ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಮಲಾದೇವಿ ೨೮ ಹೀಗಿರುವುದು, ಆಮೇಲೆ ಸುಲಭವಾಗಿ ಪ್ರಯಾಣಮಾಡಬಹುದು, ನನ್ನ ಮಾತಿನಲ್ಲಿ ಭರವಸೆ ಇರಬೇಕು ಎಂದನು, ನಯನಪಾಲನೂ ಆತನ ಹಿಂದೆ ಬಾದಶಹನೂ ಆತನ ಹಿಂದೆ ಸೈನ್ಯಸಮೂಹವೂ ಅತ್ಯಂತ ಪ್ರಯಾಸ ದಿಂದ ಆ ಕಣಿವೆಯಲ್ಲಿ ಪ್ರವೇಶಿಸಿ ಹೋಗುತ್ತಿದ್ದುವು. ಭೋಜನ ಸಾಮ ಗ್ರಿ-ಯುದ್ಧ ಸಾಮಗ್ರಿಗಳೂ ಜನಾನಾ ಸಮೂಹವೂ ಇನ್ನೂ ಕಣಿವೆಯ ಹೊರಗಡೆಯಲ್ಲಿಯೇ ಇದ್ದುವು. ಅಷ್ಟರಲ್ಲಿಯೇ ಆಕಸ್ಮಿಕವಾಗಿ ಎಲ್ಲಿಂದ ಲೋ ಕೆಲವರು ರಾಜಪತರು ನಾಗಾಲೋಟದಿಂದ ಬಂದು ಕಣಿವೆಯ ಬಾಗಿ ಲಲ್ಲಿ ಅಡ್ಡಗಟ್ಟಿ ದರು. ಪಾಪ ! ಅವರೆಲ್ಲರೂ ದಿಮೆಯಿಂದ ನಿಂತು ಬಿಟ್ಟರು. ಮವತ್ತಾರನೆಯ ಅಧ್ಯಾಯ. (ರಾಜಪುತ್ರರ ಯುದ್ಧ) ಮೊಗಲರು ಪ್ರವೇಶಿಸಿದ್ದ ಪರ್ವತಮಾರ್ಗವು ಒಂದು ಕಣಿವೆಯಂತೆ ಸುಮಾರು ಹತ್ತು ಹನ್ನೆರಡು ಮೈಲಿಗಳವರೆಗೂ ವ್ಯಾಪಿಸಿದ್ದಿ ತು. ಆ ಕಣಿ ವೆಯ ಇರ್ಕ್ಕಡೆಯಲ್ಲಿಯೂ ಮಹೋನ್ನತವಾದ ಪರ್ವತ ಪಂಕ್ತಿಗಳಿದ್ದವು. ಕಣಿವೆದಾರಿಯ ದ್ವಾರವು ಅತ್ಯಂತ ಸಂಕೋಚವಾಗಿ ಒಮ್ಮೆ ನಾಲ್ಕು ಜನರು ಮಾತ್ರ ಹೋಗಬಹುದಾಗಿದ್ದಿತು. ಭಯಂಕರವಾದ ಆ ಮಾರ್ಗದ ಎರಡು ಕಡೆಗಳಲ್ಲಿದ್ದ ಪರ್ವತಪಂಕ್ತಿಗಳೆರಡೂ ಕ್ರಮಕ್ರಮವಾಗಿ ಸ್ವಲ್ಪ ದೂರ ಹೋದಮೇಲೆ ಒಂದನ್ನೊಂದು ಸೇರಿಕೊಂಡಿದ್ದುವು, ಪ್ರಾರಂಭ ದಿಂದ ಪರ್ವತಸಂಧಿಯವರೆಗೂ ಆ ಕಣಿವೆಯ ಮಾರ್ಗವು ಕಲ್ಲುಗಳಿ೦ ದ ಕಂಟಕದಿಂದ ಕೂಡಿ, ಜನಸಂಚಾರಕ್ಕೆ ಅಸಾಧ್ಯವಾಗಿದ್ದಿತು. 37