ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೪ ಕರ್ಣಾಟಕ ನಂದಿಸಿ ರಿಗೆ ಕಾಣದಂತಾಯಿತು. ಈ ಮಹಾಂಧಕಾರದಲ್ಲಿ ನೀಲವರ್ಣವಾದ ಒಲ ದಿಂದ ಪೂರ್ಣ ವಾಹಿನಿಯಾಗಿದ್ದ ಯಮುನಾನದಿಯು ನೋಡಲು ಅತ್ಯಂತ ಭಯಂಕರವಾಗಿದ್ದಿತು. ನದಿಯ ತರಂಗಗಳು ಮಹಾರಭಸದಿಂದ ಅಲ್ಲ ಕಲ್ಲೋಲವಾಗಿ ಉಬ್ಬಿ ಹೊರಳಾಡುತ್ತಿದ್ದುವು. ಎತ್ತ ನೋಡಿದರೂ ಎಲೆ ಗಳ ಶಬ್ದವೇ ಹೊರತು ನೀಲವರ್ಣದ ಜಲಪ್ರದೇಶವಾಗಲಿ ನದಿಯ ದಡ ಪ್ರದೇಶವಾಗಲಿ ಯಾವುದೂ ಕಾಣುತ್ತಿರಲಿಲ್ಲ. ಆದರೆ, ನದಿಯ ಒಂದು ಪಕ್ಕದಲ್ಲಿ ರೋಷನಾರೆಯ ಜನಾನವಿದ್ದಿತು. ಆಕೆಯಿದ್ದ 'ಸೌಧವು ಬಹು ಎತ್ತರವಾಗಿದ್ದು ದರಿಂದ ಕೆಲವು ದೀಪಗಳು ಮಾತ್ರ ಕಾಣುತ್ತಿದ್ದು ವು. ಈ ಸೌಧದ ಕೋಟೆಯ ಬುರುಜಿನ ಸಮೀಪದಲ್ಲಿಯೇ ನದಿಯು ಅತಿವೇಗ ದಿಂದ ಹರಿಯುತ್ತಿದ್ದಿತು. ಆ ದಿನ ರಾತ್ರಿ ರೋಷನಾರೆಯು ತನ್ನ ಮುಖ್ಯ ಸೇವಕನಾದ ಫರುಕ್ ಪೈರನನ್ನು ಹೊರತು ಮಿಕ್ಕವರೆಲ್ಲರನ್ನೂ ಆವಾವುದೋ ಕೆಲಸದ ನೆವ ಮಾಡಿ ಹೊರಗೆ ಕಳುಹಿದಳು. ರಾತ್ರಿ ಒಂದೂವರೆ ಜಾವವಾಯಿತು; ಪಟ್ಟಣದವರೆಲ್ಲರೂ ನಿದ್ರಿಸುತ್ತಿದ್ದುದರಿಂದ ಡಿಲೀನಗರವೇ ನಿಶ್ಯಬ್ದವಾಗಿ ನಿದ್ರಿಸುವಂತಿದ್ದಿತು. ಎತ್ತ ನೋಡಿದರೂ ಮನುಷ್ಯ ಸಂಚಾರವಿರಲಿಲ್ಲ. ಆ ಸಮಯದಲ್ಲಿ ಪುರುಷರಿಬ್ಬರು ಒಂದು ದೋಣಿಯಲ್ಲಿ ಕುಳಿತು ಯಮುನಾ ನದಿಯಲ್ಲಿ ಒಂದು ಕಡೆಯಿಂದ ಬರುತ್ತಿದ್ದರು. ಅಲೆಗಳ ಹೊಡೆತದಿಂದ ಬಾರಿಬಾರಿಗೂ ಆ ದೋಣಿ ಅತ್ತಿತ್ತ ಹೊರಳುತ್ತಿದ್ದು ದರಿಂದ ಆ ಪರುಷರಿ ರ್ವರೂ ತಮ್ಮ ಪ್ರಾಣಗಳನ್ನು ಕೈಯಲ್ಲಿ ಹಿಡಿದುಕೊಂಡು ಅತಿಪ್ರಯಾ ಸದಿಂದ ಬರುತ್ತಿದ್ದರು. ಪ್ರವಾಹವೇಗದಿಂದ ಆ ದೋಣಿಯು ಯಾವ ಮೂಲೆಗೆ ಹೊರಟುಹೋಗುವುದೋ ಎಂದು, ಪಾಪ, ಆ ಪುರುಷರಿಬ್ಬರೂ ಭಯಾಕುಲಚಿತ್ತರಾಗಿ ಕಷ್ಟವನ್ನು ಗಣಿಸದೆ ಬಹುಪ್ರಯಾಸದಿಂದ, ದೋಣಿ ಯನ್ನು ಎಳೆದುಕೊಂಡು ಬರುತ್ತಿದ್ದುದನ್ನು ನೋಡಿದರೆ ಇದೇ ಅವರಿಗೆ ಪ್ರಥಮಪ್ರಯತ್ನವೆಂದು ಹೇಳಬೇಕಾಗಿರುವುದು.. ಸ್ವಲ್ಪ ಹೊತ್ತಿಗೆ ಆ