ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಮಳಾದೇವಿ ೨೮೩ ನಯನ ಪಾಲನ ಮನಸ್ಸು ಸ್ಥಿರವಾಗಿ ಸ್ವಮತಾಭಿಮಾನದಿಂದ ಉಬ್ಬಿತು. ಥಟ್ಟನೆದ್ದು ದುರ್ಗಾದಾಸನ ಕೈಹಿಡಿದು ಆತನನ್ನು ಸ್ವಲ್ಪ ದೂರ ಕರೆದು ಕೊಂಡು ಹೋಗಿ ಆವುದೋ ಒಂದು ರಹಸ್ಯವನ್ನು ಆತನ ಕಿವಿಯಲ್ಲಿ ಹೇಳಿ ದನು. ಅದನ್ನು ಕೇಳಿ ದುರ್ಗಾದಾಸನು “ನಯನಪಾಲಾ ! ಇದು ಒಳ್ಳೆಯ ಯುಕ್ತಿ !” ಎಂದು ಹೇಳಿದನು. ಆನಂತರ ನಯನಪಾಲನು ಶಿವಸಿಂಗನು ಬಿಟ್ಟಿದ್ದ ಕುದುರೆಯನ್ನೇರಿ ಕ್ಷಣಮಾತ್ರದಲ್ಲಿ ಅದೃಶ್ಯನಾದನು, ಶಿವಸಿಂ ಗನೂ ದುಗಾ ಡಾಸನೂ ಅಲೇಶ್ವರಾಲಯವನ್ನು ಕುರಿತು ಹೊರಟು ಹೋದರು. ಮೂವತ್ತೆ ದನೆಯ ಕು)ಕರಣ. ( ಹಾವನ್ನು ಹಾವೇ ಕಚ್ಚಿತು ) ಔರಂಗಜೇಬನು ಸೇನಾಸಮೇತನಾಗಿ ರೂಪನಗರದ ಸಮೀಪದಲ್ಲಿರು ವುದನ್ನು ನೋವಿ} ನಯನಪಾಲನು ಆತನ ಬಳಿಗೆ ಜಾಗ್ರತೆಯಾಗಿ ಸೇರಬೇ ಕೆಂದು ಅತ್ಯಂತ ವೇಗವಾಗಿ ಆಶ್ವವನ್ನೋಡಿಸಿಕೊಂಡು ಬಂದು ಬಾದಶಹನ ಶಿಬಿರವನ್ನು ಸಮೀಪಿಸಿ ದಾರಿಯಲ್ಲಿದ್ದ ಮರಕ್ಕೆ ಕುದುರೆಯನ್ನು ಕಟ್ಟಿ ಶಿಬಿರ ವನ್ನು ಪ್ರವೇಶಿ'ಲು ಬರುತ್ತಿದ್ದನು, ಇವನು ದೂರದಲ್ಲಿ ಬರುತ್ತಿರುವಾಗಲೇ ಮಹಮ್ಮದೀಯ, ಭಟರು ಶತ್ರುಪಕ್ಷದವನು ಬರುತ್ತಿರುವನೆಂದು ತಮ್ಮ ತಮ್ಮ ಆಯುಧಗಳನ್ನು ಹಿಡಿದುಕೊಂಡಿಎ ಸಿದ್ದರಾಗಿದ್ದರು. ಆದರೆ, ಇವನು ಸಮೀ ಪಿಸಿದ ಮೇಲೆ ಇವನನ್ನು ಗುರುತಿಸಿ ಆಯುಧಗಳನ್ನು ಕೆಳಗಿರಿಸಿ ಗಹಗಹಿಸಿ ನಕ್ಕರು. ಬಾದಶಹನ ಶಿಬಿರವು ಅತ್ಯಂತ ವಿಸ್ತಾರವೂ ನೋಡಲು ಅತ್ಯಂತ ಭಯಂಕರವೂ ಆಗಿದ್ದಿತು. ಸುತ್ತಮುತ್ತಲೂ ದೊಡ್ಡ ದೊಡ್ಡ ಗುಡಾರ