ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಕರ್ಣಾಟಕ ಗ್ರಂಥಮಾಲೆ vvvvv

  • * * * * *

ಬೇಕು ಆಹಾರವನ್ನು ಚೆನ್ನಾಗಿ ಅಗಿದು ನುಂಗಿದರೆ ಸಂಪೂರ್ಣವಾಗಿ ಅರಗುವುದು, ಪದಾರ್ಥಗಳನ್ನು ಅಗಿಯುವಾಗ ಪದೇಪದೇ ಬಾಯನ್ನು ತೆರೆಯುವುದು, ಮುಚ್ಚುವುದು ಇವುಗಳಿಂದ ಒಂದು ಬಗೆಯ ಸದ್ದಾಗು ವುದು, ಹತ್ತಿರ ಕುಳಿತಿರುವವರಿಗೆ ಇದರಿಂದ ಜುಗುಪ್ಪೆಯಾಗುವುದು. ಆದುದರಿಂದ ಈ ವಿಷಯದಲ್ಲಿ ಜಾಗರೂಕರಾಗಿರಬೇಕು, ಬಾಯಲ್ಲಿ ಬಿದ್ದ ಆಹಾರವು ಪುನಃ ಯಾವಾಗಲೂ ಈಚೆಗೆ ತೋರಬಾರದು. ಪದಾರ್ಥಗ ಳನ್ನು ಬಾಯಿತುಂಬ ತುಂಬಿಕೊಳ್ಳಬಾರದು. ಊಟಮಾಡುವಾಗ ನಡು ನಡುವೆ ನೀರುಕುಡಿಯಬಾರದೆಂದು ಮೊದಲೇ ಹೇಳಿದೆಯಷ್ಟೆ. ಒಂದು ವೇಳೆ ಯತ್ನವಿಲ್ಲದೆ ಬಂದರೆ ಬಾಯಲ್ಲಿದ್ದುದನ್ನೆಲ್ಲಾ ಚೆನ್ನಾಗಿ ಅಗಿದು ನುಂಗಿದ ಮೇಲೆ ಕುಡಿಯಬೇಕು. ಕಡುಬು, ದೋಸೆ ಮೊದಲಾದ ವಸ್ತು ಗಳನ್ನು ಕೈಯಲ್ಲಿ ಹಿಡಿದು ಬಾಯಲ್ಲಿ ಕಡಿದು ತಿನ್ನುವುದಕ್ಕಿಂತ ಕೈಯಿಂದ ಮುರಿದು ತಿನ್ನುವುದು ಮರಾದೆ. ಪಾಯಸ ಮೊದಲಾದುವನ್ನು ಸೊರನೆ ಹೀರುತ್ತ ಸದ್ದು ಮಾಡಬಾರದು, ಊಟಮಾಡುವಾಗ ಬಡಿಸುವುದು ಸ್ವಲ್ಪ ತಡವಾಗಿ ಕೈಗೆ ಕೆಲಸವಿಲ್ಲದೆ ಇದ್ದಾಗ ಊಟದ ಎಲೆಯಲ್ಲಿಯೇ ಅಥವಾ ತಟ್ಟೆಯಲ್ಲಿಯೇ ಕೈಯನ್ನಾಡಿಸುತ್ತ ಇರಬಾರದು. ಮತ್ತು ಆಗ ಹಲ್ಲಿಗೆ ಕಡ್ಡಿಯನ್ನಿಟ್ಟುಕೊಂಡು ಕೆದಕುವುದು, ನಾಲಗೆಯಿಂದ ಹಲ್ಲನ್ನು ಸವರಿ ಕೊಳ್ಳುತ್ತಿರುವುದು ಇವೆಲ್ಲಾ ಕೆಟ್ಟ ಚಾಳಿಗಳು, ಊಟಮಾಡುವಾಗ ಕೆಮ್ಮು, ಸೀನು ಮೊದಲಾದವುಗಳೇನಾದರೂ ಬಂದರೆ ಪಕ್ಕಕ್ಕೆ ತಿರುಗಿ ಕೊಂಡು ವಸ್ತ್ರವನ್ನು ಅಥವಾ ಟವಲನ್ನು ಅಡ್ಡವಾಗಿ ಹಿಡಿದುಕೊಳ್ಳಬೇಕು. ಎಲೆಯ ಅಥವಾ ತಟ್ಟೆಯ ಸುತ್ತಲೂ ಎಂಜಲನ್ನು ಚೆಲ್ಲಿ ಅಸಹ್ಯವಾಗು ವಂತೆ ಮಾಡಕೂಡದು. ಭೋಜನ ಕಾಲದಲ್ಲಿ ನಾವಾಗಿಯೇ ಇತರರನ್ನು ಮಾತಾಡಿಸು ವುದೂ ಇತರರ ಎಲೆಯನ್ನು ಅಥವಾ ಅವರು ಊಟಮಾಡುತ್ತಿರುವುದನ್ನು