ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩ ಕರ್ಣಾಟಕನಂದಿಸಿ. ಸಂತೋಷದಿಂದಿ-“ ನಮಗೆ ಬೇಕಾದ ವಸ್ತುವೇ ಇದಾಗಿರಬಹುದು? ಎಂದು ಹೇಳುತ್ತ ನೀರಿನ ಹತ್ತಿರಕ್ಕೆ ಬರುತ್ತಿದ್ದ ಆ ವಿಗ್ರಹವನ್ನು ತಮ್ಮ ಕೈಗಳಿಂದ ಹಿಡಿದುಕೊಂಡು ಆನಂದದಿಂದುಬೈ ದೋಣಿಯ ಮತ್ತೊಂದು ಮಲೆಯಲ್ಲಿ ಮಲಗಿಸಿ ಮತ್ತಾರಾದರೂ ಬರುವರೇನೋ ಎಂದು ಸ್ವಲ್ಪ ಹೊತ್ತು ನಿರೀಕ್ಷಿಸಿ, ಚು =ಾಜಿನ ಮೇಲೆ ಮನುಷ್ಯರ ಕಂಠಸ್ವರವು ಪೂರ್ಣವಾಗಿ ನಿಂತುಹೋದ ಕೂಡಲೆ ತಮ್ಮ ದೋಣಿಯನ್ನು ಅಲ್ಲಿಂದ ನಡು ಸುತ್ತ ಹೊರಟರು. * `ದೋಣಿಯಲ್ಲಿ ಮಲಗಿದ್ದ ಇ೦ದಿರೆಯನ್ನೂ ಪುರುಷನನ್ನ ಒಬ್ಬನು ಉಪಚರಿಸುತ್ತಲಿದ್ದನು, ಮತ್ತೊಬ್ಬನು ದೋಣಿಯನ್ನು ನಡೆಯಿಸು ಆದ್ದನು, ಹೀಗೆ ಆರಾತ್ರಿ ನದಿಯಲ್ಲಿ ಸ್ವಲ್ಪ ದೂರ ಪ್ರಯಾಣಮಾಡಿದ ಬಳಿಕ ತನ್ನ ಬಳಿಯಲ್ಲಿದ್ದ ಚಮುಕಿ ಕನ್ನು ತೆಗೆದು ಅಗ್ನಿಯನ್ನುಂಟು ಮಾಡಿ'ಮೂರ್ಛ ಬಿದ್ದಿದ್ದ ಎರಡು ವಿಗ್ರಹಗಳನ್ನೂ ನೋಡಿ ಇಂದಿರಾ ದುರ್ಗಾದಾಸರೆಂದು ತಿಳಿದು ತಾವು ಕೋರಿದುದಕ್ಕೂ ಅಧಿಕಲಾಭವಾಯಿ ತಂದು ಸಂತೋಷಿಸಿ ಮುಂದೆ ಹೊರಟರು. ಅನಂತರ-ಉಪಚಾರಮಾಡು ತಿದ್ದ ಪುರುಷನು ದೋಣಿಯನ್ನು ನಡೆಯಿಸುತ್ತಿದ್ದವನನ್ನು ಕುರಿತು:- “ಅಹಾ! ನಾನು ಮಾಡುವ ಕಾರ್ಯಗಳು ಇನ್ನೂ ಅನೇಕವಾಗಿರುವುವು. ಇನ್ನು ನಾನು ನಿನ್ನೊಡನೆ ಒರಲಾರೆನು, ನಾವು ಇಲ್ಲಿ ನಗರವನ್ನು ದಾಟಿ ಬಹು ದೂರ ಬಂದಿರುವೆವು, “ ನೀನಿರುವ ಗ್ರಾಮವು ಇಲ್ಲಿಗೆ ಸಮೀಪ ವಾಗಿಯೇ ಇರುವುದು, ಇನ್ನು ನೀನು ಇವರಿಬ್ಬರನ್ನೂ ಕರೆದುಕೊಂಡು ಜೋಗಿ ಕಾಪಾಡುತ್ತಿರು” ಎನ್ನ ಲಾತನು, ಅತ್ಯಂತ ಕೃತಜ್ಞತೆಯಿಂದ ಕಿತ ಸನ್ನು ವಂದಿಸಿ ಹೊರಡಲನುವುತಿಸಲು, ಆತನು ದೋಣಿಯಿಂದಿಳಿದು ಪಕ್ಕ ದಲ್ಲಿದ್ದ ಗುಡ್ಡವನ್ನು ಹತ್ತಿ ಎಲ್ಲಿಗೋ ಹೊರಟು ಹೋದನು. ದೋಣಿ ಯನ್ನು ನಡೆಸುತ್ತಿದ್ದವನು ಬಹು ಜಾಗರೂಕತೆಯಿಂದ ನಡೆಯಿಸುತ್ತ ಸ್ಥನ, ಸ್ವಲ್ಪ ಹೊತ್ತಿನೊಳಾಗಿ ಇಂದಿರಾ ದುರ್ಗಾದಾಸರು' ಮಳೆ;

  • * *

4,