ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೯ ವಿಮಲಾದೇವಿ. ಮುವ್ವತ್ತಮೂರನೆಯ ಪ್ರಕರಣ (ಜೋಹರ್.) ರೂಪನಗರವನ್ನು ಮುತ್ತಿದ್ದ ಸಾದತಖಾನನು ವಿಜಯಸಿಂಹನ ಸಹಾಯಕ್ಕಾಗಿ ರಾಜಪುತ್ರರಾರಾದರೂ ಬರುವರೇನೆಂದು ಕ್ಷಣಕ್ಷಣದ ಇಯ ಭಯ ಪಡುತ್ತಿದ್ದನು, ಈ ಕಾರಣದಿಂದ ಆತನು ತನ್ನ ಭಟರನ್ನು ನಾಲ್ಕು ದಿಕ್ಕುಗಳಿಗೆ ಕಳುಹಿಸಿ, ಹೊಸ ಸಮಾಚಾರಗಳನ್ನು ತಿಳಿದು ಕೊಳ್ಳುತ್ತಿದ್ದನೆಂಬುದು ಈವರೆಗೆ ನಮಗೆ ತಿಳಿದೇ ಇರುವುದು, ಬಾದ ಶಹನು ಸೇನಾಸಮೇತನಾಗಿ ಎಂದಿಗೆ ಬರುವನೆಂದು ಇದಿರು ನೋಡುತ್ತ ಒಂದು ಕ್ಷಣವನ್ನು ಯುಗದಂತೆ ಕಳೆಯುತ್ತಿದ್ದನು, ಒಂದುದಿನ ಆತನು, 1( ಔರಂಗಜೇಬನು ಸೇನಾಸಮೇತನಾಗಿ ಬರುತ್ತಿರುವನು. ಇನ್ನು ಮೇಲೆ ನಿನ್ನ ಪ್ರಾಣಗಳು ನಿಲ್ಲಲಾರವು, ಈಗಲೇ ವಿಮಲಾದೇವಿಯನ್ನೊಪ್ಪಿಸಿ ಸಂಧಿ ಮಾಡಿಕೊಳ್ಳಬೇಕು.” ಎಂದು ವಿಜಯಸಿಂಹನಿಗೆ ವರ್ತಮಾನವನ್ನು ಹೇಳಿ ಕಳುಹಿದನು, ಆಗ ಆ ರಾಜಶ್ರೇಷ್ಠನು ಆ ವಾರ್ತೆಯನ್ನು ತನ್ನ ಸೈನಿಕ ರಿಗೆ ತಿಳಿಸಿ, “ವಿಶ್ವಸನೀಯರೇ ! ನೀವು ನಿಜವಾದ ರಜಪೂತವೀರಪುರುಷ ರಾಗಿದ್ದಲ್ಲಿ ಪೌರುಷವನ್ನು ವಹಿಸಿ ಪ್ರಾಣಗಳಮೆಲೆ ಆಶೆಯನ್ನು ತೊರೆದು ಮಹಮ್ಮದೀಯರೊಡನೆ ಹೋರಾಡಿರಿ.” ಎಂದನು, ಸೈನಿಕರು ಆತನ ಆಜ್ಞೆಯನ್ನು ಶಿರಸಾವಹಿಸಿ ನೂತನೋತ್ಸಾಹದಿಂದ ಉಬ್ಬಿದವರಾಗಿ ಕೋಟೆಯ ಬುರುಜುಗಳನ್ನು ಹತ್ತಿ ಕತ್ತಿ, ಪಿರಂಗಿ, ತುಪಾಕಿ ಮೊದಲಾ ದವುಗಳಿಂದ ಸಾದತಖಾನನು ಕಳುಹಿದ ಸೈನ್ಯಕ್ಕೆ ಪ್ರತ್ಯುತ್ತರವನ್ನು ಕೊಡ ಲಾರಂಭಿಸಿದರು: ಅಂದು ಮೊಗಲರು ರಾಜಪುತ್ರರ ಕೋಲಾಹಲವನ್ನು ತಾಳದೆ ಹೋದರು. ಮೊದಲೇ ಸಾದತಖಾನನ ಸೈನ್ಯವು ಸ್ವಲ್ಪ ; ಅದರ ಳಿಯ ನಿದ್ರಾಹಾರಗಳಿಲ್ಲದೆ, ಆರು ತಿಂಗಳಿಂದಲೂ ಕೋಟೆಯನ್ನು