ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ ಕರ್ಣಾಟಕ ಗ್ರಂಥಮಾಲೆ mmmmmmmmmmmmmmmmmmmmm ಪ್ರಕಾಶ, ಆಂಥ ಉದ್ದೇಶಗಳಿಗಾಗಿ ಯಾವ ವಿಧದಿಂದಲಾದರೂ ಅವನ್ನು ನೋಯಿಸುವುದು, ಇಂಥವುಗಳೆಲ್ಲಾ ಬಲು ಹೀನಾಯವಾದ ಹೇಡಿ ಕೆಲಸ ಗಳು, ಅನೇಕ ದಕಪಣಿಗಳು ನಮಗೆ ಎಷ್ಟೋ ಸಹಾಯಮಾಡುತ್ತಿ ರುವುವು, ಅವಕ್ಕೆ ನಾವು ಎಷ್ಟು ಕೃತಜ್ಞರಾಗಿದ್ದರೂ ಸಾಲದು, ಲೋಕ ದಲ್ಲಿ ಮನುಷ್ಯನಿಗೆ ಸಂಪತ್ತು ಹೆಚ್ಚುವುದಕ್ಕೆ ದೇವರತ್ನಗಳಾದ ಪಶುಗಳ ಮುಖ್ಯ ಸಹಾಯಕಗಳಂದು ಒಬ್ಬ ವಿದ್ವಾಂಸನು ಹೇಳಿರುವನು, ಅವನ್ನು ನಾವು ದಯೆಯಿಂದ ಕಾಣುತ್ತಿದ್ದರೆ ಅವೂ ನಮ್ಮಲ್ಲಿ ಪ್ರೀತಿಯನ್ನೂ ಸ್ವಾಮಿ ಭಕ್ತಿಯನ್ನೂ ತೋರಿಸುವುವು. ಭೂತದಯೆಯಿಂದ ನಮ್ಮ ಯೋಗ್ಯತೆಯ ನಡತೆಯ ಹೆಚ್ಚು ಗೌರವವನ್ನು ಪಡೆವುವು, ಅವು ನನಗಿಂತಲೂ ಕೀಳು ಎಂದು ತಿರಸ್ಕರಿಸಿ ತೊಂದರೆ ಪಡಿಸಬಾರದು, ಇದಕ್ಕೆ ಬದಲಾಗಿ ಅವುಗಳಲ್ಲಿ ಕನಿಕರವಿಡಬೇಕು, ದೇವರ ಸೃಷ್ಟಿಯಲ್ಲಿ ಎಲ್ಲಾ ಪ್ರಾಣಿಗಳೂ ಸಮಾನವೇ, ಹೀಗಿರುವಲ್ಲಿ ಅವುಗಳಲ್ಲೊಬ್ಬನಾಗಿ ಕೊಂಚ ವಿಚಾರಶಕ್ತಿಯುಳ್ಳ ಮನು ಹೈನುಅವುಗಳನ್ನು ಹಿಂಸಿಸಿದರೆ ದೇವರಿಗೆ ಕೋಪಬರುವುದಿಲ್ಲವೆ? ಕಲವ ರುಮಾಂಸಾಹಾರ ದೇಹಾಲಂಕಾರ ಆಂಥ ಸ್ವಾ ರ್ಥಗಳಿಗಾಗಿ ಪ್ರಾಣಿಗಳನ್ನು ಕೊಲ್ಲುವರು. ಇದೂ ಅಧಮ್ಮವೇ, ಪ್ರಾಣಿಹಿಂಸೆಗೆ ಸಂಬಂಧಪಟ್ಟ ಕೂರ ವಾದ ಕಥೆಗಳನ್ನೂ ಕೂಡ ಮಕ್ಕಳ ಮುಂದೆ ಹೇಳದಿರುವುದು ಒಳ್ಳೆಯದು. - ದಯಳುಗಳಾದವರು ಇತರ ವಿಷಯವಾಗಿ ಯಾವ ತುಚ್ಛವಾದ ಮಾತುಗಳನ್ನೂ ಆಡುವುದಿಲ್ಲ, ಮತ್ತು ಈ ಮಾತುಗಳನ್ನಾಡಿದರೆ ಇವರೇ ನೆಂದುಕೊಳ್ಳುವರೋ ಎಂದು ಯೋಚಿಸಿ ಬಲು ಎಚ್ಚರಿಕೆಯಿಂದ ಮಾತು ಡುವರು. ದಯಾಳುವಾದ ಮನುಷ್ಯನು ಸತ್ತು ಹೋದರೂ ಜನಗಳು ಆತನ ದಯಾಗುಣವನ್ನು ಮರೆಯದೆ ಚಿರಕಾಲ ಕಂಡಾಡುವರು, - ದಯೆಯು ಕೌಲ್ಯಕ್ಕೆ ವಿರುದ್ಧವಾದುದೆಂದು ಮೊದಲೇ ಹೇಳಿದೆ ಯಷ್ಟೆ, ಆ ಕ್ಷೌಲ್ಯದ ವಿಷಯವಾಗಿಯೂ ಸ್ವಲ್ಪ ತಿಳಿಯೋಣ-ಯಾರೇ