ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೮ ಕರ್ಣಾಟಕನಂದಿನಿ. ವೃತ್ತಾಂತವನ್ನು ಸಮಗ್ರವಾಗಿ ಹೇಳುವೆನು, ಕೇಳು. ಎಂದು ಚಂದ್ರಾ ವತಿಯನ್ನು ಕರೆತರಲು ಬಂದುದು ಮೊದಲು, ಫಕೀರನ ಸಹಾಯವನ್ನು ಪಡೆದು ಇಂದಿರಾ-ದುರ್ಗಾದಾಸರ `ಪ್ರಾಣಗಳನ್ನು ಕಾಪಾಡಿ ಕರೆತಂದ ವರೆವಿಗೂ ವಿವರಿಸಿದನು, ಅದನ್ನು ಕೇಳಿ ದುರ್ಗಾದಾಸನು ವಿಸ್ಮಯ `ಕುತೂಹಲಗಳಿಂದ.ನಯನಪಾಲ ! ಆಪದ್ಬಂಧುವಾದ ಆ ಫಕೀರನು 'ಶಗಳೆಲ್ಲಿರುವನು ?” ಎಂದನು.. ನಯನ: ನಿಮ್ಮಿಬ್ಬರನ್ನೂ ನನಗೊಪ್ಪಿಸಿ ಆತನು ಈಗಲೇ ದೋಣಿಯಿಂದಿಳಿದು ಹೊರಟುಹೋದನು. ದುಗಾ:-“ಅಯ್ಯೋ! ನಮಗಿಷ್ಟು ಉಪಕಾರಮಾಡಿದ ಆ ಪುಣ್ಯಾತ್ಮನನ್ನು ನೋಡುವ ಭಾಗ್ಯವೂ ನಮಗಿಲ್ಲವಾಯಿತೇ ?” ಎಂದು ತುಂಬ ವ್ಯಥೆ ಪಟ್ಟನು. ಇಂದಿರೆಯನ್ನು ನದಿಯಲ್ಲಿ ಹಾಕಿಸಿ ಕೊಲ್ಲಿಸಿದ ವರ್ತಮಾನವು ದುರ್ಗಾದಾಸನಿಗೆ ತಿಳಿದರೆ ಆತನಿಂದ ಪ್ರತೀಕಾರವಾಗದಿರಲಾರದೆಂದು ಶಂಕಿಸಿ, ದೂರ್ತಿಯಾದ ರೋಷನಾರೆಯು ಫರುಕಪೈರನ ಮೂಲಕ ಕಾರಾಗೃಹದಲ್ಲಿ ನಿದ್ರಿತನಾಗಿದ್ದ ದುರ್ಗಾದಾಸನನ್ನೂ ಹಿಡಿತರಿಸಿ, ಆತನ ಕಣ್ಣು ಗಳನ್ನು ಕಟ್ಟಿಸಿ, ಇಬ್ಬರೂ ಸಾಯಲೆಂದಿಬ್ಬರನ್ನೂ ಒಟ್ಟಿಗೆ ನದಿ ಯಲ್ಲಿ ಬಿಟ್ಟಳು, ಇಬ್ಬರೂ ಏಕಕಾಲದಲ್ಲಿ ನದಿಗೆ ಕೆಡುಹಲ್ಪಟ್ಟುದು ಕೂಡ ಶುಭ ಪ್ರದವೇ ಆಯಿತು. ಇರಲಿ, ನಯನಪಾಲನು ಪೂರ್ವದ ದುಸ್ವಭಾವ ವನ್ನು ಬಿಟ್ಟು ಪಶ್ಚಾತ್ತಾಪಪಡುತ್ತಿರುವುದನ್ನೂ ತಮ್ಮ ವಿಷಯದಲ್ಲಿ ಆತನು ತೋರಿಸುತ್ತಿದ್ದ ಗೌರವನ್ನೂ ನೋಡಿ ದುರ್ಗಾದಾಸನು ಪಠಮಾ ನಂದದಿಂದ ಆತನನ್ನು ಬಹುವಿಧವಾಗಿ ಅಭಿನಂದಿಸಿದನು, ಆ ಬಳಿಕ ನಯನಪಾಲನು ಶ್ರಾಂತರಾಗಿದ್ದಾ ಅಣ್ಣ ತಂಗಿಯರಿಬ್ಬರನ್ನೂ ಆ ರಾತ್ರಿ ತನ್ನ ಗ್ರಾಮಕ್ಕೆ ಕರೆದೊಯ್ದು ಆದರದಿಂದ ಉಪಚರಿಸಿ ಮರುದಿನವೇ ಆಟಪರ್ವತವನ್ನು ಕುರಿತು ಪ್ರಯಾಣಮಾಡಿದರು.