ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೬ ಕರ್ನಾಟಕ ನಂದಿನಿ ರಾದರು. ಅಷ್ಟರಲ್ಲಿಯೇ ಅಶ್ವಾರೂಢನಾಗಿ ವಿಜಯೋತ್ಸಾಹದಿಂದ ತೇಜಃ ಪುಂಜನಾಗಿ ಪ್ರಕಾಶಿಸುತ್ತ ಆತುರಗಮನದಿಂದ ರಜಪೂತರಮಣಿಯರ ಅಗ್ನಿ ಪ್ರವೇಶವನ್ನು ತಡೆಯಲು ಬಂದ ರಾಜಸಿಂಹನು, ಅಗ್ನಿ ಪ್ರವೇಶಕ್ಕೆ ಮುಂ ದಾಗಿ ನಿಂತಿರುವ ವಿಮಲೆಯನ್ನೂ ಅವಳ ಮಾರ್ಗವನ್ನೇ ಅನುಸರಿಸುತ್ತಿರುವ ರಜಪೂತರಮಣಿಯರನ್ನೂ ನೋಡಿ ಘಟ್ಟಿಯಾಗಿ ಕೂಗಿ ಹೇಳಿದನು. * ಸಾಹಸವನ್ನು ನಿಲ್ಲಿಸಿರಿ, ರಜಪೂತರೇ ವಿಜಯಿಗಳಾದರು, ಮೊಗಲರು ಪರಾಜಿತರಾದರು. ವಿಜಯಸಿಂಹರಾಜನು ವಿಜಯೋತ್ಸಾಹದಿಂದ ಬರ ತಿರುವನು, ನೋಡಿರಿ, ರಜಪೂತ ಸೈನ್ಯದ ಆನಂದ ಕೋಲಾಹಲಗಳನ್ನು .” ಅಮೃತೋಪಮವಾದೀ ವಾಕ್ಯದಿಂದ ವಿಮಲಾದೇವಿಯೂ ಇತರ ರಜಪೂತ ರಮಣಿಯರೂ ವಿಸ್ಮಿತರಾಗಿ ತಲೆಯೆತ್ತಿ ತಿರುಗಿ ನೋಡಿದರು ; ರಾಜಸಿಂಹನು ಅಶ್ವಾರೋಹಿಯಾಗಿ ನಿಂತು, ಅಗ್ನಿಯನ್ನು ಆರಿಸಲು ಆಜ್ಞೆ ಮಾಡುತ್ತಿದ್ದುದನ್ನೂ ವಿಜಯಸಿಂಹನು ರಾಜಸಿಂಹನ ಬಳಿಗೆ ಆನಂದದಿಂದ ಬರುತ್ತಿದ್ದುದನ್ನೂ ಕಂಡರು ; ಮನಸ್ಸಿನಲ್ಲಿಯೇ ಭಗವಂತನನ್ನು ಬಹುಪರಿ ಯಾಗಿ ಸ್ತುತಿಸಿ, ರಾಜಸಿಂರನಿಗೆ ಧನ್ಯವಾದವನ್ನೊಪ್ಪಿಸಿದರು. ವಿಮಲೆಯ ಆನಂದಕ್ಕೆ ಪರಿಮಿತಿಯೇ ಇಲ್ಲವಾಯಿತು. ಪದ್ಮಯು ಸಮಾಧಾನಪಟ್ಟು ರಾಜಸಿಂಹನಿಗೆ ರಜಪೂತ ರಮಣಿಯರ ಕೃತಜ್ಞತೆಯನ್ನು ಸಲ್ಲಿಸಿದಳು. ಅಷ್ಟರಲ್ಲಿ ಅಲ್ಲಿಗೆ ವಿಜಸಿಂಹನ ಬಂದು ಸೇರಿದನು. ರಾಜಸಿಂಹನು ಸಕಾ ಲದಲ್ಲಿ ಬಂದು ತನಗೆ ಸಹಾಯಮಾಡಿ ಮೊಗಲರನ್ನು ಪರಾರ್ಜಿರನ್ನಾಗಿ ಮಾಡಿದ ರೀತಿಯನ್ನು ವಿವರಿಸಿದನು. ರಒ ಪೂತ ರಮಣಿಯರೆಲ್ಲರೂ ರಾಜ ಸಿಂಹನನ್ನು ಕೊಂಡಾಡಿದರು. ಉತ್ತರಕ್ಷಣದಲ್ಲಿಯೇ ಅಗ್ನಿ ಯು ಆರಿಸ ಲ್ಪಟ್ಟಿತು, ರಜಪೂತ ರಮಣಿಯರು ಸ್ವಸ್ಥಾನಗಳನ್ನು ಸೇರಿದರು, ವಿಜಯ ಸಿಂಹನು ವಿಮಲೆಯ ಸಂರಕ್ಷಣೆಯ ಭಾರವನ್ನು ರಾಜಸಿಂಹನಿಗೇ ವಹಿಸಿ ದುದರಿಂದ, ರಾಜಸಿಂಹನು ವಿಜಯಸಿಂಹನ ಅಭಿಮತದಂತೆ ವಿಮಲೆಯನ್ನೂ ಪದ್ಯೆ ಯನ್ನೂ ತನ್ನ ರಾಜಧಾನಿಗೆ ಕರೆದೊಯ್ದನು.