ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ಳ ಕರ್ಣಾಟಕ ನಂದಿಸಿ ಶ್ಯಾಮಲ;-ಸರಿ, ಸರಿ, ಬಹು ಚೆನ್ನಾಗಿದೆ, ನಾನು ಸ್ಮರಿಸಿ ದೊಂದು ನೀವು ಹೇಳುವುದೊಂದು, ನಾನಿಲ್ಲಿಗೆ ರೂಪನಗರದಿಂದ ಬರು ವಾಗ ನಮ್ಮ ಮನೆಯ ಹಸು ಗರ್ಭವಾಗಿತ್ತು, ಅದು ಈಗ ಕರುವನ್ನು ಹಾಕಿರುವುದೆ ಎಂದು ಸ್ಮರಿಸಿದೆನು, ನೀವು ಯುದ್ದದ ವಿಚಾರತೆಗೆದಿರಿ. ಒಳ್ಳೆಯ ಜೋತಿಷ್ಯ ! ಫಲವೆಂದರೆ ಇದೇ ಫಲ; ಹೋಗಲಿ, ಆ ಹಸುವಿನ ರೂಪವನ್ನಾದರೂ ಹೇಳುವಿರೋ ? ಜೋಯಿಸ:-ಸರಿಯೆ, ಆ ಹಸು ಕಪ್ಪು ಬಣ್ಣ, ಮುಖದ ಮೇಲೆ ಬಿಳಿಯ ಮಚ್ಚೆಗಳಿರುವವು, ಕೊಂಬುಗಳು ಗಿಡ್ಡ....ಏನು ನಿಜವೊ ? ಶ್ಯಾಮಲ:-ಓಹೋ ! ನೀವು ಹೇಳುವಂತಹ ಹಸುಗಳು ಲೋಕ ದಲ್ಲೆಷ್ಟೊ ಇರುವುವು ; ನಾನೂ ನೋಡಿರುವೆನು, ನಮ್ಮ ಮನೆಯಲ್ಲಿ ಮಾತ್ರ ಹಸುವೇ ಇಲ್ಲ. ಹೀಗೆ ಶ್ಯಾಮಲಪಂಡಿತನು ವಿನೋದವಾಡಲು ಬೋಯಿಸನು ಸುಮ್ಮ ನಾದನು. ಪಂಡಿತನ ಹಾಕ್ಕೊಕ್ಕಿಗಳಿಗೆ ಸುತ್ತಲಿದ್ದ ಭಟರು ಸಂತೋಷಿಸಿ, ಫಲಾದಿಗಳನ್ನಿತ್ತು ಸತ್ಕರಿಸಿದರು, ಪಂಡಿತನು ಅವನ್ನು ಸ್ವೀಕರಿಸಿ ಬೋ। ಯಸನೊಡಗೊಂಡು ಅರಮನೆಗೆ ಹೊರಟು ಹೋದನು. ಅಂದು ಸಾಯಂಕಾಲ ರಾಜಸಿಂಹನು ಸಹಾಯಕ್ಕಾಗಿ ಬಂದಿದ್ದ ರಾಜಪುತ್ರರೊಡನೆ ತನ್ನ ಮಹಲಿನ ಮಾಳಿಗೆಯ ಮೇಲೆ ಕುಳಿತು ಯುದ್ಧ ಸಂಬಂಧವಾಗಿ ಆಲೋಚಿಸುತ್ತ ಕುಳಿತಿದ್ದನು. ಕುಳಿತಿದ್ದವನ ದೃಷ್ಟಿ ದೂರದಲ್ಲಿ ಅಶ್ವಾರೂಢನಾಗಿ ಉದಯಪುರಾಭಿಮುಖನಾಗಿ ಬರುತ್ತಿದ್ದ ಸರ ದಾರನ ಕಡೆ ಬಿದ್ದಿತು. ರಾಜಸಿಂಹನು ಕುತೂಹಲದಿಂದ ಆತನನ್ನೇ ಸಿರೀ ಕ್ಷಿಸುತ್ತಿದ್ದನು. ಬಳಿಯಲ್ಲಿದ್ದ ರಾಜಪುತ್ರರೂ ಆತನಾರಿರಬಹುದೆಂದು ಯೋಚಿಸುತ್ತ ಆತನನ್ನೇ ನೋಡುತ್ತಿದ್ದರು. ಸ್ವಲ್ಪ ಹೊತ್ತಿನೊಳಗಾಗಿ ಆ ಸರದಾರನು ಪಟ್ಟಣ ಪ್ರವೇಶಮಾಡಿ ರಾಜಮಾರ್ಗಗಳನ್ನು ದಾಟಿ ಅರ ಮನೆಯ ಮುಂದೆ ಕುದುರೆಯಿಂದಿಳಿದು ದ್ವಾರಪಾಲಕನನ್ನು ಕುರಿತು