ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೨ ಕರ್ಣಾಟಕ ನಂದಿನಿ ( ಮಾರನೊಡನೆ ಅತ್ತಿತ್ತ ತಿರುಗಾಡಿ ಬರುವೆನೆಂದು ನಡೆತರುತ್ತ, "ಯುದ್ಧದಲ್ಲಿ ರಾಜಪುತ್ರರಿಗೆ ಸಹಾಯಕನಾಗಿ ಒಂದು ಅಪ್ರತಿಮ ಶೌರ್ಯಪರಾಕ್ರಮದಿಂದ ಶತ್ರುಗಳನ್ನು ನಿಪಾತಮಾಡಿದ ಆ ಧೀರನಾರು ? ಅವನು ನಿಜವಾಗಿಯೂ ಫಕೀರನೆ ? ಫಕೀರನ ಭುಜಗಳಲ್ಲಿ ಅಷ್ಟು ಶೌರ್ಯವೂ ಹೃದಯದಲ್ಲಿ ಅಂ ತಹ ಧೈರ್ಯೊತ್ಸಾಹಗಳೂ ಆ ದಿವ್ಯತೇಜಸ್ಫೂ ಹೇಗೆ ಬರಬೇಕು ?” ಎಂದು ಆಲೋಚಿಸುತ್ತಲೂ ಉತ್ತಮ ರಾಜಪುತ್ರವಂಶದಲ್ಲಿ ಜನ್ಮವೆತ್ತಿ ಅಸಾಯಿಶೂರನಾದ ರಜಪೂತ ವೀರನ ಪತ್ನಿ ಯಾಗಿ ವೀರಮಹಿಷಿಯೆನಿಸಿದ ತಾನು ಅನುಭವಿಸಿದ ಕಷ್ಟ ಕೇಶಗಳನ್ನು ನೆನೆನೆನೆದು ಕೌಶಪಡುತ್ತಲೂ ಪತಿಯ ತೇಜೋವಧೆ ಮಾಡಿದ ಪಾಪಕ್ಕೆ ಇದೇ ನನಗೆ ಪ್ರಾಯಶ್ಚಿತ್ತವ ಲ್ಲವೇ ? ಜಯಪರಾಜಯಗಳು ದೈವಾಧೀನವೆಂದು ತಿಳಿದಿದ್ದರೂ, ಅಭಿಮಾ ನದಿಂದ ಬೀಗಿದ ನಾನು ಅಂದು ನಿರ್ವಂಚನೆಯಿಂದ ಶತ್ರುಗಳೊಡನೆ ಹೋ ರಾಡಿ, ಕಡೆಗೆ ನಿರ್ವಾಹವಿಲ್ಲದೆ ಹಿಂತಿರುಗಿ ಬಂದ ಪತಿಯನ್ನು ಯುದ್ಧ ದಲ್ಲಿ ಶಾಂತನಾಗಿ ಬಂದಿದ್ದಾತನನ್ನು ಗೌರವಿಸುವ ಮಾತು ಹಾಗಿರಲಿ, ರಾಣಿ ಚಂದ್ರಾವತಿಯು ಯಶವಂತಸಿಂಹ ಮಹಾರಾಜನನ್ನು ಧಿಕ್ಕರಿಸಿದಂತೆ ನಾನೂ ಧಿಕ್ಕರಿಸಿದುದರ ಫಲವಲ್ಲವೇ ನನಗೀಗತಿ ಪ್ರಾಪ್ತವಾಯಿತು ? ನನ್ನ ತಿರಸ್ಕಾರ ವಾಕ್ಯಗಳಿಂದ ತಪ್ತ ನಾದಾಮಹಾತ್ಮನು ನನ್ನನ್ನು ಹೇಗೆ ಕ್ಷಮಿಸುವನು ? ಆಕ್ಷಣವೇ ನನ್ನ ಮೇಲಿನ ವ್ಯಾಮೋಹವನ್ನು ತೊರೆದು ಹೊರಟುಹೋದಾತನನ್ನು ಸಂದರ್ಶಿಸಲು ನಾನು ಪಟ್ಟ ಶ್ರಮವು ಇಂದಿಗಾ ದರೂ ಸಾಫಲ್ಯವೆನಿಸಿತೆ ? ಸ್ವಪ್ನದಲ್ಲಿ ಕೂಡ ಆತನ ಸುಕ್ಷೇಮವಾರ್ತೆಯನ್ನು ಕೇಳುವ ಭಾಗ್ಯವು ನನಗೆ ಲಭಿಸಿರುವುದೇ ? ಪತಿಭಾಗ್ಯವು ನನ್ನ ಅದೃಷ್ಟದ ಇನ್ನು ಬರೆದಿರುವುದೆ ? ಪತಿವಿಯೋಗವನ್ನು ಹೊಂದಿ ವ್ಯಥೆಪಡುತ್ತಿರುವ ನಾರೀಜನ್ಮಕ್ಕೆ ಧಿಕ್ಕಾರವು, ನನ್ನಂತಹ ಸಾಹಸಗಾರ್ತಿಯರ ದುರ್ಜಿವ ನಕ್ಕೆ ಧಿಕ್ಕಾರವು ! ನಿಸ್ಸಾರವಾದೀಜನ್ಮಕ್ಕೆ ಮುಂದೆ ಗತಿಯೇನು ? ಅನಾ ಥೆಯರಾದ ಮಹಿಳೆಯರಿಗೆ ಜಗನ್ನಾಥನ ಭಜನೆಯೇ ಗತಿ ! !” ಹೀಗೆ