ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೨೯೫ ಯಬಲ್ಲಿರಾ ? ಈಗಲೂ ನಿಮಗೆ ನಿಮ್ಮ ಡಿಲ್ಲಿ ನಗರದ ಮೇಲೆ ಆಶೆಯಿದ್ದರೆ ಈ ಮುಂದೆ ಹೇಳುವ ಕರಾರುಗಳಿಗೆ ಒಪ್ಪಬೇಕಾಗಿದೆ... ೧, ಈಗ ನಿಮ್ಮ ಸ್ವಾಧೀನದಲ್ಲಿರುವ ರಜಪುತ್ರಜ್ಞಾನಗಳನ್ನು ಅವ - ರವರ ಸ್ವಾಧೀನಕ್ಕೆ ಒಪ್ಪಿಸಿಬಿಡಬೇಕು, ೨. ಮಹಮ್ಮದೀಯಮತಕ್ಕೆ ಸೇರಬೇಕೆಂದು ಹಿಂದುಗಳನ್ನು ಬಾಧೆ ಪಡಿಸಬಾರದು, ೩. ಜಿಜಿಯಾ ಕಂದಾಯವನ್ನು ಸಂಪೂರ್ಣವಾಗಿ ತೆಗೆದುಹಾಕ ಬೇಕು, ಬಲವಂತವಾಗಿ ವಿವಾಹಮಾಡಿಕೊ ಳ್ಳಕೂಡದು. ಈ ನಿಬಂಧನೆಗಳಿಗೆ ಸಮ್ಮತಿಸಿದ ಪಕ್ಷದಲ್ಲಿ ನಿಮ್ಮನ್ನು ನಿಮ್ಮ ಬೇಗ ಮರೊಡನೆ ಡಿಲ್ಲಿ ನಗರಕ್ಕೆ ಹೋಗಗೊಡುವೆವು, ಇಲ್ಲದಿದ್ದರೆ, ನಿಮಗೆ ಈ ಕಣಿವೆಯೇ ಶಾಶ್ವತವಾದ ನಿವಾಸಸ್ಥಾನವೆಂಬುದು ಖಚಿತವಾಗಿರಲಿ ! !” ಈ ರೀತಿಯಾಗಿ ಬರೆದು ಆ ಪತ್ರವನ್ನು ಬಬ್ಬ ಮಹಮ್ಮದೀಯ ಭಟನ ಕೈಯಲ್ಲಿ ಕೊಟ್ಟು ಕಳುಹಿದನು , ಅವನು ಅದನ್ನು ಒಡನೆಯೇ ಬಾದಶಹನಿಗೆ ಮುಟ್ಟಿಸಿದನು, ಪತ್ರವನ್ನು ನೋಡಿದ ಮಹಮ್ಮದೀಯ ಸೈನಿಕರು ತಮ್ಮ ಕಷವು ನಿವಾರಣವಾದೀತೆಂದು ಹರ್ಷಪಟ್ಟರು. ಆದ ರೇನು ? ಅದನ್ನು ನೋಡಿದ ಕೂಡಲೇ ಔರಂಗಜೇಬನು ಆಗ್ರಹವ್ಯಗ್ರನಾಗಿ ಅದನ್ನು ತಂದಿತ್ತ ಭಟನ ತಲೆಯನ್ನು ಕಡಿದುಹಾಕಿದನು. ಇವನ ಈ ಕೂರ ಕೃತ್ಯವನ್ನು ಕೇಳಿ ರಾಜಸಿಂಹನು ಕನಿಕರವನ್ನು ತೊರೆದು ಮತ್ತೆ ಮೊಗಲರೊ ತನೆ ಯುದ್ಧ ಮಾಡಲು ಅಪ್ಪಣೆಯಿತ್ತನು, ರಾಜಪುತ್ರರೆಲ್ಲರೂ ಸಮರ ಕೋಲಾಹಲವನ್ನು ಮಾಡುತ್ತೆ ಶತ್ರುಗಳ ಮೇಲೆ ತರವರ್ಷವನ್ನು ಸುರಿಸಿ ದರು.