ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

409 ಕರ್ಕಾಟಕನಂದಿನಿ ಹನ ಆಗ್ರಹಕ್ಕೆ ಮೇರೆಯೇ ಇಲ್ಲ ವಾಯಿತು ಆದರೂ ಏನು ಮಾಡಬಹುದು? ರೋಷವನ್ನು ತಾನೇ ಸಂವರಿಸಿಕೊಂಡನು ; ಜೀವಿಸಿದ್ದರೆ ಎಂದಾದರೂ ರಾಟ ಪುತ್ರರಮೇಲಿನ ಹಗೆ ತನವನ್ನು ತೀರಿಸಿಕೊಳ್ಳುವೆನೆಂದು ನಿರ್ಧರಿಸಿ, ಸೈನಿಕರ ದುರ್ಬಲತೆಯನ್ನು ನೋಡಿ ಕನಿಕರಪಟ್ಟು ರಾಜಸಿಂಹನಿಗೆ ಸಂಧಿಮಾಡಿಕೊ ಳ್ಳಲು ಒಡಂಬಟ್ಟಿರುವುದಾಗಿ ಹೇಳಿ ಕಳುಹಿಸಿದನು. ರಾಜಸಿಂಹನು ಸಂ ತೋಷದಿಂದ ಮೊಗಲರೆಲ್ಲರೂ ತಮ್ಮ ತಮ್ಮ ಆಯುಧಗಳನ್ನೆಲ್ಲಾ ಕಣಿವೆ ಯಲ್ಲಿಯೇ ಬಿಟ್ಟು ನಿರಾಯುಧರಾಗಿ ಹೊರಗೆ ಬರಬೇಕೆಂದೂ ಡಿಲೀನಗರಕ್ಕೆ ಹೋಗುವಾಗ ಮಾರ್ಗಮಧ್ಯದಲ್ಲಿ ಅರಣ್ಯ ಜಂತುಗಳನ್ನು ಅಕಾರಣವಾಗಿ ಹಿಂಸೆಮಡಕೂಡದೆಂದೂ ಬಾದಶಹನಿಗೆ ಹೇಳಿಕಳುಹಲು ಅದಕ್ಕೂ ಆತನ - ಸಮ್ಮತಿಸಬೇಕಾಯಿತು, ಹೀಗೆ ಒಪ್ಪಂದವು ನಡೆದಮೇಲೆ ರಾಜಸಿಂಹನ. ಕಣಿವೆಯ ದ್ವಾರದಲ್ಲಿ ನಿಂತು ಯುದ್ಧ ಮಾಡುತ್ತಿದ್ದ ಭಿಲ್ಲ ರನ್ನು ಸರಿದ. ನಿಲ್ಲುವಂತೆ ಕಟ್ಟು ಮಾಡಿ ಮೊಗಲರು ಒಬ್ಬೊಬ್ಬರಾಗಿ ಹೊರಗೆ ಬರುವಂತೆ ಸೂಚಿಸಿದನು. ಅನ್ನಾಹಾರಗಳಿಲ್ಲದೆ ಬಾಡಿ ಬೆಂಡಾಗಿದ್ದ ಮೊಗಲರು ಒಣ ಗಿದ ಮೋರೆಯನ್ನು ತಗ್ಗಿಸಿಕೊಂಡು ಬರಿಗೈಯಿಂದ ಒಬ್ಬೊಬ್ಬರಾಗಿ ಬರುತ್ತಿ ದ್ದು ದನ್ನು ರಾಜಪುತ್ರರೂ ಭಿಲ್ಲ ರೂ ದುರ್ಗಾದಾಸಶಿವಸಿಂಗರೂ ನೋಡಿ ಅವರ ಕರಕರ್ಮಕ್ಕೆ ಫಲವೆಂದು ಹೇಳುತ್ತಿದ್ದರು. ಶ್ಯಾಮಲಪಂಡಿತನ ವಿನೋದಕ್ಕೆ ತಡೆಯೇ ಇಲ್ಲ ವಾಯಿತು. “ಹೆಬ್ಬುಲಿ ಬೋನಿಗೆ ಸಿಕ್ಕಿ ಇಲಿಯಂತಾಯಿತು. ಬಲೆ, ವಿನೋದ ! " ಎಂದು ಹಾಡಿ ಹಾಡಿ ಕುಣಿ ಯುತ್ತ ಸುತ್ತಲಿದ್ದವರನ್ನು ನಗಿಸುತ್ತಿದ್ದನು. ಸೈನಿಕರೆಲ್ಲರೂ ಹೊರಗೆ ಬಂದಬಳಿಕ ಬಾದಶಹನು ಆಪ್ರದೇಶದಲ್ಲಿ ಯೇ ಬಿಡಾರವನ್ನು ಹಾಕಿಸಿ, ಎಲ್ಲರೂ ಆ ದಿನ ಅಲ್ಲಿಯೇ ವಿಶ್ರಮಿಸಿಕೊಳ್ಳ ಬೇಕೆಂದು ಆಜ್ಞಾಪಿಸಿದನು. ಬಾದಶಹನು ವಿಶ್ರಾಂತಿ ಹೊಂದುತ್ತಿರುವಷ್ಟ ರಲ್ಲಿ ರಾಜಸಿಂಹನು ಬಾದಶಹನ ಜನಾನಾವನ್ನು ಕೆಲವರು ಭಿಲ್ಲರ ಕಾವಲಿ ನೊಡನೆ ಅಲ್ಲಿಗೆ ಕಳುಹಿಕೊಟ್ಟನಲ್ಲದೆ ಸೈನ್ಯದವರಿಗೂ ಬಾದಶಹನಿಗೂ ಬೇ