ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೨ ಕರ್ಣಾಟಕ ನಂದಿನಿ ತತ್‌ಕ್ಷಣವೇ ಒಂದು ಕಡೆಯಲ್ಲಿ ಮರೆಯಾಗಿದ್ದು, ಅಶ್ವಾರೋಹಿಯು ಸಮೀ ಪಿಸಿದ ಕೂಡಲೆ ಅವನನ್ನು ಅಡ್ಡಗಟ್ಟಿ-“ಎಲಾ, ನೀನಾ. ? ಕಳ್ಳನಂತೆ ಕಾಣುವೆ, ನನ್ನ ಕುದುರೆಯನ್ನೇರಲು ಕಾರಣವೇನು ? ನಿಜವನ್ನು ಹೇಳಿದರೆ ಬದುಕುವೆ ; ಇಲ್ಲವಾದರೆ......” ಅಶ್ವಾರೋಹಿಯದಕ್ಕೆ ನ ಕೈಯ್ಯಾ! ಅವಸರ ಪಡಬೇಡ, ಶಿವ ಸಿಂಗನು ಎಂದಿಗೂ ಕಳ ನೆನ್ನಿ ಸುವನಲ್ಲ. ಇರಲಿ, ನಿನ್ನನ್ನು ಹಿಂದೆ ನೋಡಿ ರುವ ನೆನಪಿದೆ. ನೀನಾರು ಹೇಳ” ಎಂದನು. ನಯನ:-ನೀನೇ ಶಿವಸಿಂಗನಾಗಿಲ್ಟರೆ ಸಂತೋಷ ನನ್ನ ವೃತ್ತಾಂ ತವನ್ನು ತಿಳಿಯಬೇಕಾದರೆ, ಪರ್ವತದ ಮೇಲಿರುವ ದುರ್ಗಾ ವಾಸ-ಇಂದಿರಾ ದೇವಿಯರ ಬಳೆಯನ್ನು ಸೇರಿ, ತತ್‌ಕ್ಷಣವೇ ದುರ್ಗಾದಾಸನನ್ನು ಇಲ್ಲಿಗೆ ಕರೆ ದುಕೊಂಡು ಬಾ' ನಯನಪಾಲನ ಮಾತನ್ನು ಕೇಳಿ, ಇ೦ದಿರಾ- ದುಗಾ' `ದಾಸರು ಬಂದಿ ರವರೆಂಬ ಶುಭವರ್ತಮಾನವನ್ನೆ ತಿಳಿದು ಸಂತೋಷದಿಂದ, ಕೂಡಲೇ ಕುದುರೆಯಿಂದಿಳಿದು, ಕ್ಷಣವೂ ವಿಳಂಬಿಸದೆ, ಅವಸರದಿಂದ ಪರ್ವತವನ್ನೇರಿ ಹೋದನು, ಶಿವಸಿಂಗನು ಬಂದುದನ್ನು ನೋಡಿ ಯೋಗಿಯ ದುರ್ಗಾದಾ ಸನೂ ಆನಂದದಿಂದ ಅವನನ್ನು ಆದರಿಸಿದರು. ಶಿವಸಿ ಗನು ದುರ್ಗಾ ದಾಸ ನಿಂದ ನಯನಪಾಲನ ವೃತ್ತಾಂತವನ್ನು ಸಮಗ್ರವಾಗಿ ತಿಳಿದು ವಿಸ್ಮಿತನಾಗಿ, ಆತನ ಅಭಿಪ್ರಾಯದಂತೆ ದುಗಾ।” ದಾಸನನ್ನ ಜೊತೆಗೊಂಡು ಪರ್ವತವನ್ನು ಇಳಿದು ಬಂದು ನಯನಪಾಲನನ್ನು ಸೇರಿದನು. ಅಷ್ಟರವರೆಗೂ ನಯನಪಾಲನು ತಾನು ಮುಂದೆ ವಹಿಸಬೇಕಾದ ಪಕ್ಷವಾವುದೆಂಬುದನ್ನು ನಿರ್ಧರಿಸಲರಿಯದೆ ಒಮ್ಮೆ ರು.ಲೋಭದಿಂದ ಕೆ?ರಂಗಜೇಬನ ಕಡೆಗೂ ಒಮ್ಮೆ ಸ್ವಮತಾಭಿಮಾನಸ್ಪೂರ್ತಿಯಿಂದ ಅಚಲೇ ಶ್ವರಾಲಯದ ಕಡೆಗೂ ನೋಡುತ್ತ ಡೋಭಾಯಮಾನನಾಗಿ ಕುಳಿತಿದ್ದನು. ಶಿವಸಿಂಗನೊಡನೆ ದುರ್ಗಾದಾಸನು ಮುಂದೆಬಂದು ನಿಂತುವನ್ನು ನೋಡಿ