ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರ್ಜಾಟಕಕ್ರಂಥಮಾಲಿ mmmmmmam (Aಳ್ಳುವುದಕ್ಕಾಗಲಿ, ಇಲಿಗಳು ತೋಡುವದಕ್ಕಾಗಲಿ ಅವಕಾಶ ಕೊಡ ಕೂಡದು, ಹೊಗೆಯು ಧಾರಾಳವಾಗಿ ಹೊರಟು ಹೋಗುವಂತೆಯ ಚೌಗಿಗೆ ಸ್ವಲ್ಪವೂ ಆಸ್ಪದವಿಲ್ಲದಂತೆಯ ನೋಡಿಕೊಳ್ಳಬೇಕು. - ಮನೆಯಲ್ಲಿ ಪ್ರತಿಯೊಂದು ವಸ್ತುವಿಗೂ, ಪ್ರತಿಯೊಂದು ಕಲ ಕಕ್ಕೂ ಗೊತ್ತಾದ ಒಂದೊಂದು ಸ್ಥಳವಿರಬೇಕು, ಮತ್ತು ಎಲ್ಲವೂ ಶುಚಿ ಯುಗಿಯ, ಅಂದವಾಗಿಯೂ ಇರಬೇಕು, ಮುಖ್ಯವಾಗಿ ಅಡಿಗೆಯ ಮುತ್ತು ನೀರಿನ ಪಾತ್ರೆಗಳು ನಿಕ್ಕಲವಾಗಿಯ ನೋಟಕ್ಕೆ ಅಂದವಾಗಿರುವ ಹಾಗೆ ಸ್ವಚ್ಛವಾಗಿಯೂ ಇರಬೇಕು, ಅಡಿಗೆಯ ಪಾತ್ರೆಗಳನ್ನು ಬೆಳಗಿದ ಸಂತರ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಅಥವಾ ಬೆಂಕಿಯ ಮೇಲೆ ಇಟ್ಟಿರ ಬೇಕು. ಕಳಾಯಿ ಇಲ್ಲದೆ ಹಿತ್ತಾಳೆಯ ಅಥವಾ ತಾವದ ಪಾತ್ರೆಗಳಲ್ಲಿ ಅಡಿಗೆಯನ್ನು ಮಾಡಕೂಡದು ನೀರಿನ ಪಾತ್ರೆಗಳನ್ನು ಮುಖ್ಯವಾಗಿ ಒಳ ಗಣೆ ಚೆನ್ನಾಗಿ ಉಜ್ಜಿ ತೊಳೆಯಬೇಕು, ಮಚ್ಚದೆ ಯಾವ ಪದಾರ್ಥ" ಗಳನ್ನೂ ತೆರೆದಿಟ್ಟರಕೂಡದು, ಹಾಗೆ ತೆರೆದಿದ್ದರ ನೋಳಿ, ಹುಳು, ಧ.೧ಳು ಮೊದಲಾದುವು ಬಿದ್ದು ಕೆಡಿಸುವ ಸಂಭವವುಂಟು. ಹಾಲಿನ ಪಾತ್ರೆಯ ಮತ್ತು ಅದನ್ನು ಇಡುವ ಸ್ಥಳದ ವಿಷಯದಲ್ಲಿ ಹೆಚ್ಚು ಜಾಗರೂಕತೆಯು ಆವಶ್ಯಕ, ಅಕ್ಕಿ, ಬೇಳೆ ಮೊದಲಾದ ಧಾನ್ಯಗಳು ತರಕಾಗಿ ಉಪ್ಪಿನಕಾಯಿ ಮೊದಲಾದವುಗಳಲ್ಲಿ ಹುಳುಗಳು ಬೀಳಲವಕಾಶವಿಲ್ಲದಂತೆ ರಕ್ಷಿಸ ಬೇಕು. ಕರ್ಚೆ, ಬೆಂಚು ಮೊದಲಾದ ಮರದ ಸಾಮಾನುಗಳನ್ನು ಧೂಳ ಸೇರದಂತೆ ನಿತ್ಯವೂ ಒರಸುತ್ತಲೂ ಆಗಾಗ್ಗೆ ಗಚ್ಛೆಣ್ಣೆಯನ್ನು ಹಾಕಿಸುತ್ತಲೂ ಇರಬೇಕು, ಪುಸ್ತಕಗಳಿಗೆ ಹುಳ ಹತ್ತದಂತೆ ನೋಡಿಕೊಳ್ಳ ಬೇಕು, ಇದಕ್ಕಾಗಿ ನ್ಯಾಪ್ತರ್ಿ ಗುಳಿಗೆಗಳನ್ನುಪಯೋಗಿಸುವುದು ಮೇಲು ನಾವು ನಿದ್ರೆಯಿಂದ ಎದ್ದ ಕೂಡಲೆ ಹಾಸಿಗೆಯನ್ನು ಸುತ್ತಿಬಿಡದೆ ಅದನ್ನು ಬಿಸಿನಲ್ಲಿ ಅಥವಾ ಗಾಳಿಯಲ್ಲಾದರೂ ಸ್ವಲ್ಪ ಹೊತ್ತು ಆರಹಾಕಬೇಕು.