ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೨ ಕರ್ಕಾಟಕ ನಂದಿನಿ ವಾವುದೆಂಬುದನ್ನೂ ನಾನು ಚನ್ನಾಗಿ ಬಲ್ಲೆನು, ನಾನು ಕೂಡ ಈ ವಿಷ ಯದಲ್ಲಿ ನಿನಗೆ ಗುರುವೇ ಸರಿ : ನಿಜಾಂಶವನ್ನು ಹೇಳು. ಈ ತೂತುಗಳಿಂದ ನಯನಪಾಲನು ಶಂಕೆಗೊಂಡು ಸುಮ್ಮನೇ ನಿಲ್ಲ ಲು, ನಮ್ಮ ಫಕೀರನು ಅವನನ್ನು ಕುರಿತು, ಅಯ್ಯಾ ; ಇನ್ನೂ ಅನುಮಾ ನವೇ ? ನಿನ್ನ ಸಮಾಚಾರವನ್ನೆಲ್ಲವನ್ನೂ ನಾನು ಬಲ್ಲೆನು, ನೀನು ನಯನ ಪಾಲನಲ್ಲವೇ ?” ಎಂದನು. ಪಾಪ ! ನಯನಪಾಲನು ಅತ್ಯಂತ ಭೀತಚಿತ್ತನಾಗಿ ಫಕೀರನ ಕೈಗ ಳನ್ನು ಹಿಡಿದುಕೊಂಡು ದೈನೃವಾಣಿಯಿಂದ- “ ಸ್ವಾಮಿಾ, ದಯೆಯಿಟ್ಟು ನನ್ನ ರಹಸ್ಯವನ್ನು ಒಬ್ಬರಿಗೂ ತಿಳಿಸಬೇಡಿ ; ಈ ದಿನ ನನ್ನನ್ನು ಹೇಗಾದರೂ ಮಾಡಿ ಕಾಪಾಡಿರಿ ! ನಿಮಗೆ ಬೇಕಾದ ಬಹುಮಾನಗಳನ್ನು ಕೊಡುವೆನು.” ಎಂದು ಅಭಯವನ್ನಿತ್ತು ನಯನಪಾಲನು ಫಕೀರನನ್ನೊಡಗೊಂಡುಹೋಗಿ ರಹಸ್ಯವಾದೊಂದೆಡೆಗೆ ಕರೆದೊಯ್ದು ಹೀಗೆ ಕೇಳಿದನು. “ ಸ್ವಾಮಾ ! ತಮ್ಮ ವಾಸಸ್ಥಾನವಾವುದು ?” ಫಕೀರಿ:- ಅಯ್ಯಾ ! ಫಕೀರರಿಗೆ ಒಂದೇ ಕಡೆ ವಾಸವುಂಟೇ ? ಭಕ್ತರ ಕೋರಿಕೆಗಳನ್ನು ನೆರವೇರಿಸುವುದೇ ನಮ್ಮ ಕೆಲಸ ನಿನ್ನ ಮುಖ ವನ್ನು ನೋಡಿದ ಕೂಡಲೆ ನೀನೊಬ್ಬ ರಾಜಪುತ್ರನೆಂದು ತಿಳಿದುಕೊಂಡೆನು. ಇಷ್ಟೇ ಅಲ್ಲ, ಇಂದಿರೆಯನ್ನು ಈ ನರಕವಾಸದಿಂದ ಬಿಡಿಸಿ ಕಾಪಾಡಬೇ ಕೆಂದು ನೀನು ಅಂತಃಪುರವನ್ನು ಪ್ರತಿನಿತ್ಯವೂ ಪ್ರವೇಶಿಸುತ್ತಿರುವುದನ್ನು ಕೂಡ ತಿಳಿದಿರುವೆನು. ಒಳ್ಳೆಯದು, ಇಂದಿರೆ ಎಲ್ಲಿರುವಳೆಂಬುದನ್ನೇನಾ ದರೂ ಬಲ್ಲೆಯೋ ? ನಯನ:- ನಿಮ್ಮ ಮಾತಿನಿಂದ ಆಕೆ ತಪ್ಪಿಸಿಕೊಂಡು ಓಡಿ ಹೋ ಗಿರುವಳೆಂದು ತಿಳಿಯುತ್ತದೆ. ಹಾಗಾಗಿದ್ದರೆ ನಾನು ಧನ್ಯನಾದೆನು. ಫಕೀರ:- ಓಡಿಹೋಗಲಿಲ್ಲ. ರೋಷನಾರೆಯ ಸಮಿಾಪದಲ್ಲಿ ರುವಳು.