ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೩೦ಗೆ ಕಾದಷ್ಟು ಆಹಾರ ಪದಾರ್ಥಗಳನ್ನು ಕಳುಹಿದನು. ರಾಜಸಿಂಹನು ತನ್ನ ಶತ್ರು ಗಳಲ್ಲಿ ಕೂಡ ತೋರಿಸಿದ ಔದಾರ್ಯವನ್ನು ನೋಡಿ ಆತನ ಸದ್ಗುಣ ವನ್ನು ಶತ್ರು ಪಕ್ಷದವರೂ ಕೊಂಡಾಡಿದರು. ಔರಂಗಜೇಬನಿಗೆ ಮಾತ್ರ ಮನಸ್ಸಮಾಧಾನವಿರಲಿಲ್ಲ, ಆದರೂ ಆವೇಳೆಯಲ್ಲಿ ಏನು ಮಾಡುವುದಕ್ಕೂ ಅವನಿಗೆ ಸಾಧ್ಯವಿರಲಿಲ್ಲ. ಪಾಪ, ದ್ವೇಷವನ್ನು ತನ್ನ ಕೃತ್ಯೋಶದಲ್ಲಿಯೇ ಅಡಗಿಸಿಕೊಂಡು ಮಾರನೆಯ ದಿನವೇ ಸೈನ್ಯಸಮೇತನಾಗಿ ಡಿಲೀನಗರಕ್ಕೆ ಹೊರಟನು, ಕುಟಿಲನಾದ ಔರಂಗಜೇಬನು ಹೊರಟುಹೋಗುವವರೆಗೂ ರಾಜಸಿಂಹನು ಸೈನ್ಯದೊಡನೆ ಜಾಗರೂಕನಾಗಿದ್ದು ಅವನು ಹೊರಟುಹೋದ ಬಳಿಕ ಸೈನ್ಯಗಳಿಗೆ ವಿಶ್ರಾಂತಿಹೊಂದಲು ಅಪ್ಪಣೆಯಿತ್ತನು. ಮೂವತ್ತೆಂದನೆಯ ಪ್ರಕರಣ (ಸುಖಾಗಮನ) ಆಚಲೇಶ್ವರಾಲಯದಲ್ಲಿ ವೈಕುಂಠಯೋಗಿಯನ್ನು ನೋಡಿದುದು ಮೊದಲು, ಇಂದಿರೆಯು ವೈಕುಂಠಯೋಗಿಯ ಬಳಿಯಲ್ಲಿ ಗೌರವಬುದ್ದಿಯ ೩ ಗಿಸಿ, ಪ್ರತಿದಿನವೂ ಅಚಲೇಶ್ವರಾಲಯದಲ್ಲಿ ಯೋಗಿಯ ಈಶ್ವರಾರಾಧನೆಗೆ ಫತ್ರ ಫಲಪುಷ್ಪಗಳನ್ನೊದಗಿಸುವುದೇ ಮೊದಲಾದ ಸೇವಾ ಕಾರ್ಯಗಳಿಂದ ಕಾಲಕ್ಷೇಪಮಾಡುತ್ತ ಯೋಗಿಯ ಉಪದೇಶಪ್ರಭಾವದಿಂದ ತನ್ನ ಮನಃ ಕ್ಷೇಶವನ್ನು ಪರಿತ್ಯಜಿಸಿ ಪರಮಾರ್ಥತತ್ವವನ್ನು ಚಿಂತನಮಾಡುತ್ತಿದ್ದಳು. ಯುದ್ಧವು ಸಮಾಪ್ತಿಯಾದ ದಿನದ ಸಾಯಂಕಾಲದಲ್ಲಿ ಎಂದಿನಂತೆ ಇಂದಿ ರೆಯ ಅಜಿತಸಿಂಹನನ್ನೆತ್ತಿಕೊಂಡು ಅಚಲೇಶ್ವರಾಲಯಕ್ಕೆ ಬಂದು ನೋಡಿ ದಳು, ಯೋಗಿಯು ಅಲ್ಲಿ ಕಾಣಲಿಲ್ಲ. ಆತನು ಬರುವವರೆಗೂ ಅಜಿತಕು