ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

A೦೪ ಕರ್ಣಾಟಕ ನಂದಿನಿ ಅಟ್ಟಹಾಸದಿಂದ ಎಲಾ: ನನ್ನ ತಮ್ಮನನ್ನು ಕೊಂದುದಕ್ಕೆ ನಿನಗೆ ತಕ್ಕ ಶಿಕ್ಷೆಯಾಯಿತಲ್ಲವೆ ? ಆಗಲಿ, ನಿನ್ನ ಪ್ರಾಣವನ್ನೂ ಈ ಬಾಲನ ಪ್ರಾಣವನ್ನೂ ನನ್ನ ದ್ವೇಷಕ್ಕೆ ಬಲಿ ತೆಗೆದುಕೊಳ್ಳುವೆನು. “ ಎಂದು ಕರ ಖಡ್ಡ ವನ್ನು ತಿರಿಗಿಸುತ್ತ ಬಂದನು. ಅಷ್ಟರಲ್ಲಿ ಬಿಲ್ಲನು ಆಗ್ರಹದಿಂದೆ ದ್ದು ಬಲವಾದ ದಂಡವನ್ನು ಹಿಡಿದುಕೊಂಡು ಬಂದು ಆತನನ್ನು ಅಡ್ಡಗಟ್ಟಿ ದೃಢಮುಷ್ಟಿಯಿಂದ ಆತನ ಕೈಗಳನ್ನು ಹಿಡಿದು ಸ್ವಲ್ಪ ದೂರ ಎಳೆದುಕೊಂ ಡು ಅವನೊಡನೆ ದ್ವಂದ್ವ ಯುದ್ಧಕ್ಕೆ ನಿಂತನು. ಬಿಲ್ಲನು ಎಷ್ಟು ಹೋರಾಡಿ ದರೂ ಕಡೆಗೆ ಮಹಮ್ಮದೀಯನ ಖಡ್ಗಕ್ಕೆ ತುತ್ತಾಗಿ ಕೆಳಗೆ ಬಿಟ್ಟನು. ಮಹಮ್ಮದೀಯನು ಮತ್ತೂ ರಭಸದಿಂದ ಮಲಗಿದ್ದ ರಾಜಪುತ್ರನ ಬಳಿಗೆ ಬಂದನ, ಯಾತನೆ ಇನ್ನು ಸಹಿಸಲಾರದೆ ನರಳುತ್ತಿದ್ದ ರಾಜಪೂತವಿರನು ಶತ್ರುವಿನ ಅಟ್ಟಹಾಸವನ್ನು ಕೇಳಿ ಕಣ್ಣೆರದು ನೋಡಿ ರೋಷದಿಂದ ಪರ ವಶನಾಗಿ ಧಿಗ್ಗನೆದ್ದು ಕಟಿಯಲ್ಲಿದ್ದ ಖಡ್ಗವನ್ನು ಹಿರಿದು ರಭಸದಿಂದ ಮೇಲೆ ಬೀಳಲು ಬರುತ್ತಿದ್ದ ಮಹಮ್ಮದೀಯನ ಕೊರಳಿಗೆ ಸರಿಯಾಗಿ ಹೊಡೆ ದನು, ಮಹಮ್ಮದೀಯನು ಗತಪ್ರಾಣನಾಗಿ ಕೆಳಗೆ ಬಿದ್ದನು, ರಾಜ ಪುತ್ರನು ಮತ್ತೆ ಆಯಾಸದಿಂದ ಮೂರ್ಛಿತನಾಗಿ ಬಿದ್ದು ಬಿಟ್ಟನು. ನೀರನ್ನು ತರಲು ಹೋಗಿದ್ದ ಇಂದಿರೆಯು ಎಲೆಗಳಿಂದ ಮಾತ್ರ ವನ್ನು ಮಾಡಿ ಅದರಲ್ಲಿಯೇ ನೀರನ್ನು ತುಂಬಿಕೊಂಡು ಅವಸರದಿಂದ ಬರ ತಾ ಅಲ್ಲೆಲ್ಲಾ ರಕ್ತವು ಸುರಿದಿದ್ದು ದನ್ನೂ ಅಲ್ಲಿ ಸತ್ತು ಬಿದ್ದಿದ್ದ ಬಿಲ್ಲನ ಮತ್ತೂ ಮಹಮ್ಮದೀಯನ ದೇಹಗಳನ್ನೂ ಕಂಡು ತನ್ನ ಬಾಲಕನ ಗತಿ ಯೇನಾಗಿರುವುದೋ ಎಂಬ ಭಯದಿಂದ ಜಾಗ್ರತೆಯಾಗಿ ಬಂದುನೋಡಿ ಆಡುತಲಿದ್ದ ಅಜಿತಕುಮಾರನನ್ನು ಕಂಡು ಸಂತೋಷ ಪಟ್ಟು ರಾಜಪುತ್ರನ ಬಳಿಗೆ ಬಂದು, ಆತನ ಮುಖದ ಮೇಲೆ ನೀರನ್ನು ೬ಳಿದು, ಮೊದಲು ತುಟಿ ಗಳನ್ನು ನೆನಿಸಿ, ಸ್ವಲ್ಪ ಸ್ವಲ್ಪವಾಗಿ ನೀರನ್ನು ಕುಡಿಸಿದಳು.