ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨೭೫ ಸತೊಡಗಿದನು. ಆಗ ಅಂತಃಪುರದ ನಾರಿಯರೆಲ್ಲರೂ ತಮಗೆ ಇಷ್ಟವಾದ ಆಭರಣಗಳನ್ನು ಧರಿಸಿ, ಹರಿದ್ರಾ ಕುಂಕುಮಗಳನ್ನು ಪೂಜಾದ್ರವ್ಯಗಳೊಡನೆ ತಟ್ಟೆಗಳಲ್ಲಿರಿಸಿಕೊಂಡು ಬಂದು ಅಗ್ನಿ ಯ ಸುತ್ತಲೂ ನಿಂತರು. ವಿಮಲಾ ದೇವಿಯು ಮುಂದಾಗಿ ವೀತಿಹೋತ್ರನ ಬಳಿಯಲ್ಲಿ ನಿಂತು ರಜಪೂತರಮಣಿ ಯರೆಲ್ಲರೂ ಕೇಳುವಂತೆ ಹೀಗೆ ಹೇಳಿದಳು. “ ಓ ನನ್ನ ಪ್ರಿಯ ಸೋದರಿಯರೇ ! ನೀವೆಲ್ಲರೂ ನನ್ನ ದೆಸೆಯಿಂದ ಅತ್ಯಂತ ಕ್ಷೇಶಗಳನ್ನು ಸಹಿಸಬೇಕಾ .ತು: ಆದರೂ ನೀವು ನನ್ನನ್ನು ತಿರಸ್ಕರಿಸದೆ ನನಗುಂಟಾಗಿರುವ ಅಪತ್ತಿ ಗಾಗಿ ನೀವೆಲ್ಲರೂ ಸಮದುಃಖಿನಿಯರಾಗಿ ನಿಮ್ಮ ಅನುಕಂಪನದಿಂದ ನನ್ನನ್ನು ಎಷ್ಟೋ ಸಮಾಧಾನಪಡಿಸಿಗುವಿರಲ್ಲದೆ, ಇಂದು ನಮ್ಮ ಅಂತಿಮಧೇಯ ವಾದ ಅಗ್ನಿ ಪ್ರವೇಶಕ್ಕೆ ಕೂಡ ಸಂತೋಷ ದಿಂದ ಬಂದಿರುವಿರಿ. ಈಗ ನಿಮಗೆ ನಾನೇನು ಹೇಳಬೇಕೋ ತಿಳಿಯೆನು. ಇಷ್ಟು ಹೇಳಬಲ್ಲೆ, ಈಗ ನಮ್ಮೆ ರೂಪನಗರಕ್ಕೆ ಬಂದಿರುವ ಆಪತ್ತಿನಂತೆ ಹಿಂದೆಯೂ ನಮ್ಮ ರಜ ವೂ ಸಾಧ್ಯಯರ ಮಾನಹರಣಕ್ಕೆಂದು ಎಷ್ಟೋ ಆಪತ್ತುಗಳು ಬಂದಿದ್ದವು. ಆದರೂ ನಮ್ಮ ಪೂರ್ವಜರಾದ ಆ ಮಹಾತಾಯಿಯರು ತಮ್ಮ ಮಾನ ಧನಗ ಳನ್ನು ಕಳೆದುಕೊಳ್ಳದೆ ಪರಮ ಪವಿತ್ರ ಮೂರ್ತಿಯಾದ ಅಗ್ನಿ ಭಗವಾನನ ಸಹಾಯದಿಂದ ನಮಗೆಲ್ಲರಿಗೂ ಅತ್ಯುತ್ತಮವಾದ ಕರ್ತವ್ಯವನ್ನು ಬೋಧಿಸಿ ಕೀರ್ತಿಶೇಷರಾಗಿರುವರು. ಈಗ ನಾವೂ ಕೂಡ ಅವರ ಅನುಗಾಮಿಗಳಾಗಿ ಅನನ್ಯ ಶರಣ ಭಾವದಿಂದ ನಮ್ಮಾ ನಶ್ವರರೇಷೆಗಳನ್ನು ಅಗ್ನಿ ಪುರುಷನಿಗೊ ಪ್ಪಿಸಿ, ನಮ್ಮ ಮಾನಧನಗಳನ್ನು ಕಾಪಾಡಿಕೊಳ್ಳಬೇಕಾದುದರಿಂದ ಈ ಸಮ ಯದಲ್ಲಿ ನಮ್ಮ ಮನಸ್ಸು ಆನಂದದಿಂದಿರುವಂತೆ ನಾವು ನಮ್ಮ ಪತಿದೈವ ವನ್ನೂ ಪರಮಾತ್ಮನನ್ನೂ ಜಗದಂಬೆಯನ್ನೂ ಸ್ಮರಿಸುತ್ತೆ ಅಗ್ನಿ ಯಲ್ಲಿ ಪ್ರವೇ ಶಿಸುವ, 13 ಕಮಲಾದೇವಿಯ ಪ್ರಾರ್ಥನೆಯಿಂದ ರಾಜಪುತ್ರ ಸ್ತ್ರೀಯರೆಲ್ಲರೂ ಅತ್ಯಂತ ಉತ್ಸಾಹಿತರಾಗಿ ಅಗ್ನಿದೇವನನ್ನು ಸ್ತುತಿಸಿ ಅಗ್ನಿ ಪ್ರವೇಶಕ್ಕೆ ಸಿದ್ದ