ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ, ೨೬ ದೋಣಿಯು ರೋಷನಾರೆಯ ಸೌಧದ ದಕ್ಷಿಣ ಬುರುಜಿನ ಗೋಡೆಗೆ ಸಮೀಪವಾಗಿ ನಿಂತಿತು, ಆಗ ಅವರು ತಮ್ಮ ದೋಣಿಯನ್ನು ನಿಲ್ಲಿಸಿದ ಪ್ರವಾಹ ವೇಗವು ಒಂದು ಕಡೆಗೆ ಎಳೆಯುತ್ತಲೇ ಇದ್ದಿತು, ಇಷ್ಟರಲ್ಲಿ ಆ ಬುರುಜಿನ ಮೇಲೆ ಆವುದೋ ಶಬ್ದ ವಾಗಿ ಯಾರೋ ಮಾತಾಡುತ್ತಿರು ವಂತೆ ದೋಣಿಯಲ್ಲಿದ್ದವರಿಗೆ ತಿಳಿಯಿತು. ಆದರೆ, ಕತ್ತಲೆಯು ಅತ್ಯಂತ ದಟ್ಟವಾಗಿದ್ದುದರಿಂದ ಕೆಳಗಿದ್ದವರು ಮೇಲಿದ್ದವರಿಗಾಗಲಿ, ಮೇಲಿದ್ದವರು ಕಳಗಿದ್ದವರಿಗಾಗಲಿ ಕಾಣಿಸಲು ಅವಕಾಶವಿಲ್ಲದೆ ಹೋಯಿತು, ಆದರೂ ದೋಣಿಯಲ್ಲಿದ್ದ ಪುರುಷರಿಬ್ಬರೂ ಮೇಲೆಯೆ ದೃಷ್ಟಿಯನ್ನು ಇಟ್ಟಿ ದ್ದರು. ಆಗ ಆ ಬುರುಜಿನ ಮೇಲಿನಿಂದ ಆವುದೋ ವಸ್ತು ವೊಂದು ಮೆಲ್ಲಗೆ ಕೆಳಗೆ ಬರುತ್ತಿದ್ದಂತೆ ಕಾಣಬಂದಿತು, ತತ್‌ಕ್ಷಣವೇ ಅವರಿಬ್ಬರೂ ಮೆಲ್ಲನೆ ಮಾತನಾಡಿಕೊಳ್ಳುತ್ತ ತಮ್ಮ ದೋಣಿಯನ್ನು ಬುರುಜಿನ ಗೋಡೆಗೆ ಸಮೀಪವಾಗಿ ನಿಲ್ಲಿಸಿದರು, ಕ್ರಮಕ್ರಮವಾಗಿ ಆ ವಸ್ತು ಕೆಳಗೆ ಬಂದು ನೀರಿಗೆ ತಗಲಿದ ಕೂಡಲೆ ಅದಕ್ಕೆ ಕಟ್ಟಿದ್ದ ಹಗ್ಗವೂ ಸಹ ತೊಪ್ಪನೆ ನೀರಿನ ಮೇಲೆ ಬಿದ್ದಿತು, ಆಗ ನದಿಯಲ್ಲಿದ್ದ ಪುರುಷರಿಬ್ಬರೂ ತತ್‌ಕ್ಷಣವೇ ಆ ವಸ್ತುವನ್ನು ಹಿಡಿದುಕೊಂಡು ತಮ್ಮ ದೋಣಿಯಲ್ಲಿರಿಸಿ ಕೈಗಳಿಂದ ಮುಟ್ಟಿ ನೋಡಿ ಕುತೂಹಲದಿಂದ-“ಏನಿದು, ಧರಿಸಿರುವ ವಸ್ತಾದಿಗ ಳನ್ನು ನೋಡಿದರೆ ಪುರುಷನಂತಿರುವುದು.” ಎಂದು ಮಾತನಾಡುತ್ತ ಆ ಮನುಷ್ಯನ ನೆನೆದುಹೋಗಿದ್ದ ಬಟ್ಟೆಗಳನ್ನು ತೆಗೆದು ಬೇರೆ ಬಟ್ಟೆಗಳನ್ನುಡಿಸಿ ದೋಣಿಯ ಒಂದು ಮೂಲೆಯಲ್ಲಿ ಮಲಗಿಸಿ ಜೀವದಿಂದಿರುವನೆ: ಇಲ್ಲವೋ ಎಂಬ ಶಂಕೆಯಿಂದ ಆತನ ಎದೆಯ ಮೇಲೆ ಕೈಯನ್ನಿಟ್ಟು ನೋಡಲು ಎದೆಯು , ದಡದಡನೆ ಹೊಡೆದುಕೊಳ್ಳುತ್ತಿದ್ದುದರಿಂದ ಮೂರ್ಛಿತನಾಗಿರುವನೆಂದು ತಿಳಿದು ಸ್ವಲ್ಪ ಸಮಾಧಾನಪಟ್ಟರು, ಅಷ್ಟ್ರ ರಲ್ಲಿ ಮೊದಲಿನಂತೆಯೇ ಬುರುಜಿನ ಮೇಲಿನಿಂದ ಪುನಃ ಮತ್ತೆ 'ಯಾವುದೋ ಸಿದ್ದು ವಿಗ್ರಹವು, ಕೆಳಗಿಳಿಸಲ್ಪಡುತ್ತಿದ್ದುದನ್ನು ಕಂಡು ಇಬ್ಬರೂ