ಲಿ ನಿಮಗೇ ಒಯವಾಗುವುದು.