ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನರವಳಿ v/

  • * AAAA,

ಹತ್ತಿಯ ಬಟ್ಟೆಗಳಾದರೆ ಕಡೆಗೆ ವಾರಕ್ಕೊಂದುಸಲವಾದರೂ ಬಗೆಯಬೇಕು. ಇದರಿಂದ ಬಟ್ಟೆಗಳು ಬೆವರು ಮೊದಲಾದ ಕಳೆಯಿಲ್ಲದೆ ಶುದ್ಧವಾಗಿರು ವುವು, ಮಲಗುವುದಕ್ಕೆ ಒತ್ತಾಗಿ ನೆಯ ಹಂಖಾನೆ, ತುಂಬ ದಪ್ಪವಾದ ಸುಪ್ಪತ್ತಿಗೆ, ೩ಂಗಿನ ಮಂಚ, ಇಂಥವುಗಳಿಗಿಂತಲೂ ಗಾಳಿಯಾಡಲನುಕೂ ಲಿಸುವ ಕಂಬಳಿಗಳು ಚಾಪೆ, ತೆಳುವಾದ ಸುಪ್ಪತ್ತಿಗೆ, ಕೇವಲ ಎತ್ತರವಿಲ್ಲದ ತಲೆದಿಂಬು, ಮರದ ಹಲಗೆಯ ಮಂಚ ಇಂಥವುಗಳು ಉತ್ತಮ, ಸರದಾ ಕೇವಲ ಮೃದುವಾದ ಹಾಸಿಗೆಯ ಮೇಲೆ ಮಲಗುವ ಅಭ್ಯಾಸವಾದರೆ ಕಾಲಕ್ರಮದಲ್ಲಿ ಮೂಲವ್ಯಾಧಿಯು ಪ್ರಾಪ್ತವಾಗುವುದೆನ್ನುವರು. ಮಲ ಗುವ ಮನೆಯಲ್ಲಿ ದೊಡ್ಡದೀಪಗಳನ್ನಿಡಬಾರದು. ಇದರಿಂದ ಅಲ್ಲಿಯ ವಾಯು ಕಟ್ಟು ಅಲ್ಲಿ ಮಲಗಿದವರ ಆರೋಗ್ಯವನ್ನು ಕಡಿಸುವುವು. ವ್ಯಾಯಾಮ, ಮನುಷ್ಯರು ಮಾಡುವ ಪ್ರತಿಯೊಂದು ಕೆಲಸವು ದೇಹಬಲದಿಂದ ಅಥವಾ ಬುದ್ದಿ ಬಲದಿಂದ ನಡೆಯುವುದಷ್ಟೆ, ಕಾಯಪುಸ್ಸಿಯು ಸರಿಯಾಗಿ ದ್ದರೆ ಬುದ್ದಿಯು ಕೆಲಸಮಾಡುವುದಕ್ಕೆ ತಕ್ಕಂತೆ ಒಳ್ಳೆಯ ಸ್ಥಿತಿಯಲ್ಲಿರು ವುದು. ಆದುದರಿಂದ ಯಾವುದು ಸರಿಯಾಗಿ ನಡೆಯುವುದಕ್ಕೆ ದೇಹದಾರ್ಡ್ಯ ವು ಇರಲೇಬೇಕೆಂದಾಯಿತು, ಇದಕ್ಕೆ ಹಿಂದೆ ತಿಳಿಯಿಸಿದವುಗಳು ಮಾತ್ರ ವಲ್ಲದೆ ವ್ಯಾಯಾಮವೂ ಆವಶ್ಯಕ. ಈಚೀಚೆಗೆ ನಾಗರೀಕತೆಯು ಹೆಚ್ಚುತ ಬಂದಂತೆಲ್ಲಾ ಜನರು ಕೈಗಾರಿಕೆ, ವಿದ್ಯಾಭ್ಯಾಸ ವ್ಯಾಪಾರ, ಇಂತಹ ಯಾವು ದಾದರೊ೦ದುದ್ದೇಶದಿಂದ ಪಟ್ಟಣವಾಸವನ್ನೇ ಹೆಚ್ಚಾಗಿ ಬಯಸುತ್ತಿರು ವರು, ಅಲ್ಲಿ ಹೆಚ್ಚು ಜನಗಳು ಕಡಿಮೆಯಸ್ಥಳದಲ್ಲೇ ಒತ್ತರಿಸಿಕೊಂಡು ತಕ್ಕಷ್ಟು ಗಾಳಿ ಬೆಳಕುಗಳಿಗನುಕೂಲವಲ್ಲದ ಮನೆಗಳಲ್ಲಿ ವಾಸಮಾಡಬೇ ಕಾಗುವುದು. m