ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨೮೧ “ ಈಗ ನಾನು ಮಾಡಬೇಕಾದುದೇನು ? ಸಕಲಸೇನಾಸಮೇತ ನಾಗಿ ಬಂದಿರುವ ಬಾದಶಹನೂ ಇಂದಿರಾ, ದುರ್ಗಾದಾಸ, ಅಜಿತಸಿಂಹಕು ಮಾರ ಮೊದಲಾದವರೂ ಈಗ ನನ್ನ ಕೈಯಲ್ಲಿ ಸಿಕ್ಕಿರುವರು. ಈಗ ನಾನು ಯಾರಿಗೆ ಬೇಕಾದರೂ ಮೋಸ ಮಾಡಬಹುದು ; ಯಾವಕಡೆಗೆ ಹೊರಳ ಬೇಕು ?” ಹಾ, ಇದೇನನರ್ಥಚಿಂತೆ! ನನ್ನನ್ನು ಬಲಾತ್ಕಾರವಾಗಿ ಕಾರಾಗ್ರ ಹದಲ್ಲಿರಿಸಿದ ಔರಂಗಜೇಬನನ್ನು ಮೋಸಪಡಿಸಬೇಕೆಂದು ಬಂದ ನಾನು ಈಗ ಯೋಚಿಸುವುದೇನು ? ಆದರೆ, ಔರಂಗಜೇಬನು ನನಗೆ ದ್ರೋಹಮಾಡಿದನೆ ? ಆತನ ಆಜ್ಞಾನುವರ್ತಿಯಾಗಿ ನಡೆಯಬೇಕಾಗಿದ್ದ ನಾನು ನಿಯಮಿತ ಕಾರ್ಯ ವನ್ನು ಮಾಡದೆಹೋದುದಕ್ಕೂ ಆತನಲ್ಲಿ ಸುಳ್ಳು ಹೇಳಿದುದಕ್ಕೂ ನನಗೆ ಶಿಕ್ಷೆಯಾಗುವುದು ನ್ಯಾಯವೇ ಸರಿ, ಜೋಧಪುರರಾಜ್ಯಸಂಪಾದನಕ್ಕಾ ಗಿಯೇ ನಾನು ಮೊದಲಿಂದಲೂ ಶ್ರಮ ಪಡುತ್ತಿದ್ದನು , ಈಗ ನನ್ನ ಉದ್ದೇಶ ಸಿದ್ಧಿಯಾಗುವ ಸಮಯವೊದಗಿದಂತೆ ಅವರೆಲ್ಲರೂ ಅಚಲೇಶ್ವರಾಲಯದಲ್ಲಿ ರುವ ಸಂಗತಿ ತಿಳಿದೇ ಇರುವುದು ; ಇಷ್ಟೇ ಅಲ್ಲ, ಇಂದೋ ನಾಳೆಯೋ. ರಾಜಸಿಂಹನ ವಿಮಲೆಯೂ ನನ್ನ ತಂತ್ರಜಾಲಕ್ಕೆ ಸಿಕ್ಕಿ ಬೀಳಬಹುದು. ಇವರೆಲ್ಲರನ್ನೂ ಹಿಡಿದು ಬಾದಶಹನಿಗೆ ಒಪ್ಪಿಸಿದರೆ ನನಗೆ ನಿಃಸಂದೇಹ ವಾಗಿ ಜೋದಪುರರಾಜ್ಯವು ಲಭಿಸಬಹುದಲ್ಲವೆ ? ಈಗೇನು ಮಾಡಲಿ ? ರಾಜ್ಯಲೋಭದಿಂದ ರಾಜಪುತ್ರರನ್ನು ಮೋಸಪಡಿಸಬೇಕೋ ? ಅಥವಾ ಸ್ವಮತಾಭಿಮಾನಿಯಾಗಿ ಧೂರ್ತ ಅಲಂಫೇರ್‌ ಬಾದಶಹನನ್ನು ಮೋಸಪಡಿ ಸಬೇಕೋ?.............” ನಯನಪಾಲನು ಬಹುದೂರ ಆಲೋಚಿಸಿದನು; ಬಗೆಹರಿಯಲಿಲ್ಲ. ಕಡೆಗೆ ಪರ್ವತವನ್ನಿಳಿದು ಮೊದಲು ತಾನು ಕುದುರೆಯನ್ನು ಕಟ್ಟಿದ್ದ ಬಳಿಗೆ ಬಂದು ನೋಡಿದನು, ಕುದುರೆಯಿರಲಿಲ್ಲ ; ಸುತ್ತಮುತ್ತಲೂ ಹುಡಿಕಿದನು, ಕಾಣಲಿಲ್ಲ ಶಂಕಿತನಾಗಿ ಹುಡುಕುತ್ತ ಮುಂದೆ ಹೊರಟನು ; ಸ್ವಲ್ಪ ದೂ ರದಲ್ಲಿ ರಾಜಪುತ್ರನೋರ್ವನು ಅಶ್ವಾರೂಢನಾಗಿ ಬರುತ್ತಿದ್ದುದನ್ನು ಕಂಡ (S6.