ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರವಳಿ ೬೫ wwwxwwwmwww ವುದು, ಇತರರಲ್ಲಿ ದಯೆಯಿಡುವುದೆಂದರೆ ಕೇವಲ ದೊಡ್ಡ ಕೆಲಸಗಳನ್ನೇ ಮಾಡಿ ಮರುಕವನ್ನು ತೋರಿಸಬೇಕೆಂಬುದೇನೂ ಇಲ್ಲ, ದಯೆಯಿಂದ ಎಂಥ ಸಣ್ಣ ಪುಟ್ಟ ಕೆಲಸಗಳನ್ನಾದರೂ ಮಾಡಬಹುದು. ಅದಿಲ್ಲದೆ ದೊಡ್ಡ ದೊಡ್ಡ ಕೆಲಸಗಳನ್ನೇ ಮಾಡಿ ದಯಾಗುಣವನ್ನು ತೋರಿಸೋಣ ವೆಂದು ನಾವು ಎದುರುನೋಡುತ್ತಿದ್ದರೆ ದಯೆಯಿಂದ ಮಾಡಬಹುದಾದ ಹಲವು ಸಣ್ಣ ಪುಟ್ಟ ಕೆಲಸಗಳನ್ನು ನಡೆಯಿಸಲಿಕ್ಕೆ ಆಗದೆಹೋದೀತು. ಆದುದರಿಂದ ಯಾವ ಅಲ್ಪಕಾಠ್ಯವನ್ನೇ ಆದರೂ ದಯೆಯಿಂದ ಮಾಡುತ್ತಾ ಬಂದರೆ ಅದರಿಂದ ಬರುವ ಪುಣ್ಯವೂ ಹೆಚ್ಚಾಗಿಯೇ ಇರುವುದು, ಒಂದು ದೊಡ್ಡ ಕ್ಷಾಮ ಬಂದರೆ ಆಗ ಬಡವರಿಗೆ ಸಹಾಯ ಮಾಡೋಣವೆಂದು ನಿರೀಕ್ಷಿಸಿಕೊಂಡು ಈಗ ಸುಮ್ಮನಿರುವುದಕ್ಕೆ ಬದಲಾಗಿ ಬಾಯಾರಿದವರಿಗೆ ನೀರು ಕೊಡುವುದು, ಹಸಿದವರಿಗೆ ಅನ್ನವನ್ನಿಡುವುದು, ರೋಗಿಗಳನ್ನು ಚರಿಸುವುದು, ಸಂಕಟಪಡುತ್ತಿರುವವರಿಗೆ ಸಹಾಯಮಾಡುವುದು, ಪ್ರಬಲ ದಿಂದ ದುರ್ಬಲರಿಗೆ ಆಗುವ ಹಿಂಸೆಯನ್ನು ತಪ್ಪಿಸುವುದು, ವ್ಯಸನಪಡುತ್ತಿರು ವವರಿಗೆ ಸಮಾಧಾನ ಹೇಳುವುದು ಇಂಥ ಸಣ್ಣ ಪುಟ್ಟ ಕೆಲಸಗಳಿಂದಲು ದರೂ ನಮ್ಮ ದಯೆಯನ್ನು ತೋರಿಸುವುದು ಮೇಲಲ್ಲವೆ? - ದಯೆಯನ್ನು ತೋರ್ಪಡಿಸುವುದರಲ್ಲಿ ಎರಡು ಮಾರ್ಗಗಳುಂಟು(೧) ದಯಾಮಯವಾದ ಕಾವ್ಯಗಳನ್ನು ಮಾಡಿಕೊಟ್ಟು ಸಹಾಯಮಾಡು ವುದು, (೨) ದಯಾಸೂಚಕಗಳಾದ ಮಾತುಗಳನ್ನಾದರೂ ಆಡಿ ಮರುಗು ವುದು. ಇವೆರಡನ್ನೂ ನಮಗಿಂತ ಮೇಲ್ಪಟ್ಟವರಲ್ಲೂ ಸರಿಸಮಾನಸ್ಕಂಧ ರಲ್ಯ ತೋರಿಸಿದಾಗ ಇದಕ್ಕೆ ಉಪಚಾರವೆಂಬ ಹೆಸರು ಬರುವುದು, ನನು ಗಿಂತ ದುರ್ಬಲರಲ್ಲಿ ಉಪಯೋಗಿಸಿದಾಗ ಮಾತ್ರ ದಯೆಯೆಂಬ ಹೆಸರು ಬರುವುದು ಆದರೆ ಹೀಗೆ ಹೆಸರುಗಳು ಬದಲಾಯಿಸಿದರೂ ಇದರಿಂದ ಆಗತಕ್ಕ ಫಲವೇನೋ ಒಂದೇ,