ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೮ ಕರ್ಣಾಟಕನಂದಿಸಿ ಬೇಕು? ಆಕಸ್ಮಿಕವಾಗಿ ಹೊರಡುವ ಕಾರಣವೇನು? ಸೈನ್ಯಾಧಿಪತಿಯಾಗಿರು ವುದರಿಂದ ಕೇಳಬೇಕಾಯಿತು.” ಎಂದು ಬಿನ್ನವಿಸಿದನು. ಅಷ್ಟರಿಂದಲೇ ಬಾದಶಹನು ಕ್ರೋಧಾನ್ವಿತನಾಗಿ_ಆ ಸಂಗತಿಗಳೆಲ್ಲಾ ನಿನಗೇಕೆ? ಈಗ ನಾನೇ ಸೇನಾನಾಯಕನು. ನಾನು ಹೋದಕತೆಗೆ ನೀನು ಬರಬೇ ಕು” ಎಂದು ನುಡಿಯಲು ಸಾದತ್ ಖಾನನು ಮರುಮಾತಿಲ್ಲದೆ ಸೈನಿಕರೊ ಡನೆ ಹೊರಡಲು ಸಿದ್ಧನಾದನು. ಔರಂಗಜೇಬನ ಆಜ್ಞೆಯಂತೆ ನಯನಪಾಲನು ತುರುಗಾರೂಢನಾಗಿ. ಮುಂದೆ ಹೊರಟನು ಆತನ ಹಿಂದೆ ಫಾರಸೀಕ ತುರುಗವನ್ನೇರಿ ಬಾದಶಹನೂ ಆತನ ಹಿಂದೆ ಸೇನಾವಾರವೂ ಅದರ ಹಿಂದೆ ಜನಾನಾ ಸಮೂಹವೂ ಭೋಜ ನ ಸಾಮಗ್ರಿಗಳೂ ಯುದ್ಧದ ಸಾಹಿತ್ಯಗಳೂ ಕೆಲವರು ಭಟರೂ ಹೊರಟರು. ನಯನಪಾಲನು ಬಾದಶಹನೊಡನೆ ಪ್ರಸಂಗಿಸುತ್ತ ಹೋಗುತ್ತ ಆ ಪ್ರದೇಶ ದಲ್ಲಿ ಅರಣ್ಯ ಮಾರ್ಗಗಳನ್ನೂ ಕಣಿವೆಯ ದಾರಿಗಳನ್ನೂ ಆತನಿಗೆ ತೋರಿಸು ತ್ಯಾ- “ದೇವಾ ! ನಾನು ಪಾದಸೇವೆಗೆ ಬಂದು ಸೇರುವ ಮೊದಲು ಈ ಅರಣ್ಯ ಪ್ರದೇಶದಲ್ಲಿಯೇ ಸಂಚರಿಸುತ್ತಿದ್ದನು. ಈ ಕಣಿವೆ ದಾರಿಗಳೆಲ್ಲವೂ ನನಗೆ ಚೆನ್ನಾಗಿ ಗೊತ್ತಿರುವುವು. ನನಗೆ ತಿಳಿಯದ ದಾರಿಯೇ ಇಲ್ಲಿರುವು ದಿಲ್ಲ.” ಎಂದು ಹೇಳುತ್ತಿದ್ದನು. ನಯನಪಾಲನು ಕ್ರಮಕ್ರಮವಾಗಿ ತನ್ನ ಮಾತಿನಲ್ಲಿ ಪೂರ್ಣ ಭರವ ಸೆಯಿಟ್ಟ ಔರಂಗಜೇಬನನ್ನು ಸ್ವಲ್ಪ ದೂರ ಪರ್ವತದ ಅರಣ್ಯ ಮಾರ್ಗದಲ್ಲಿ ಕರೆದೊಯ್ಯುತ್ತಿದ್ದನು. ಆಬಳಿಕ ಒಂದು ಇಕ್ಕಟ್ಟಾದ ಕಣಿವೆಯಲ್ಲಿ ಪ್ರವೇಶಿಸಿದನು, ಔರಂಗಜೇಬನು ಕಣಿವೆಯ ದಾರಿಯು ಇಕ್ಕಟ್ಟಾಗಿ, ದಾರಿಯುದ್ದಕ್ಕೂ ಸೂಜಿಯಂತಿರುವ ಕಲ್ಲುಗಳು ಆವರಿಸಿದ್ದು ದನ್ನು ನೋಡಿ, “ನಯನಪಾಲಾ ! ಇದೇನು ? ಈ ಮಾರ್ಗವು ಇಷ್ಟು ದ:ರ್ಗಮವಾಗಿರು ವುದು? ಈ ಮಾರ್ಗದಲ್ಲಿ ಪ್ರಯಾಣಮಾಡುವುದು ಹೇಗೆ?” ಎಂದು ಕೇಳಲು ನಯನಸಾಲನು “ ದೇವಾ ! ಶಂಕೆಗೆ ಕಾರಣವಿಲ್ಲ. ಸ್ವಲ್ಪದರ ಮಾತ