ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ೬೭ wwwswammmwwwywwwmmmmmmmmmmmmmmmmwww ಸಂತೋಷವನ್ನುಂಟುಮಾಡುವುದು, ಈ ಪ್ರಕಾರವು ಕೂಡ ಇಷ್ಟಲೆ ಯಲ್ಲಿರತಕ್ಕವರಿಗೆ ದೀಪವನ್ನೊದಗಿಸಿಕೊಟ್ಟಂತೆ ಸಹಾಯಕವಾಗುವುದು. ಡಯಾನಯವಾದ ಮಾತುಗಳನ್ನು ಯಾರಿಗೆ ಬೇಕಾದರೂ ಹೇಳಬ ಹುದು, ಆದರೆ ದಯೆಯನ್ನು ಕಾವ್ಯ ರೂಪದಲ್ಲಿ ತೋರಿಸುವಾಗಲೇನೋ ಭಿಲು ಎಚ್ಚರಿಕೆಯಿಂದಿರಬೇಕು, ಇಲ್ಲದಿದ್ದರೆ ರಯೆಯು ಅಪಾತ್ರದಲ್ಲಿ ವಿನಿಯೋಗವಾಗುವುದರಿಂದ ಎಷ್ಟೊವೇಳೆ ಬಹಳ ಅನರ್ಥಗಳಿಗೆ ಅವಕಾಶ ವುಂಟಾಗುವುದು, ಕೊಲೆಪಾತಕಿಯನ್ನು ಕನಿಕರದಿಂದ ಶಿಕ್ಷಿಸದೆ ಬಿಟ್ಟುಬಿಡು ವುದು, ದೇಹಶಕ್ತಿಯುಳ್ಳ ಸೋಮಾರಿಗಳಿಗೆ ಸುಖಜೀವನಮಾಡಿಸುವುದು. ಇಂಥವು ಲೋಕಕಂಟಕವಾದ ಕಾರ್ ಗಳು, ದಯಾಮಯವಾದ ಕಾರ್ಗ ಳನ್ನು ಮಾಡುವುದಕ್ಕೆ ಎಷ್ಟೋ ಸಂದರ್ಭಗಳು ದೊರೆಯುವುವು. ಇತರರು ಹೊತ್ತಿರುವ ಹೊರೆಯನ್ನಿಳಯಿಸುವುದು, ತಾಯ್ತಂದೆಗಳಿಗೂ ಇತರ ವೃದ್ದ ರಿಗೂ ಸಹಾಯಮಾಡುವುದು, ಪರಸ್ಥಳದವರಿಗೆ ದಾರಿಯನ್ನು ತೋರಿಸುವು ದು, ಓದುಬರಹ ಬಾರದವರಿಗೆ ಕಾಗದವನ್ನು ಓದಿ ಹೇಳುವುದು, ಅಥವಾ ಬರೆದುಕೊಡುವುದು, ರೈಲ್ವೆ ಸ್ಟೇಷನ್ನಿನಲ್ಲಿರುವಾಗಲಾದರೆ ಅಶಕ್ತರಿಗೆ ಟಿಕೆಟ್‌ ತಂದುಕೊಡುವುದು, ಅಕಸ್ಮಾತ್ತಾಗಿ ಯಾರಿಗಾದರೂ ಪೆಟ್ಟಾದರೆ ತನ್ನಿಂದ ಆಗುವಷ್ಟು ಸಹಾಯಮಾಡುವುದು, ಎಡವಿ ಬಿದ್ದವರನ್ನು ನೋಡಿ ನಗದೆ ಮೇಲಕ್ಕೆತ್ತುವುದು, ಕೈಲಾಗದಿದ್ದರೆ ಅನುತಾಪ ಸೂಚಕವಾದ ಒಂದು ಮಾತನ್ನಾದರೂ ಆಡುವುದು, ನಿರಾಶರಾದವರನ್ನು ಪ್ರೋತ್ಸಾಹಿಸಿ ಹುರಿದುಂ ಬಿಸುವುದು, ಇಂಥವುಗಳೆಲ್ಲಾ ದಯೆಂದು ಕೆಲಸಗಳೇ, ಅಂತು ನಮ್ಮಿಂದ ಇತ ರರಿಗೆ ದೈಹಿಕ ಅಥವಾ ಮಾನಸಿಕವಾದ ಯಾವ ವೇದನೆಯ ಆಗಕೂಡದ ಲ್ಲದೆ ಸಾಧ್ಯವಾದ ಮಟ್ಟಿಗೂ ಏನಾದರೂ ಸಹಾಯ ಮಾಡಬೇಕು. ಮಕಪಣಿಗಳನ್ನು ಹೆಚ್ಚಾಗಿ ದುಡಿಸುವುದು, ಸರಿಯಾಗಿ ಫೋಸಿ ಸದಿರುವುದು, ವೃಥಾ ಗಾಬರಿಮಾಡಿ ಹೆದರಿಸುವುದು, ವಿನೋದ, ಸಪೆರುಷ