ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಕರ್ಣಾಟಕ ಗ್ರಂಥಮಾಲೆ kumbu mmmmmmmws ದೊಣ ದುಪದರ ಮೈತ್ರಿಯು ಇದಕ್ಕೆ ದೃಷ್ಟಾಂತವಾಗಿದೆ. ಇತರರು ತಮುಗೆ ಸ್ನೇಹಿತರಾಗಿರಬೇಕೆನ್ನುವರು ತಾವೂ ಸ್ನೇಹಪರರಾಗಿರಬೇಕು. ಮತ್ತು ಸ್ನೇಹಿತರಿಂದ ಅಕಸ್ಮಾತ್ತಾಗಿ ನಡೆದುಹೋದ ಅಚಾತುರವನ್ನು ಪರಿಗಣಿಸಕೂಡದು, ಔದಾಗ್ಯವೂ ತಾಳ್ಮೆಯ ನಿಜವಾದ ಮೈತ್ರಿಗೆ ಮುಖ್ಯ ಸಹಾಯಕಗಳು, ಮಿತ್ರರೊಡನೆ ಮತ್ಯಾದೆಯಿಂದ ವರ್ತಿಸಬೇಕಾದುದೂ ಮುಖ್ಯ, ಎಷ್ಟೋ ಜನರು ಈ ವಿಷಯವನ್ನು ತಾತ್ಸಾರಮಾಡಿ ಅಯೋಗ್ಯ ವಾದ ಮಾತುಗಳಿಂದ ಪರಸ್ಪರ ವಿನೋದಕ್ಕೆಂದು ಬೈದಾಡುವರು. ಇದು ಮತ್ಯಾದೆಗೆ ವಿರುದ್ಧ, ಮೈತ್ರಿಯಿದ್ದ ಮಾತ್ರಕ್ಕೇ ಒಳ್ಳೆಯ ನಡತೆಗೆ ವಿರುದ್ಧ ವಾಗಿ ಅಮತ್ಯಾದೆಯಿಂದ ನಡೆಯಬಹುದೆಂದು ತಿಳಿಯಬಾರದು, ಮತ್ಯಾದ ಯನ್ನು ಮತ್ತೂ ಚೆನ್ನಾಗಿ ಆಚರಿಸಬೇಕಲ್ಲವೆ ? ವಾಕ್ಯುದ್ಧಿ ಸಾಲದವರನೇ ಕರು ಮೈತ್ರಿಯನ್ನೇ ಕಳೆದುಕೊಳ್ಳಬೇಕಾದೀತು. ಮೈತ್ರಿಯು ನಿಷ್ಕಪಟವಾಗಿರದೆ ಸಹಜವಾಗಿ ಇರಬೇಕು, ಹಾಗಿ ಲ್ಲದೆ ಯಾವುದಾದರೊಂದು ಪ್ರಯೋಜನೋದ್ದೇಶದಿಂದ ಮಾತ್ರ ಉಂಟಾಗಿದ್ದರೆ ಅದು ಕಾಲಕಮದಲ್ಲಿ ನಾಶವಾಗುವುದಲ್ಲದೆ ವಿರಸಕ್ಕೂ ಆಸ್ಪದವನ್ನುಂಟುಮೂಡೀತು, ಕೆಲವರ ಮೈತ್ರಿಯು ಕಾಲ, ಸಂದರ್ಭ, ಆನನುಕೂಲತೆ ಇಂಥ ಕಾರಣಗಳಿಂದ ಹಿಂದಿನವರಲ್ಲಿ ಕಡಿಮೆಯಾಗುತ್ತ ಮುಂದಿನವರಲ್ಲಿ ಬೆಳೆಯುತ್ತ ಬರುವುದೂ ಉಂಟು, ಕೆಲವರಿಗೆ ಅನೇಕ ಸ್ನೇಹಿತರನ್ನು ಪಡೆದಿರಬೇಕೆಂಬುದು ಇಷ್ಟ, ಮಿತ್ರರು ಅನೇಕರಿದ್ದರೆ ಹೆಚ್ಚು ಕಳೆಯಬೇಕಾಗುವ ಸಂಭವವುಂಟು. ಆದುದರಿಂದ ಮನುಷ್ಯನು ಎಲ್ಲರಲ್ಲಿಯೂ ಒಳ್ಳೆಯವನಾಗಿರುವುದಕ್ಕೆ ಯತ್ನಿಸಬೇಕು, ಆಪ್ತಮಿತ್ರರು ಆಲಹರು ಮಾತ್ರ ಇದ್ದರೂ ಸಾಕು ಎಂದು ಹಲವರು ಅಭಿಪ್ರಾಯ ಹೆಯಷರು, ಮಿತ್ರರ ಸಂಖ್ಯೆಯು ಕಡಿಮೆಯಾಗಿದ್ದರೆ ಪರಸ್ಪರ ಪ್ರೀತಿಯ ಅವಿಚ್ಛಿನ್ನವಾಗಿ ಹೆಚ್ಚುವುದು. ಆದರೆ ಅತ್ಯಲ್ಪ ಸಂಖ್ಯೆಯುಳ್ಳ ಮಿತ್ರರನ್ನು