ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨೮೫ ಇಲ್ಲಿ ಆಸಕ್ತರಾಗಿದ್ದರು: ಒಂದೆಡೆ ಸಭಾಸ್ಥಾನದಂತೆ ಕಟ್ಟಲ್ಪಟ್ಟು ಸುತ್ತಲೂ ಆಸನಗಳಿರಿಸಲ್ಪಟ್ಟಿದ್ದವು. ಅನೇಕ ಪ್ರಮುಖ ಉದ್ಯೋಗಸ್ಥರು ಆಸನಾ ಸೀನರಾಗಿ ಪ್ರಕಾಶಿಸುತ್ತಿದ್ದರು. ಆ ಸಭಾಸ್ಥಾನದ ಮಧ್ಯಪ್ರದೇಶದಲ್ಲಿ ಕನಕಸಿಂಹಾಸನಾಧಿತನಾಗಿದ್ದ ಔರಂಗಜೇಬನು ವಿನೋದಕ್ಕಾಗಿ ಗುಡಿ ಗುಡಿಯನ್ನು ಸೇದುತ್ತೆ ಸಭಾಸದರೊಡನೆ ಪ್ರಸಂಗಮಾಡುತ್ತಿದ್ದನು. ನಯ ನವಾಲನು ದೂರದಿಂದಲೇ ಬಾದಶಹನಿಗೆ ಸಲಾಮುಗಳನ್ನೂ ಪ್ಪಿಸಿ ವಿನೀತ ನಾಗಿ ಮುಂದೆ ಬಂದು ನಿಂತನು ಆತನನ್ನು ನೋಡಿ ವಿಸ್ಮಿತನಾಗಿ, “ಎಲಾ ನಯನಪಾಲಾ ! ನಿನ್ನನ್ನು ಕಾರಾಗೃಹದಲ್ಲಿಟ್ಟಿದ್ದೆನಲ್ಲಾ ! ಹೇಗೆ ಒಂದೆ ? }' ಎಂದು ಔರಂಗಜೇಬನು ಕೇಳಿದನು. ನಯ ನ;- ಕ್ಷಮಿಸಬೇಕು ! ಆಗ್ರಹಕ್ಕೆ ಪಾತ್ರನಾಗಿ ಕಾರಾಗೃಹ ಕೈಯ್ಯಲ್ಪಟ್ಟ ನಾನು ಅಲ್ಲಿಂದ ತಪ್ಪಿಸಿಕೊಂಡು, ನಿಂತಲ್ಲಿ ನಿಲ್ಲದೆ ಅಲೆದು ರಾಜಪುತ್ರರ ರಹಸ್ಯಗಳೆಲ್ಲವನ್ನೂ ತಿಳಿದುಕೊಂಡು ತಮ್ಮ ಅನುಗ್ರಹಕ್ಕೆ ಪಾತ್ರನಾಗಲು ಬಂದಿರುವೆನು, ಈ ಬಾರಿ ಈ ಸೇವಕನ ಬಿನ್ನ ಪವನ್ನು ಅವ ಧರಿಸಿ ಇವನನ್ನು ಸೈನ್ಯದಲ್ಲಿ ಸೇರಿಸಿಕೊಂಡರೆ, ಇವನು ತನ್ನ ವೈರಿಗಳಾದ ರಜಪೂತರ ಮೇಲೆ ಬಿದು, ಅವರನ್ನು ನಾಶಪಡಿಸಿ, ಪ್ರಭಚಿತ್ರಕ್ಕೆ ಆನಂದವ ನ್ನುಂಟುಮಾಡಬೇಕೆಂದು ಸಂಕಲ್ಪಿಸಿರುವೆನು, ನನ್ನ ಮಾತುಗಳನ್ನು ಉಪೇ ಕ್ಷಿಸಬಾರದು. ಈಗ ಜಾಗರೂಕರಾಗದಿದ್ದರೆ ಅಪಾಯಸಂಭವಿಸದಿರದು ಔರಂಗ: --ನಯನಪಾಲಾ ! ನಿನ್ನ ಪರಾಕ್ರಮ, ಶಪಥ, ಸ್ವಾಮಿ ಭಕ್ತಿಗಳೆಲ್ಲವೂ ಚಂದ್ರಾವತಿಯನ್ನು ಕರೆತರುವುದಾಗಿ ಹೇಳಿಹೋದಾಗಲೇ ವ್ಯಕ್ತವಾಗಿವೆ, ಮತ್ತೇಕೆ ? ನಯನ:- ಪ್ರಭುಗಳು ಹೀಗೆ ಹೇಳುವುದು ಶುಭಕರವಲ್ಲ. ಹಿಂದೆ ನಾನು ಪ್ರಭುಗಳ ಅನ್ನ ವನ್ನು ತಿಂದು ಜೀವಿಸಿರುವೆನಾದುದರಿಂದ ಆ ಋಣ ವನ್ನು ತೀರಿಸಲು ಈಗ ಸನ್ನಿ ಧಿಯಲ್ಲಿ ಕೆಲವು ರಹಸ್ಯವನ್ನು ತಿಳಿಸಲು ಬಂದಿರ ವೆನು. ಇನ್ನು ತಮ್ಮ ಚಿತ್ರ !