ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ ಕರ್ಣಾಟಕ ಗ್ರಂಥಮಾಲೆ wwwmmonwwwಸಿ ದೇಶದಲ್ಲಿ ಕಮ್ಯೂಟ್ ಎಂಬ ಒಬ್ಬ ರಾಜನಿದ್ದನು. ಅನೇಕರು ಅತನಿಂದ ಬಹುಮಾನಗಳನ್ನು ಪಡೆಯಬೇಕೆಂಬ ಆಶೆಯಿಂದ ಸದಾ ಆತನನ್ನು ಇಂದು ಚಂದ್ರ ದೇವೇಂದ್ರ ಎಂದು ಸುಮ್ಮನೆ ಹೊಗಳುತ್ತಿದ್ದರು. ಇದು ಅತನಿಗೆ ಇಷ್ಟವಿರಲಿಲ್ಲ. ಒಂದು ದಿನ ರಾಜನು ಸಭೆ ಕರೊಡನೆ ಸಮುದ್ರ ತೀರ ದಲ್ಲಿ ಕುಳಿತು ಮಾತನಾಡುತ್ತಿದ್ದಾಗ ಅವರಲ್ಲಿ ಹಲವರು - ಎಲೈ ಮಹಾ ರಾಜನೆ, ನಿನ್ನ ಅಧಿಕಾರವು ಲೋಕೋತ್ತರವಾದುದು. ಈ ಸಮುದವು ಕೂಡ ನಿನ್ನ ಆಜ್ಞೆಯನ್ನು ತಿರಸಾವಹಿಸಿ ನಡೆಯುವುದು ಎಂದರು ಆಗ ದೊರೆಯು ಇವರ ಅವಿವೇಕವನ್ನು ತಿದ್ದಬೇಕೆಂದು ಯೋಚಿಸಿ 'ಅಯ್ಯ ಸಮುದವೆ, ನಿನ್ನ ಅಲೆಗಳು ಇನ್ನು ಮುಂದಕ್ಕೆ ಬರಕೂಡದು, ಎಂದನು. ಆದರೂ ಒಂದೆರಡು ನಿಮಿಷಗಳಲ್ಲಿ ಸಮುದ್ರದ ಅಲೆಗಳು ಮುಂದಕ್ಕೆ ನುಗ್ಗಿ ಬರುತ್ತ ಇವರು ಕುಳಿತಿದ್ದ ಸಳವನ್ನು ನೆನೆಯಿಸತೊಡಗಿದವು. ಆ ದೊರೆಯು ತನ್ನನ್ನು ಹೊಗಳಿದವರನ್ನು ಕುರಿತು ಅಯ್ಯ ಏಕೆ ಸಮುದ್ರವು ನನ್ನ ಅಪ್ಪಣೆಯಂತೆ ನಡೆಯುವುದಿಲ್ಲ ? ಇಲ್ಲದ ಗುಣಗಳನ್ನು ಆರೋಪಿಸಿ ವೃಥಾ ಮನುಷ್ಯರನ್ನು ಏತಕ್ಕೆ ಹೊಗಳ ವಿರಿ ? ಇದಕ್ಕೆ ಬದಲಾಗಿದೇವ ರನ್ನು ಸ್ತೋತ್ರಮಾಡಿ ಎಂದು ಹೇಳಿದನಂತೆ ನಿಜವನ್ನು ಹೇಳಿದರೆ ತಮಗೇನಾದರೂ ತೊಂದರೆಯಾಗಬಹುದೆಂದು ಮರೆಮಾಚುವುದು ಹೇಡಿತನವು ಸುಳ್ಳು ಹೇಳುವುದರಿಂದ ಪಡೆದ ಸೃ ಪ್ರಯೋಜನವು ಅನ್ಯಾಯಾರ್ಚಿತವಾದುದರಿಂದ ಶ್ರೇಯಸ್ಕರವಲ್ಲ. ಆದುದ ರಿಂದಲೇ ಹಾಗೆ ಪ್ರಯೋಜನವನ್ನು ಅನುಗ್ರಹಿಸುವುದು ಈ ಶ್ವರನಿಗೂ ಅಸಮ್ಮತವಾದುದು, ಅಪಹಾಸ್ಯವಾದೀತು ಮಾನ ಹೋದೀತು ಇತ್ಯಾದಿ ಶಂಕೆಗಳಿಂದೂ ಕೆಲವರು ಸುಳ್ಳ ಹೇಳುವರು. ಇದೂ ಅಯುತ್ತವೇ, ಮನ ಸ್ವಿಗೆ ಗಾಬರಿಯಾಗಿದ್ದಾಗ ಅಕಸ್ಮಾತ್ತಾಗಿ ಸುಳ್ಳು ಹೊರಡುವ ಸಂಭವ ವುಂಟು, ಒಂದು ವೇಳೆ ಅಂಥ ಅಚಾತುಠ್ಯವು ನಡೆದರೆ ಅನಂತರವಾದರೂ