ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಷುಲಾದೇವಿ ೩೦. ಲೂ ಯೋಗಿಯ ತಪಃಪ್ರಭಾವದಿಂದಲೂ ರೂಪಸಿಂಗನಿಗೆ ಬಾಧೆ ಕಡಿಮೆ ಯಾಗುತ್ತ ಬಂದವು. ಇಷ್ಟರಲ್ಲಿ ಶಿವಸಿಂಗನೂ ದುರ್ಗಾದಾಸನೂ ಅಲ್ಲಿಗೆ ಬಂದರು, ದುರ್ಗಾ ದಾಸನು, ತನ್ನ ತಂಗಿ, ತನ್ನ ತೊಡೆಯಮೇಲೆ ಪುರುಷನೋರ್ವನ ತಲೆಯನ್ನಿ ಟ್ಟು ಕೊಂಡು ಕುಳಿತಿರುವುದನ್ನು ನೋಡಿ ಮಂತ್ರಮುಗ್ಧನಂತೆ ನಿಂತನು. ದುರ್ಗಾ ದಾಸನ ಸ್ಥಿತಿಯನ್ನು ನೋಡಿ ಕವದನನಾಗಿ ಯೋಗಿಯ 'ಅಯ್ಯಾ ದುರ್ಗಾದಾಸ ! ನೀನು ಅನ್ಯತಾ ಭಾವಿಸಬೇಡ, ನಿನ್ನ ತಂಗಿಯ ಪತಿ ಯಾದ ರೂಪಶಿಂಗನೇ ಈತನು, ಸತೀಶನ ವೇಷದಿಂದ ನಿಮ್ಮಿಬ್ಬರ ಪ್ರಾಣ ವನ್ನು ಉಳಿಸಿದವನೂ ಯುದ್ಧದಲ್ಲಿ ನಿ. ಜಯವಾಗುವಂತೆ ಶತ್ರುಗಳೊ ಡನೆ ಕ ನೀರಾಡಿದವನೂ ಈತನೆ!” ಎಂದು ಶ್ಲಾಘಿಸಿದನು. - ದುರ್ಗಾದಾಸನ ಆನಂದಕ್ಕೆ ಪ ರವೇ ಇಲ್ಲದಂತಾಯಿತು. ಅನೇಕ ಒಗೆಯಿಂದ ರೂಪಸಿಂಗನನ್ನು ಅಭಿನಂದಿಸಿದನು. ಶಿವಸಿಂಗನು ನಯನಪಾಲ ನೊಡನೆ ಈತನು ಸಂಭಾಷಿಸಿದುದು ಮೊದಲ ಯುದ್ಧದಲ್ಲಿ ಪ್ರಾಂತನಾಗಿ ಕೆಳಗೆ ಬೀಳುವವರೆಗೂ ಶತ್ರಗಳಿಗೆ ತೋರಿಸಿದ ಪರಾಕ್ರಮಾದಿಗಳನ್ನು ವರ್ಣಿಸಿದನು ಈ ಮಾತುಗಳಿ೦ದ ಇ೦ದಿರೆಗಾದ ಆನಂದಾತಿಶಯವನ್ನು ವರ್ಣಿಸಲಳವಲ್ಲ ದಂತಾಯಿತು. ರೂಪತಿಂಗನು ತನ್ನ ಬಾಲರಾಜನಾದ ಅಜಿತಕುಮಾರನನ್ನು ಅಪ್ಪಿ ಮುದ್ದಾಡುತ್ತ ತನ್ನ ಆಯಾಸವನ್ನೆಲ್ಲ ಮರೆತನು. ಆ ಪರಿಸಮಾಪ್ತಿ. ಇಲ್ಲಿಗೆ ಕಥೆ ಸಮಾಪ್ತವಾಯಿತು. ವಿಜಯಸಿಂಹನು ಶಿವಸಿಂಗನ ಮಾಡಿದ ಸಾಹಸಕೃತ್ಯಗಳಿಗೆ ಸಂತುಷ್ಟನಾಗಿ ಮಗನನ್ನು ಆದರದಿಂದ ರೂಪ ನಗರಕ್ಕೆ ವೈ ಭವಪೂರ್ವಕವಾಗಿ ಕರೆಯಿಸಿ ಕೊಂಡನು. ಸುಮುಹೂರ್ತದಲ್ಲಿ ವಿಮಲೆಯನ್ನು ರಾಜಸಿಂಹನಿಗೂ ಪದ್ಮ ಸಿನ್ನು ಶಿವಸಿಂಗನಿಗೂ ಕೊಟ್ಟು ಅತ್ಯಂತ ವೈಭವದಿಂದ ವಿವಾಹವನ್ನು ಮಾಡಿದನು. ಚಂದ್ರಾವತಿಯು