ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೬ ಕರ್ಣಾಟಕ ನಂದಿನಿ ಅತ್ತ ಸಯನಪಾಲನು ಶಿವಸಿಂಗನೊಡನೆಯೂ ಭಿಲ್ಲರೊಡನೆಯೂ ಸೇರಿ ಯುದ್ದ ಮಾಡುತ್ತಿರಲು ಒಬ್ಬ ಫಕೀರನು ಎಲ್ಲಿಂದಲೋ ಬಂದು ಅವ ರನ್ನು ಸೇರಿದನು, ಆತನನ್ನು ನೋಡಿ ನಯನಪಾಲನು ಆಶ್ಚರ್ಯದಿಂದ “ ಮಹಾತ್ಮಾ ! ನೀನು ಯಾವಾಗಬಂದೆ ?” ಎಂದು ಕೇಳಿ ಶಿವಶಿಂಗನನ್ನು ಕುರಿತು-ಮಿತ್ರನೆ ! ಈ ಮಹಾನುಭಾವನೇ ದುರ್ಗಾ ದಾಸ ಇಂದಿರಾದೇ ವಿಯರಿಗೆ ಪ್ರಾಣದಾನಮಾಡಿದ ಪುಣ್ಯ ಪುರುಷನು !” ಎಂದು ಹೇಳಿದನು. ಶಿವಸಿಂಗನು ಅತ್ಯಾನಂದಹೊಂದಿ ಆತನನ್ನು ಬಹು ವಿಧವಾಗಿ ಶ್ಲಾಘಿಸಿದನು. ಅನಂತರ ನಯನಪಾಲನು ಶಿವಸಿಂಗನೊಡನೆ ಫಕೀರನನ್ನು ಜೊತೆಗೊಂಡು ಸ್ವಲ್ಪ ದೂರಹೋಗಿ ಅತನನ್ನು ಕುರಿತು ಹೀಗೆ ಸಂಭಾಷಿಸಿದನು:-- ನಯನ-ಮಹಾತ್ಮಾ ! ನೀನು ಇಲ್ಲಿಗೆ ಬಂದ ಕಾರಣವೇನು ? ಫಕೀರ-ರಾಜಪುತ್ರರಿಗೆ ಸಹಾಯವಾಗ ಯುದ್ದ ಮಾಡಬೇಕೆಂದು ಬಂದೆನು. ನಯನ-ನಾವೆಲ್ಲರೂ ಇರುವಾಗ ನಿನಗೇಕೆ ಪ್ರಯಾಸ ? ನಿನಗೆ ಯುದ್ದ ಮಾಡುವುದಕ್ಕೆ ಬರುವುದೇ ? ಈ ಫಕೀರ-ಅಯ್ಯಾ ! ಪ್ರಯಾಸವೇನಿದೆ ? ನಮ್ಮಂಥವರಿಗೆ ಪರೋ ಪಕಾರವೇ ವ್ರತವು, ಇಷ್ಟೆ ಅಲ್ಲ ಲೋಕದಲ್ಲಿರುವ ಸರ್ವವಿಧ ಸೌಖ್ಯ ವನ್ನೂ ನಾನು ಅನುಭವಿಸಿ ತೃಪ್ತನಾಗಿರುವುದರಿಂದ ಪ್ರಾಣದ ಮೇಲೆ ನನ ಗೀಗೆ, ಅಸೂಯೆಯುಂಟಾಗಿರುವುದು, ಯುದ್ದದಲ್ಲಿ ಸತ್ತವರಿಗೆ ವೀರಸ್ವಗೆ ೯ ವು ಪ್ರಾಪ್ತವಾಗುವುದರಿಂದ ನಾನು ಈಗ ಶತ್ರುಗಳೊಡನೆ ಹೋರಾಡಿ ಪ್ರಾಣಬಿಡುವ ಅಪೇಕ್ಷೆಯಿಂದ ಬಂದಿರುವೆನು, ಶಿವಶಿಂಗ ಫಕೀರರಾದ ತಾವು ಯುದ್ಧ ಮಾಡುವ ಅವಶ್ಯವಿಲ್ಲ ವಷ್ಟ ? ಪಕೀರ-ಹಾಗೆಂದು ಸುಮ್ಮನಿರುವಂತಿಲ್ಲ. ವಿಧರ್ಮಿಗಳೊಡನೆ ಹೋರಾಹೋರಿಯಿಂದ ಯುದ್ಧ ಮಾಡಿ ನನ್ನ ಭುಜಬಲ ಪರಾಕ್ರಮಗಳನ್ನು