ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಮಲಾದೇವಿ ೩೦೫ ಇಂದಿರೆಯ ಈ ಆದರೋಪಚಾರದಿಂದ ರಾಜಪುತ್ರನು ಚೇತರಿಸಿ ಕೊಂಡು ತನಗೆ ಚೈತನ್ಯವನ್ನುಂಟುಮಾಡಿದವರಾರೆಂದು ಕಣೆ ರೆದು ಇಂದಿರೆ ಯನ್ನು ಎವೆಮುಚ್ಚದೆ ನೋಡಿ, ಪ್ರೇಮಾತಿಶಯದಿಂದಲೂ ಆತುರದಿಂದಲೂ ಅವಳ ಕೊರಳಮೇಲೆ ತನ್ನ ಬಲಗೈಯಿರಿಸಿ, 'ಪ್ರಾಣೇಶ್ವb ! ಇಂದಿರಾ! ಇಂದಿರಾ ! ಇನ್ನೂ ಗುರ್ತಿಸಲಿಲ್ಲವೆ ? ನನ್ನನ್ನು ಮರೆತೇ ಬಿಟ್ಟೆಯಾ ಎಂದು ಕೂಗುತ್ತ ಮತ್ತೆ ಮೂರ್ಛಿತನಾದನು. ಇಂದಿರೆಯ ಅಂತಸ್ಥವಾಗಿದ್ದ ದುಃಖವು ಹೊರಹೊಮ್ಮಿತು ; ಕಣ್ಣ ಇಲ್ಲಿ ಸಂತತ ಧಾರೆಯಾಗಿ ನೀರು ಸುರಿದುಹೋಯಿತು. ಸತಿಯ ಶಿರವನ್ನು ತನ್ನ ತೊಡೆಯ ಮೇಲಿರಿಸಿ ಶೈತ್ಯೋಪಚಾರ ಮಾಡಿದಳು. ಬಹಳ ಹೊತ್ತಿನ ಮೇಲೆ ರೂಪಸಿಂಗನು ಎಣ್ಣೆ, ಇಂದಿರಾ ! ಈಗಲಾದರೂ ನಿನ್ನ ಪತಿಯು ವೀರಥರುವನೆಂದು ನಂಭಾವಿಸುವೆಯಾ: ಹಿಂದಿನ ತಪ್ಪನ್ನು ಮನ್ನಿ ಸುವೆಯಾ ? ಎಂದು ಪ್ರಾರ್ಧಿಸಿದನು. ಇಂದಿರೆ: 'ನಾಫಾ! ಅನೇಕ ನಿಷ್ಟುರೋ ಕಿಗಳಿಂದ ದೇಶತ್ಯಾಗಿಗ ಇನ್ನಾಗಿ ಮಾಡಿದ Eಳ ದಾಸಿಯ ಅಪರಾಧವನ್ನು ತಾವು ಕ್ಷಮಿಸಬೇಕಲ್ಲದೆ. ತಾವು ಕ್ಷಮೆಯನ್ನು ಕೋರುವುದೇಕೆ?” ರೂಪಸಿಂಗ.-ಪ್ರಾಣೇಶ್ವರಿ ! ಇನ್ನು ಚಿಂತೆಯನ್ನು ಬಿಟ್ಟು ಬಿಡು, ಅಚಲೇರನ ಅನುಗ್ರಹದಿಂದ ಇಷ್ಟು ಮಟ್ಟಿಗಾಯಿತು. ನಿನ್ನನ್ನು ನೋಡುವ ಭಾಗ್ಯವಿಲ್ಲ ವೆಂದು ಪತಶನಾಗಿದ್ರೆ ನನಗೆ ಮತ್ತೆ ನಿನ್ನ ಸಂದರ್ಶನವಾ ಯಿತು, ಜಗದ್ವಿಖ್ಯಾತವಾದ ನಿನ್ನ ಕೀರ್ತಿಯನ್ನು ಕುರಿತು ನಾನು ಅತ್ಯಂತ ಹೆಮ್ಮೆ ಪಡುತ್ತಿರುವೆನು. ಇದಕ್ಕೂ ಹೆಚ್ಚಾಗಿ ನಾನೇನನ್ನು ಹೇಳಲಿ ? ಇಂದಿರೆಗೆ ಪತಿಯ ಮಾತುಗಳಿಂದ ಆನಂದವೂ ಆತನ ಶರೀರದ ಘಾಯಗಳನ್ನು ನೋಡಿ ಬದುಕುವನೋ ಇಲ್ಲವೋ ಎಂಬ ಸಂಶಯವೂ ಏಕ ಕಾಲದಲ್ಲಿ ಉಂಟಾಗಲು ಮಾತಿಲ್ಲದೆ ನೋಡುತ್ತಿದ್ದಳು. ಪತ್ನಿ ಯ ಸಂದೇಹವನ್ನು ನೋಡಿ ರೂಪಸಿಂಗನು, “ಇಂದಿರಾ! ಭಯಪಡಬೇಕಾಗಿಲ್ಲ