ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وعد ಕರ್ಣಾಟಕನಂದಿನಿ. ನವೇ ಕಾಣಬರಲಿಲ್ಲವಾದುದರಿಂದ ಇನ್ನಾತನ ಸಹಾಯವಾಗುವಂತಿಲ್ಲ ವೆಂಬ ನಿರಾಶೆಯ ವ್ಯಕ್ತವಾಗುವಂತಿದ್ದಿ ತು, ತನ್ನ ಮನಸ್ಸಿನ ಉದ್ವೇಗ ವನ್ನು ಸಹಿಸಲಾರದೆ, ರಜಪೂತರನ್ನು ಧಿಕ್ಕರಿಸುತ್ತಿದ್ದಳು ಪದ್ಯೆಯು ವಿಮಲೆಯನ್ನು ಅನವರತವೂ ಎಡೆಬಿಡದೆ ಅನೇಕ ವಿಧದಿಂದ ಸಮಾಧಾನ ಪಡಿಸುತ್ತಿದ್ದಳು. ಆ ರಾತ್ರಿಯೆಲ್ಲ ಇಬ್ಬರೂ ನಿದ್ರೆಯಿಲ್ಲದೆ ಭೀತಿಯಿಂದಲೂ ಶಕದಿಂದಲೂ ಕಳವಳದಿಂದಲೂ ಮು೦ದಿನ ತನ್ನ ಪರಿಣಾಮ ವೇನೆಂದು ವಿಚಾರಮಾಡುತ್ತಿದ್ದರು. ಬರುತ ಬರುತ್ತ ಬೆಳಗಿನ ಜಾವವಾಯಿತು, ಆದರೆ ಇನ್ನೂ ಕತ್ತಲೆಯು ಪೂರ್ಣವಾಗಿ ಹೋಗಿರಲಿಲ್ಲ. ಆ ಸಮಯದಲ್ಲಿ ಉತ್ತರ ಭಾಗದಿಂದ ಕೆಲವು ಸೈನ್ಯವು ಅಸಂಖ್ಯಾತವಾದ ದೀಪಗಳಿಂದ ಕೂಡಿ ರೂಪನಗರದ ಕಡೆಗೆ ಬರುತ್ತಿದ್ದಿ ತು, ಸೈನಿಕರ ಸಂಖ್ಯೆ ಮಿತಿಮೀರಿದ್ದಿ ತು, ವಿಜಯಸಿಂಹನೂ ವಿಮಲೆಯ ಪದ್ಮಯ ಆ ಸೈನ್ಯವನ್ನು ನೋಡಿ ಇಲ್ಲಿನಗರದಿಂದ ಸೈನ್ಯವು ಬರುತ್ತಿರುವುದೆಂದು ನಿಶ್ಚಯಿಸಿದರು. ಶತ್ರುಸೈನ್ಯವು ಅಸಂಖ್ಯಾತವಾಗಿರು ವುದೆಂದೂ ತಮ್ಮ ಸೈನ್ಯವು ಶತೃ ಸೈನ್ಯವನ್ನು ತಡೆಯಲಾರದೆಂದೂ ಈ ಸಾರಿ ತಮಗೆ ಅಪಜಯವಾಗುವುದರಲ್ಲಿ ಸಂದೇಹವಿಲ್ಲವೆಂದೂ ನಿರ್ಧರಿಸಿದರು. ಮೊಗಲರ ಸೇನೆಯು ದುರ್ಗವನ್ನು ಪ್ರವೇಶಿಸುವುದಕ್ಕಿಂತ ಮೊದಲೇ ಸ್ತ್ರೀಯರ ಮಾನವನ್ನು ಕಾಪಾಡುವ ಪ್ರಯತ್ನಗಳನ್ನು ಮಾಡಬೇಕೆಂದು ವಿಜಯಸಿಂಹನು ವಿನುಲೆಯನ್ನು ಸವಿಾಪಿಸಿ ಧೈರ್ಯದಿಂದ_“ಅಮ್ಮಾ, ವಿಮಲಾ! ಇಂದಿಗೆ ನಮಗೂ ರೂಪನಗರ ಋಣವು ತೀರಿತು, ಬಾದ ಶಹನು ಪ್ರಬಲ ಸೇನಾಸಮೇತನಾಗಿ ಬಂದಿರುವನು, ಇನ್ನೂ ಇಲ್ಲಿ ನಗರ ದಿಂದ ಸಾವಿರಾರು ಸೈನಿಕರು ಬರುತ್ತಲೇ ಇರುವರು, ಇಷ್ಟು ದಿನಗ ೪೦ದಲೂ ಶತ್ರುಗಳೊಡನೆ ಹೋರಾಡಿ ಶ್ರಾಂತರಾಗಿರುವ ನಮ್ಮ ಸೈನಿಕರು ಆ ದೊಡ್ಡ ಸೈನ್ಯವನ್ನೆದುರಿಸುವುದು ಅಸಾಧ್ಯವು, ನಮಗೆ ಜಯವೆಂಬುದು ಇನ್ನು ಸ್ವಷ್ಟ ಪ್ರಾಯವೇ ಸರಿ. ರಾಜರತ್ರರಲ್ಲಿ ಯಾರಾದರೂ ಸಹಾಯ