ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨೯೩ • ಕಣಿವೆಯ ದ್ವಾರದಲ್ಲಿ ರಾಜಪುತ್ರರೊಡನೆ ವಿಮಲೆಪ ಯರೂ ಸೇರಿ ಮೊಗಲರೊಡನೆ ಘೋರವಾಗಿ ಯುದ್ಧ ಮಾಡುತ್ತಿರುವಾಗ ದೂರದಿಂದ ಸ್ತ್ರೀಯರ ಆರ್ತನಾದವು ಕೇಳಬಂದಿತು, ಆಗ ಅವರಿಬ್ಬರೂ ತಕ್ಷಣವೇ ಯುದ್ಧ ವನ್ನು ಬಿಟ್ಟು ಸ್ವಲ್ಪ ದೂರ ಹೋಗಿ ನೋಡಲು, ಕೆಲವು ಮಂದಿ ರಾಜಭಟರು ಮೊಗಲಾಯಿ ಜನಾನಾವನ್ನು ಮುತ್ತಿ ಎಲ್ಲಿಗೆ ಕರೆದು ಕೊಂಡು ಹೋಗುತ್ತಿದ್ದರು. ಈ ಮಹತ್ತರವಾದ ಯುದ್ಧಕ್ಕೆ ಕಾರಣಭೂತ ೪ಾದವಳು ಉದಯಪ್ರರಿಯೆಂದು ತಿಳಿದಿದ್ದರೂ ಆಕೆಗೆ ಅವಮಾನವ್ರಂಟುಮಾ ಡುವುದು ಯೋಗ್ಯವಲ್ಲೆವೆಂದು ಭಾವಿಸಿ ಸದಯಹೃದಯೆಯಾದ ವಿಮಲೆಯ ರಾಜಪುತ್ರರ ಸೆರೆಸಿಕ್ಕಿ ಪರಿತಪಿಸುತ್ತಿದ್ದ ಉದಯಪುರಿಯ ಬಳಿಗೆ ಬಂದಳು. ಉದಯಪುರಿಯು ಪಶ್ಚಾತ್ತಾಪ ಪಡುತ್ತಾ ತನ್ನಲ್ಲಿ ತಾನೇ“ಅಯ್ಯೋ ! ನಿಷ್ಕಾರಣವಾಗಿ ರಾಜಪುತ್ರರ ಮೇಲೆ ಯುದ್ಧಕ್ಕೆ ಪ್ರೇರಿಸಿದೆ ನೇಕೆ ? ವಿಮಲಾದೇವಿಯ ಪತ್ರವನ್ನು ನೋಡಿ ನಾನು ಸುಮ್ಮನಿರದೆ ರೋಷವನ್ನು ವಹಿಸಿ ಬಾದಶಹರನ್ನು ಕೆರಳಿಸಿದುದರಿಂದಲ್ಲವೇ ನನಗೀ ತೀಕ್ಷೆ ಯಾಯಿತು ” ಎಂದು ಹಲುಬುತ್ತಿದ್ದಳು ವಿಮಲೆಯ ಉದಯಪುರಿಯ ದುರವಸ್ಥೆಯನ್ನು ನೋಡಿ ಕನಿಕರಪಟ್ಟು ರಾಜಪುತ್ರರನ್ನು ಧಿಕ್ಕರಿಸಿ, ಸ್ತ್ರೀಯರನ್ನು ಹಿಂಸಿಸುವುದು ಪರಾಕ್ರಮ ವೆಂದು ಭಾವಿಸುವವರು ಕೂರರೆಂದೂ ನಿಜವಾದ ಶೂರರೆನಿಸದೆ ಹೇಡಿ ಗಳೆನಿಸುವರೆಂದೂ ಶತ್ರಪಕ್ಷದ ಸ್ತ್ರೀಯರನ್ನು ಕೂಡ ಗೌರವಬುದ್ದಿ ಯಿಂದ ನೋಡುವದೂ ಸಮಾನಸ್ಕಂದರಾದ ಶತ್ರುಗಳೊಡನೆ ಪ್ರತ್ಯಕ್ಷವಾಗಿ ಹೋ ರಾಡುವುದೂ ನಿಜವಾದ ಪರಾಕ್ರಮವೆಂದೂ ಔರಂಗಜೇಬಿನಲ್ಲಿ ಪರಾಕ್ರಮ ವನ್ನು ತೋರಿಸಬೇಕೇ ಹೊರತು, ಅವನ ರಾಣಿವಾಸವನ್ನು ಹಿಂಸಿಸುವುದು ಸರಿಯಲ್ಲ ಎಂದೂ ಸೈನಿಕರಿಗೆ ಬೋಧಿಸಿ, ದಾಸಿ ಜನರೊಡಗೂಡಿದ್ದ ಬಾದ ಶಹನ ಜನಾನಾವನ್ನು ಸಮತಾಪದ ಗುಡಾರದಲ್ಲಿರಿಸಿ ಸುತ್ತಲೂ ಕಾವಲಿರಿಸಿ, ಆ ವರಿಗೆ ಬೇಕಾದ ಹಾರಿಸಾಮಗ್ರಿಗಳನ್ನೊದಗಿಸುವಂತೆ ಏರ್ಪ ಡಿಸಿದಳು.