ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೪ ಕರ್ಣಾಟಕ ನಂದಿನಿ ಗಳೂ ಆಯುಧಪಾಣಿಗಳಾಗಿದ್ದ ಭಟರ ಸಮೂಹವೂ ಕಾಣಬರುತ್ತಿದ್ದಿತು. ನಯನಪಾಲನು ಶಿಬಿರವನ್ನು ಪ್ರವೇಶಿಸಿ ಹೋಗುತ್ತಿರಲು ಅಲ್ಲಿದ್ದ ಸರದಾರ ರೂ ಸೈನ್ಯಾಧಿಕಾರಿಗಳೂ ಆತನ ಆಗಮನವನ್ನು ನೋಡಿ ಆಶ್ಚರ್ಯಪಟ್ಟರು. ಬಾದಶಹನ ಸೈನ್ಯದಲ್ಲಿವನು ಅನೇಕವರ್ಷ ಕಾಲ ಇದ್ದುದರಿಂದ ಎಲ್ಲರಿಗೂ ಇವನು ಚಿರಪರಿಚಿತನಾಗಿದ್ದನು. ಆದರೂ ಇವನು ಅವರಾರನ್ನೂ ಮಾತ ನಾಡಿಸಡೆ ಹೋಗುತ್ತಿರಲು ಅವರಲ್ಲಿ ಕೆಲವರು-utಸೆರೆಯಲ್ಲಿ ಇದ್ದವನು ಮ ... ಹೇಗೆ ತಪ್ಪಿಸಿಕೊಂಡು ಒಂದೆ' ಯೆಂದೂ ಮತ್ತೆ ಕೆಲವರು “ ತಪ್ಪಿಸಿ ಕೊಂಡುಬಂದವನು ಮತ್ತೆಲ್ಲಿಗಾದರೂ ಹೋಗದೆ ಪುನಃ ಬಾದಶಹರ ಬಳಿಗೇಕೆ ಹೋಗುವೆ” ಎಂದೂ ಇನ್ನೂ ಕೆಲವರು “ ಈ ಸಲ ಬಾದಶಹನು ನಿನ್ನನ್ನು ಕಠಿಣವಾಗಿ ಶಿಕ್ಷಿಸುವ ” ನೆಂದೂ ಹೇಳುತ್ತಿದ್ದರು. ನಯನಪಾಲನು ಆದಾವುದಕ್ಕೂ ಉತ್ತರವನ್ನು ಕೊಡದೆ “ ಬಾದಶಹರೆಲ್ಲಿರುವರು ? ಎಂದು ಕೇಳುತ್ತ ಮುಂಬರಿದು ಹೋಗುತ್ತಿದ್ದನು, ಸೈನಿಕರು ಬಹುಕಾಲ ಈತನ ಅಧಿಕಾರದಲ್ಲಿದ್ದು ದರಿಂದಲೂ ಅನೇಕರು ಈತನಿಂದ ಉಪಕೃತರಾಗಿದ್ದು ದುಂ ದಲೂ ಇವನನ್ನಾ ರೂ ತಡೆಯದೆ ಬಿಟ್ಟುಬಿಟ್ಟರು, ನಯನಪಾಲನು ಗುಡಾ ರಗಳೆಲ್ಲವನ್ನೂ ದಾಟಿ, ಬಾದಶಹನ ಶಿಬಿರವನ್ನು ಸವಿಾಪಿಸಿ, ದ್ವಾರಪಾಲಕ ರಿಂದ ತಡೆಯಲ್ಪಟ್ಟು, ಅವರೊಡನೆ ನಾನು ಈಗ ಅತ್ಯಂತ ರಹಸ್ಯವೂ ಅವಸರವೂ ಆದ ರಾಜಕೀಯ ವಿಷಯವನ್ನು ಕುರಿತು ಬಾದಶಹರಲ್ಲಿ ಹೇಳಲು ಬಂದಿರುವೆನು. ವಿಳಂಬವಾದರೆ ಅಪಾಯವು ತಪ್ಪದು, ಈಗ ನೀವು ತಡೆದುದಕ್ಕೆ ಮುಂದೆ ನಿವೇ ಪಶ್ಚಾತ್ತಾಪ ಪಡಬೇಕಾಗುವುದು.” ಎಂದು ಹೇಳಲು, ದ್ವಾರರಕ್ಷಕರು ಸ್ವಲ್ಪ ಭಯಪಟ್ಟು ಆತನನ್ನು ಒಳಗೆ ಹೋಗಲು ಬಿಟ್ಟರು. ನಯನಪಾಲನು ಅತ್ಯಂತ ಮನೋಹರವಾಗಿ ಅಲಂಕೃತವಾಗಿದ್ದ ಶಿಬಿ ರವನ್ನೊಳಹೊಕ್ಕು ಬಂದನು. ಅಲ್ಲಲ್ಲಿ ಸೇವಕರು ನಿಯಮಿತ ಕಾರ್ಯಗ