ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨೮೭ ಔರಂಗ: - ಹಾಗಾದರೆ ಈಗ ನೀನು ಹೇಳುವ ಉಪಾಯವೇನು? ನಯನ:-ನಾಳಿನ ಪ್ರಾತಃಕಾಲ ರಾಜಸಿಂಹನು ವಿಮಲೆಯೊಡನೆ ಆ ಪರ್ವತಕ್ಕೆ ಬರುವನು. ಆದುದರಿಂದ ನಾವು ನಾಳಿನ ದಿನ ಮಧ್ಯಾಹ್ನವೇ ಆ ಪರ್ವತಕ್ಕೆ ಮುತ್ತಿಗೆಯನ್ನು ಹಾಕಬೇಕು. ಇಷ್ಟೇ ಅಲ್ಲದೆ ಆ ಸರ್ವತ ಪ್ರಾಂತ್ಯವು ಅರಣ್ಯಮಯವಾಗಿಯೂ ಕಣಿವೆಗಳಿಂದ ಕೂಡಿದುದಾಗಿಯೂ ಇರುವುದರಿಂದ ನಮ್ಮ ಸೈನ್ಯವನ್ನು ಚಿಕ್ಕ ಚಿಕ್ಕ ಭಾಗಗಳನ್ನಾಗಿ ಮಾಡಿ ಪರ್ವತವನ್ನು ಸವಿಾಪಿಸಿ ಮರಗಳ ಮರೆಯಲ್ಲಿಯೂ ಕಣಿವೆಗಳಲ್ಲಿಯೂ ಸೈನ್ಯಗಳನ್ನು ರಹಸ್ಯವಾಗಿರಿಸಿ, ಪರ್ವತವನ್ನು ಮುತ್ತಬೇಕು, ಆ ಅರಣ್ಯ ಮಾರ್ಗಗಳನ್ನೂ ಕಣಿವೆಯದಾರಿಗಳನ್ನೂ ನಾನು ಚನ್ನಾಗಿ ತಿಳಿದಿರುವೆನು. ಆ ದಾರಿಯಲ್ಲಿ ನಾನು ಸೈನ್ಯವನ್ನು ರಹಸ್ಯವಾಗಿ ತೆಗೆದುಕೊಂಡು ಹೋಗ ಬಲ್ಲೆನು, ಇದರಮೇಲೆ ತಮ್ಮ ಚಿತ್ರ! ಇದರ ಪ್ರತಿಫಲವಾಗಿ ಜೋಧಪುರ ವನ್ನು ಮಾತ್ರ ನನಗೆ ದಯಪಾಲಿಸಬೇಕು. ಔರಂಗಜೇಬನು ಸಮ್ಮತಿಸಿದುದಲ್ಲದೆ ಶುಭವರ್ತಮಾನವನ್ನು ಹೇಳಿ ದುದಕ್ಕಾಗಿ ಮತ್ತಿನಹಾರವನ್ನು ನಯನಪಾಲನಿಗೆ ಬಹುಮಾನವಾಗಿ ಕೂ ೬ನು, ಅನಂತರ ಬಾದಶಹನು ತನ್ನ ಸೇನಾನಾ ಕನನ್ನು ಕರೆಯಿಸಿ ಒಂದು ಗಂಟೆಯೊಳಗಾಗಿ ಸೇನೆಯನ್ನು ಪ್ರಯಾಣಕ್ಕೆ ಸಿದ್ದ ಮಾಡಿಸಬೇಕೆಂದು ಆಜ್ಞಾಪಿಸಿದನು; ಮೊಗಲ್ ಸೇನೆ ಮೂರುದಿನಗಳ ಅವಧಿಯಲ್ಲಿಯೂ ಸಿದ್ದವಾಗಲಾರಸ್ಥಿತಿಯಲ್ಲಿದ್ದಿತು. ಆದರೂ ಔರಂಗಜೇಬನ ಆಜ್ಞೆಯನ್ನು ಉಪೇಕ್ಷಿಸುವ ಅಥವಾ ಪ್ರತಿಭಟಿಸುವ ಧೈರ್ಯವಿಲ್ಲದೆ ಅತಿ ಪ್ರಯಾಸ ದಿಂದ ಸಿದ್ಧವಾಗಬೇಕಾಯಿತು. ಇಷ್ಟು ಆಕಸ್ಮಿಕವಾಗಿ ಹೊರಡುವ ಕಾರೆ ಣವೇನೆಂಬ ಶಂಕೆಯು ಪ್ರತಿಯೊಬ್ಬ ಸೈನಿಕನನ್ನೂ ಬಾಧಿಸುತ್ತಿದ್ದರೂ ಬಾದ ಶಹನಲ್ಲಿ ಪ್ರಸ್ತಾಪಿಸುವಷ್ಟು ಸಾಹಸವು ಯಾರಿಗೂ ಉಂಟಾಗಲಿಲ್ಲ. ಸಾದ ತ್ ಖಾನನು ಮಾತ್ರ ಧೈರ್ಯದಿಂದ ಮುಂದೆ ಬಂದು ಬಾದಶಹನಿಗೆ ಕೈ ಮುಗಿದು, “ಪ್ರಭುಗಳು ನಿರೂಪಿಸಬೇಕು. ಈಗ ನಾವು ಎಲ್ಲಿಗೆ ಹೊರಡ