ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ಎಷ್ಟೇ ಬುದ್ಧಿವಂತನಾಗಿ ಒಳ್ಳೆಯ ಶಾರೀರವನ್ನು ಪಡೆದಿದ್ದರೂ ಸಮಯ ದಲ್ಲಿ ಉತ್ಸಾಹಗೊಳ್ಳದಿದ್ದರೆ ಆತನ ಸಂಗೀತವು ಕಳೆಗಟ್ಟುವುದಿಲ್ಲ. ಉಲ್ಲಾಸವೂ ಉತ್ಸಾಹವೂ ತಾನಾಗಿ ಹುಟ್ಟಿ ಬೇಕಲ್ಲದೆ ನಿರ್ಬಂಧದಿಂದ. ಪಡೆಯತಕ್ಕುವಲ್ಲ. ಒಂದಾನೊಂದು ಕಾಲದಲ್ಲಿ ಹೊಟ್ಟೆಯಪಾಡಿಗಾಗಿ ಕಾದಿ ನಲ್ಲಿ ಹಾರಾಡುತ್ತಲೂ ಓಡಾಡುತ್ತಲ ನಡು ನಡುವೆ ಉಲ್ಲಾಸದಿಂದ ಮದ್ದು ರವಾಗಿ ಗಾನಮಾಡುತ್ತಲೂ ಇದ್ದ ಒಂದು ಹಕ್ಕಿಯನ್ನು ಒಬ್ಬ ಮನುಷ್ಯನು ತಂದು ಪಂಜರದಲ್ಲಿ ಕೂಡಿ ಬೇಕಾದಷ್ಟು ತಿಂಡಿಯನ್ನು ಮುಂದಿಟ್ಟು ಈ ಹಾಡು ಹಾಡು' ಎಂದು ಹೇಳುತ್ತ ಎಷ್ಟು ನಿರ್ಬ೦ಧಪಡಿಸಿದರೂ ಅದು ತನ್ನ ಸ್ವಾತಂ ತ್ರಕ್ಕೆ ಭಂಗಬಂದುದಕ್ಕಾಗಿ ಕೊರಗಿ ಹೇರುತ್ಯ ಆಹಾರವನ್ನು ಕೂಡ ತೆಗೆದುಕೊಳ್ಳದೆ ಸತ್ತು ಹೋಯಿತೇ ಹೊರತು ಉಲ್ಲಾಸದಿಂದ ಒಂದು ಸಲವೂ ಹಾಡಲಿಲ್ಲ. ಉತ್ಸಾಹವೊಂದಿದ್ದರೆ ಯೋಗ್ಯತೆಯಲ್ಲಿ ಸ್ವಲ್ಪಮಟ್ಟಿಗೆ ನ್ಯೂನತ ಯಿದ್ದರೂ ಸರಿಮಾಡಿಕೊಳ್ಳಬಹುದು, ಉತ್ಸಾಹವೆಂದರೆ ಯಾವುದಾದ ಕೊಂದು ವಿಷಯವನ್ನು ಕುರಿತು ಸುಮ್ಮನೆ ಆಲೋಚಿಸುತ್ತ ಹೀಗೆಹೀಗೆ ಮಾಡಿದರೆ ಹೀಗೆ ಹೀಗೆ ಆಗುವುದೆಂದು ಆನಂದಪಟ್ಟುಕೊಳ್ಳುತ್ತ ಕಲಸಕ್ಕೆ ಕೈಹಾಕದೆ ಪುಡಿಹಿಟ್ಟನ್ನು ಕುರಿತು ಯೋಚಿಸುತ್ತಿದ್ದ ಬ್ರಾಹ್ಮಣನಂತ ಸೋಮಾರಿಯಾಗಿ ಕುಳಿತಿರುವುದಲ್ಲ, ಕಷ್ಟಪಟ್ಟು ಕೆಲಸಮಾಡಿದರೇನೇ ಉತ್ಸಾಹಫಲವು ತೋರುವುದು, ಆದುದರಿಂದ ಆಲೋಚನೆಯನ್ನೂ ಅದಕ್ಕೆ ತಕ್ಕಂತೆ ಕೆಲಸವನ್ನೂ ಉತ್ಸಾಹದಿಂದ ಮಾಡಬೇಕು. ನಮ್ಮ ಜೀವಮಾನವನ್ನು ಬರೀವರ್ಷಗಳಿಂದ ಎಣಿಸಕೂಡದೆಂದೂ ನಾವು ಉತ್ಸಾಹದಿಂದ ಎಷ್ಟು ಕೆಲಸಗಳನ್ನು ಹೇಗೆಮಾಡಿದ್ದೇವೆ, ಎಂಬುದರ ಮೇಲೆ ಪರಿಗಣಿಸಬೇಕೆಂದೂ ಒಬ್ಬ ವಿದ್ವಾಂಸನು ಹೇಳಿರುವನು. ಈ ಹವನ್ನು ಹುಮ್ಮಸ್ಸು ಎಂದೂ ಕರೆಯುವುದುಂಟು. ದೊಡ್ಡವರ ಮನೆ