ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೦ ಕರ್ಣಾಟಕನಂದಿನಿ. ಮುತ್ತಿ ಬಲಹೀನರಾಗಿದ್ದರು. ಆದುದರಿಂದ ಅಂದು ಮಹಮ್ಮದೀಯರು ಸಂಪೂರ್ಣವಾಗಿ ಅಪಜಯವನ್ನು ಹೊಂದಿದರು, ಸಾದತಖಾನನು ಅತಿ ಚತುರನಾಗಿದ್ದು ದರಿಂದ ತಕ್ಷಣವೇ ಯುದ್ಧವನ್ನು ನಿಲ್ಲಿಸಬೇಕೆಂದು ತನ್ನ ಸೇನಾಪತಿಗೆ ಅಪ್ಪಣೆಯನ್ನಿತ್ತನು. ತನ್ನ ಸೇನೆಯು ಪೂರ್ಣವಾಗಿ ಸೋತು ಹೋದುದರಿಂದಲೂ ಬಾದ ಶಹನು ಸೇನಾಸಮೇತನಾಗಿ ಬಾರದೆ ಹೋದುದರಿಂದ ರಾಜಪ್ರತ್ರರು ಯಾವ ಕ್ಷಣದಲ್ಲಿ ಬಂದು ತನ್ನ ಮೇಲೆ ಬೀಳುವರೋ ಎಂಬ ಭೀತಿಯಿಂ ದಲೂ ಆತನ ಹೃದಯವು ಅಲ್ಲಕಲ್ಲೋಲವಾಗಿದ್ದಿ ಕು. ಆದರೂ ಬುದ್ಧಿ ಶಾಲಿಯಾದ ಸಾತಖಾನನು ಉಪಾಯದಿಂದಲೇ ಗೆಲ್ಲಬೇಕೆಂದು ಯೋ ಚಿಸಿ ಬಾದಶಹನು ಸೇನಾಸಮೇತನಾಗಿ ಬರುತ್ತಿರುವನೆಂದೂ ವಿಜಯಸಿಂ ಹನೂ ಆತನ ಸೈನ್ಯವೂ ಹೆದರಿರುವರೆಂದೂ ವದಂತಿಯನ್ನು ಹುಟ್ಟಿಸಿದನು. ಇದನ್ನು ತಿಳಿದು ವಿಜಯಸಿಂಹನು ತನ್ನ ಸೈನ್ಯಕ್ಕೆ ಮತ್ತಷ್ಟು ಧೈರ್ಯವನ್ನು ಕೊಡು ಅತ್ಯಂತ ಜಾಗರೂಕನಾಗಿದ್ದನು. ಇಷ್ಟರಲ್ಲಿ ಸೂರ್ಯನು ಅಸ್ತಮಿಸಿದುದರಿಂದ ಜಗತ್ತೇ ಅಂಧಕಾರಮಯವಾಯಿತು, . ಆ ರಾತ್ರಿ ಸಾದತಖಾನನು ಸೈನ್ಯವನ್ನು ಕೆಲವು ಭಾಗಗಳಾಗಿ ಮಾಡಿ ಮೂರು ನಾಲ್ಕು ಮೈಲಿಗಳ ವಿಸ್ತಾರವುಳ್ಳ ಪ್ರದೇಶದಲ್ಲಿ ಅಲ್ಲಲ್ಲಿ ಗುಂಪು ಗುಂಪಾಗಿರಿಸಿ, ತಾನು ಮಾತ್ರ ಕೆಲವು ಸೈನ್ಯದೊಡನೆ, ಪಟ್ಟಣದ ಸವಿಾಪದಲ್ಲಿಯೇ ಕಾದಿದ್ದ ನು, ಸಹಾಯಾರ್ಥವಾಗಿ ರಾಜಪುತ್ರರು ಯಾವ ವಿಕ್ಕಿನಿಂದ ಬಂದರೂ ಅವರ ಸಹಾಯವು ಸಕಾಲದಲ್ಲಿ ವಿಜಯ ಸಿಂಹನಿಗೆ ದಗದಂತೆ ತಡೆಯಬಹುದೆಂದೊ ಸೈನ್ಯವೆಲ್ಲವೂ ಒಂದೇ ಕಡೆಯಲ್ಲಿದ್ದರೆ ಕನ್ನ ರಹಸ್ಯವು ಹೊರಬೀಳಬಹುದೆಂದೂ ಈ ಉಪಾಯವನ್ನು ತೆಗೆದನು, ಮತ್ತು ಅಡಿಗಡಿಗೆ ರಣದುಂದುಭಿಗಳನ್ನೂ ಜಯಭೇರಿಗಳನ್ನೂ ಹೊಡೆಯಿಸುತ್ತ ಅತ್ಯಂತ ಅಟ್ಟಹಾಸಗೈಯುತ್ತಿದ್ದನು. ಆತನ ಉದ್ದೇಶಕ್ಕೆ ಅನುಸಾರವಾಗಿ ರೂಪನಗರದ ಸೈನಿಕರು ಬಾದಶಹನು ಬಲವಾದ ಸೈನ್ಯದೊಡನೆ ಬಂದಿರು