ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨g ಕರ್ಣಾಟಕ ನಂದಿನಿ - ಬಾ ದಶಹನ ಇಂಗಿತವನ್ನು ತಿಳಿದು ಪರಿವಾರದವರು ದೂರ ಸಾರಿ ದರು, ಆ ಬಳಿಕ ನಯನಪಾಲನು ಬಾದಶಹನ ಆಜ್ಞೆಯಂತೆ ಸಮಾಜಕ್ಕೆ ಬಂದು ರಹಸ್ಯವಾಗಿ--'ರಾಜಾಧಿರಾಜಾ! ನಾನು ರಾಜನತ್ರರೊಡನೆ ಕಸ ಟಸ್ಸೇಹದಿಂದಿದ್ದು ಅಲ್ಲಿ ತಮಗೆ ವಿರುದ್ಧ ವಾದ ಮಾತನಾಡಿ ದುರ್ಗಾದಾಸನೇ ಮೊದಲಾದವರ ಆಲೋಚನೆಗಳೆಲ್ಲವನ್ನೂ ತಿಳಿದುಕೊಂಡೆನು. ಆತನು ಸೆರೆ ಯಿಂದ ತಪ್ಪಿಸಿಕೊಂಡು ಬಂದು ತನ್ನ ತಂಗಿಯಾದ ಇಂದಿರೆಯೊಡನೆ ಈಗ ಆಬೂಸರ್ವತದಮೇಲೆ ವಸಿಸುತ್ತಿರುವನು, ಚಂದ್ರಾವತಿಯ ಕುಮಾರನೂ ಯೋಗಿಯ ಬಳಿಯಲ್ಲಿರುವನು. ನಾಳಿನ ಪ್ರಾತಃಕಾಲಕ್ಕೆ ವಿಮಲಾದೇವಿ ಯೊಡನೆ ರಾಜಸಿಂಹನು ಯೋಗಿಯ ಸಂದರ್ಶನಕ್ಕಾಗಿ ಅಬೂಸರ್ವ ತದ ಮೇಲಕ್ಕೆ ಬರುವನಂತೆ ! ಈಗ ನಾವು ಸ್ವಲ್ಪ ಯುಕ್ತಿ ಮಾಡಿದರೆ, ಅವರೆ ಲ್ಲರೂ ನಿರಾಯಾಸವಾಗಿ ನಮ್ಮ ಕೈಗೆ ಸಿಕ್ಕಿ ಬೀಳುವರು.” ಔರಂಗ:- ಶಾಬಾಸ್, ನಯನಪಾಲಾ! ನಿನ್ನ ಬುದ್ಧಿಗೆ ಮೆಚ್ಚಿದೆನು. ಒಳ್ಳೆಯ ರಹಸ್ಯವನ್ನು ತಿಳಿಸಿದೆ. ಸಂತೋಷ ! ಈಗಲೇ ನಮ್ಮ ಸೈನ್ಯ ವನ್ನು ಕಳುಹಿಸಿ ಅವರನ್ನು ಹಿಡಿಸುವೆನು. - ನಯನ:- ದೇವಾ! ಹಾಗೆ ಹೇಳಿದರೆ ಕಾರ್ಯಸ ಧನೆಯಾದಂತಲ್ಲ. ನಾವು ಬರುತ್ತಿರುವ ಸಮಾಚಾರವು ಅವರಿಗೆ ತಿಳಿದುದೇ ಆದರೆ ತಕ್ಷ ಣವೇ ಅವರು ಓಡಿಹೋಗುವರು. ಆಗ ಅವರನ್ನು ಹಿಡಿಯುವುದು ಅಸಾ ಧ್ಯವು, ಆದುದರಿಂದ ನಾವು ರಹಸ್ಯವಾಗಿ ಹೋಗಿ ಅವರನ್ನು ಹಿಡಿದು ಕೊಳ್ಳಬೇಕು. ಔರಂಗ:-ನಿನಗೆ ಹುಚ್ಚು ಹಿಡಿಯಿತೇನು ! ಪರ್ವತದ ಸುತ್ತಲೂ ನಾವು ಮುತ್ತಿಗೆ ಹಾಕಿದರೆ ಅವರೆಲ್ಲಿಗೆ ಹೋಗುವರು? ನಯನ:-ನನಗೆ ಹುಚ್ಚು ಹಿಡಿದಿಲ್ಲ, ಅಚಲಯೋಗಿ ಮಹಾಮಾ ಯಾವಿಯೆಂಬುದು ಪ್ರಭುಚಿತ್ರಕ್ಕೆ ಗೊತ್ತಿಲ್ಲವೆಂದು ಭಾವಿಸಬೇಕಾಗಿದೆ. ಇಂದಿಟಾ ದುರ್ಗಾದಾಸರ ಚಾತುರ್ಯವು ಅನುಭವಕ್ಕೆ ಬಂದೇ ಇರಬಹುದು