ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೨ ಕರ್ಣಾಟಕ ನಂದಿನಿ ಏ ದನ್ನು ನೋಡಿ ತಡೆಯಲಾರದೆ ತನ್ನ ವರಿಗೆ, “ಪರ್ವತವನ್ನು ಹತ್ತಿಕ, ಜಾಗ್ರ ಜಾಗ್ರತೆ !” ಎಂದು ಆಜ್ಞಾಪಿಸಿದನ, ಸಾಧಾರಣವಾಗಿ ಆ ಪರ್ವತ ವನ್ನು ಹತ್ತುವುದಕ್ಕೆ ಯಾರಿಂದಲೂ ಅಸಾಧ್ಯ, ಅದರಲ್ಲಿಯೂ ಮೇಲೆ'೦ದ ಭಿಲ್ಲ ಗು ಶಿಲಾವೃಷ್ಟಿಯನ್ನೂ ಬಾಣವೃಷ್ಟಿಯನ್ನೂ ಕರೆಯುತ್ತಿದ್ದರು. ಹೀಗಿ ರುವಾಗ ಅವರ ಪ್ರಯತ್ನವು ಈ ಸT. ವುದು ? ಸೈನಿಕರ ದುರವಸ್ಥೆಯನ್ನು ನೋಡಿ ಮತ್ತೆಲ್ಲಿಯಾದರೂ ಮಾರ್ಗವಿರುವುದೇನೇಂದು ಬಾದಶಹನೇ ಹುಡುಕಿ ನೋಡಿದನು. ಆ ಪರ್ವತಸಂಧಿಯಲ್ಲದೆ ಮತ್ತಾವುದೂ ಅವನಿಗೆ ಕಾಣಲಿಲ್ಲ, ಒಂದು ಕಡೆಯ ಪರ್ವತದ ಮೇಲೆ ಸಕಲ ಸೇನಾಸಮೇತನಾಗಿ ದುರ್ಗಾ ದಾಸನ ಮತ್ತೊಂದು ಪರ್ವತದಮೇಲೆ ಭಿಲ್ಲರೊಡನೆ ಶಿವಸಿಂr ನೂ ನಯ ಪಾಲನೂ ದ್ವಾರದಲ್ಲಿ ರಾಜಸಿಂಹನೂ ರಜಪೂಸೇನೆಯ ಪುರುಷ ವೇಷಧಾರಿಣಿಯರಾಗಿದ್ದ ವಿಮಲೆಸನ್ನೈಯರೂ ಕ್ಷಣವಿರಾಮವಿಲ್ಲದಂತೆ ಆಯುಧಗಳನ್ನು ಪ್ರಯೋಗಿಸುತ್ತಿದ್ದರು, ಸಾವಿರಾರು ಮೊಗಲರು ಶತ್ರುಗ ಳಿಗೆ ತಮ್ಮ ಪ್ರಾಣಗಳನ್ನೊಪ್ಪಿಸುತ್ತಿದ್ದರು. ಎತ್ತ ನೋಡಿದರೂ ಸ್ವಲ್ಪ ವೂ ವಿರಾಮವಿಲ್ಲದೆ ಶತ್ರುಗಳು ಯುದ್ಧ ಮಾಡುತ್ತಿದ್ದುದರಿಂದ ಎಲ್ಲಿ ಹೋಗುವು ದಕ ದಾರಿತೋರದೆ ಇಂದಿಗೆ ತಮ್ಮ ಆಯುಸ್ಸು ಮುಗಿಯಿತೆಂದು ಪರಿತಪಿ ಸುತ್ತಿದ್ದರು. ಕೈಗಳಲ್ಲಿ ಮಹತ್ತರವಾದ ಆಯುಧಗಳಿದ್ದರೂ ಅವರು ನಿರಾಯುಧರಂತೆ ನಿಲ್ಲಬೇಕಾಯಿತು, ಅಂತ್ಯಕಾಲದ ಅಲ್ಲಾ ಪ್ರಾರ್ಥನೆ ಮಾಡತೊಡಗಿದರು. ಯಾವಕಡೆಯಲ್ಲಿ ನೋಡಿದರೂ ರಾಜಪುತ್ರರೆ ! ಎಷ್ಟು ದೂರನೋಡಿದರೂ ಭಿಲ್ಲರೆ ! ಪರ್ವತಗಳೆರಡೂ ಆದಿನ ರಾಜಪುತ್ರರಿಂ ದಲೂ ಭಿಲ್ಲ ರಿಂದಲೂ ತುಂಬಿದ್ದವು. ಬಾದಶಹನಿಗೆ ಉದಯಪುರಿಯೇನಾ ದಳೋ-ಎಂಬ ಚಿಂತೆ ಬಹುವಾಯಿತು, ಚಿಂತೆಯು ಬಲವಾಗುತ್ತ ಬಂದಂ ತೆಲ್ಲಾ ತನ್ನ ಸೈನ್ಯವು ಶತ್ರುಗಳ ಪರಾಕ್ರಮವನ್ನು ಸಹಿಸದೆ ನೆಲಕ್ಕುರುಳು ದುದನ್ನೂ ಕ್ಷಣಕ್ಷಣಕ್ಕೂ ಶತ್ರು ಪಕ್ಷದವರ ಅಟ್ಟಹಾಸವು ಹೆಚ್ಚುತ್ತಿದ್ದು ದನ್ನೂ ನೋಡಿ ಕ್ರೋಧಮೂರ್ಛಿತನಾದನು