ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ 404 ಹೇಳುತ್ತ, ಮಂದಗತಿಯಿಂದ ಬರುತ್ತಿರುವಾಗ, ಸ್ವಲ್ಪ ದೂರದಲ್ಲಿ ” ಊ ....ಊ.......ಊ......” ಎಂದು ಒಂದು ವಿಧವಾದ ಯಾತನಾಸ್ವರವು ಕೇಳಿಸಿತು. ಇಂದಿರೆಯು ಕುತೂಹಲದಿಂದ ಸ್ವರವು ಕೇಳಿಬಂದ ಕಡೆಗೆ ಹೊರಟುಬಂದು, ಒಂದು ಮರದ ಕೆಳಗೆ ತಳಿರುಹಾಸಿಗೆಯ ಮೇಲೆ ಮಲಗಿ; ಶರೀರದಲ್ಲೆಲ್ಲ ತಸ್ಯ ಘಾಯಗಳಿಂದ ರಕ್ತವು ಸುರಿಯುತ್ತಿರಲು, ವ್ರಣದ ಯಾತನೆಯಿಂದಲೂ ಬಾಯಾರಿಕೆಯಿಂದಲೂ ಬಾಯ್ದಿಡು ನರಳುತ್ತಿರುವ ವೀರಪುರುಷನೋರ್ವನನ್ನೂ ಆತನ ಬಳಿಯಲ್ಲಿ ಕುಳಿತು ಗಾಳೀಬೀಸುತ್ತಿದ್ದ ಭಿಲ್ಲ ನನ್ನ ಕಂಡು ನಮಾಚಾರವೇನೆಂದು ಕೇಳಿದಳು. ಬಿಲ್ಲನ್ನು* ತಾಯಿ } ಈತನೊಬ್ಬ ರಾಜಪುತ್ರನಂತಿರುವನು. ಈತನ ಚರಿತ್ರೆ ಅತ್ಯ ದ್ಭುತವಾಗಿರುವುದು ಫಕೀರನ ವೇಷದಿಂದ ರಾಜಪುತ್ರರಿಗೆ ಸಹಾಯ ವಾಗಿ ಮೊಗಲರೊಡನೆ ಘೋರವಾದ ಯುದ್ಧ ಮಾಡಿದನು. ಶತ್ರುಗಳ ಶಸ್ತ್ರಘಾತಗಳಿಂದ ಶರೀರವೆಲ್ಲಾ ಘಾಯವಾಗಿ ಮೂರ್ಟೆಬೀಳಲು, ನಮ್ಮ ಪ್ರಭು ಶಿವಸಿಂಗಮಹಾರಾಜನು ಈತನನ್ನು ಎತ್ತಿಕೊಂಡು ಬಂದು ಇಲ್ಲಿ ಮಲಗಿಸಿ, ನನ್ನನ್ನು ಕಾವಲಿರಿಸಿ ಹೋಗಿರುವನು. ” ಎಂದು ಉತ್ತರವಿತ್ತನು ಇಂದಿರೆಯು ಕುತೂರಲಾಧಿಕ್ಯದಿಂದ ಬಂದು ಮಲಗಿದ್ದಾತನನ್ನು ದೃಷ್ಟಿಸಿ ನೋಡಿ ಪೂರ್ವ ವೃತ್ತಾಂತವಾವುದನ್ನೂ ನೆನಪಿಗೆ ತಂದು. “ ನಾನಷ್ಟು ಭಾಗ್ಯವಂತಳೆ ? ಇದು ಕೇವಲ ನನ್ನ ಭ್ರಾಂತಿ !” ಎಂದು ತನ್ನಲ್ಲಿ ತಾನೇ ಆಲೋಚಿಸುತ್ತಿರುವಾಗ ಮಲಗಿದ್ದಾತನು ಬಾಯಾರಿ ಕೆ ಯೆಂದು ನಾಲಿಗೆಯನ್ನು ನೀಡಿ, ಸೀರ-ನೀರೆಂದು ಮೆಲ್ಲನೆ ಹೇಳುತ್ತಿದ್ದು ದನ್ನು ಕೇಳಿ ತಣಕ್ಷವೇ ಕಂಕುಳಲ್ಲಿದ್ದ ಅಜಿತಕುಮಾರನನ್ನು ಕೆಳಗೆ ಕುಳ್ಳಿ ಐಸಿ, ಬಾಲನಮುಂದೆ ಒಂದು ಹಣ್ಣನ್ನಿರಿಸಿ, ಬೆಲ್ಲನಿಗೆ ಹೇಳಿ ನೀರನ್ನು ತರಲು ಹೊರಟುಹೋದಳು. ಅಷ್ಟರಲ್ಲಿ ಮಹಮದೀಯ ಭಟ್ಟನೊಬ್ಬನು ಖಡ್ಡಪಾಣಿಯಾಗಿ ರೋಷಾವೇಷದಿಂದ ಪ್ರಮನಂತಾಗಿ ಘರ್ಜಿಸುತ್ತ ಅಲ್ಲಿಗೆ ಬಂದು