ಪುಟ:ಕರ್ನಾಟಕ ನಂದಿನಿ ವಿಮಲಾದೇವಿ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಡೆವಳಿ ೮೧ MMwwwnMownmmmmmmmmmmmm ರಾದವಲ್ಲಾ ಎಂಬತೃಪ್ತಿ, ಎರಡನೆಯದು-ತಮಿಂದ ಉಪಕಾರವನ್ನು ಪಡೆ ದವರು ಅನುಭವಿಸುವ ಸುಖವನ್ನು ನೋಡುವುದರಿಂದ ಉಂಟಾಗುವ ಆನಂ ದ ಸ್ವಾರ್ಥಪರನಾದ ಮನುಷ್ಯನಿಗೆ ಎಂದಿಗಾದರೂ ಇಂಥಸುಖಸಂತೋಷ ಗಳು ದೊರತಾವೆ? ಯಾರೂಸ್ವಾರ್ಥಪರವಶರಾಗಿರಕೂಡದೆಂಬ ನೀತಿಯನ್ನು ನಾವು ಕಾಗೆಯಿಂದ ನೋಡಿ ತಿಳಿದುಕೊಳ್ಳಬಹುದು. ಕಾಗೆಯು ಎಲ್ಲಿ ಏನು ಒಂದು ಅಗುಳಿನಷ್ಟು ತಿಂಡಿಯು ದೊರೆಯುವಂತಿದ್ದರೂ * * *ು ' ಎಂದು ಕಡೆಪಕ್ಷ ಒಂದೆರಡು ಸಲವಾದರೂ ತನ್ನ ಗುಂಪಿನ ಪyಣಿಗಳನ್ನೆಲ್ಲಾ ಕೂಗಿ ಕರೆಯದೆ ಅದು ತಾನುಮಾತ್ರವೇ ಆ ತಿಂಡಿಗೆ ಎಂದಿಗೂ ಎರಗುವುದಿಲ್ಲ. ಆಹಾ ! ಇದೆಂಥ ಒಳ್ಳೆಯಗುಣವು ! ಯಾವಜನಾಂಗದಲ್ಲಿ ಸ್ವಾರ್ಥಪರತೆಯು ಬೇರೂರಿರುವುದೋ ಅದರಲ್ಲಿ ಎಂದಿಗೂ ಐಕಮತ್ಯವು ಹುಟ್ಟುವುದಿಲ್ಲವಾಗಿ ಎಂದಿಗೂ ಅದು ಊರ್ಜಿತಸ್ಥಿತಿಗೆ ಬರುವುದಿಲ್ಲ, ಸ್ವಾರ್ಥಪರತೆಯನ್ನೂ ಬಿಟ್ಟು ಕೆಲಸಮಾಡಿದರೆ ಜಗದ್ವಿಖ್ಯಾತರಾಗಿ ಬಾಳಬಹುದೆಂಬುದಕ್ಕೆ ಇಂಗ್ಲಿಷ್ ಜನಾಂಗವು ಆದರ್ಶಪ್ರಾಯವಾಗಿರುವುದು, ಸರ್ಥಪರರನ್ನು ಯಾರೂ ಪ್ರೀತಿಸುವುದಿಲ್ಲ, ಎಲ್ಲರೂ ಅಂದರೆ ಹೊರಗಿನವರು ಮಾತ್ರವಲ್ಲದೆ ಮನೆ ಯವರು ಕೂಡ ಇವರನ್ನು ಕಂಡರೆ ಬೇಸರಪಡುವರು, ಎಲ್ಲರೂ ಪ್ರೀತಿ ಸುವುದಕ್ಕೆ ಬದಲಾಗಿ ಹೆಚ್ಚಾಗಿ ದ್ವೇಷಿಸುವರು, ಮತ್ತು ನಿರ್ದಯೆಯಿಂದ ಕಾಣುವರು. ಸಂಫುದವರಂತು ಇವರನ್ನು ಮೂಲೆಗೊತ್ತರಿಸುವರು ಆದುದರಿಂದ ಯಾರೂ ಸತ್ತಿ ರ್ಥಪರರಾಗದೆ ಪರೋಪಕಾರಬದ್ದಿಯಿಂದ ನಡೆ ಯಾವುದು ಶ್ರೇಯಸ್ಕರವು. 19 ಕೃತಜ್ಞತೆ. ಇತರರು ನಮಗೆ ಮಾಡಿದ ಸಹಾಯಕ್ಕಾಗಿ ಸರದ ಅವರನ್ನು ಸ್ಮರಿಸಿಕೊಳ್ಳುವುದು ಕೃತಜ್ಞತೆ ಯೆನಿಸುವುದು, ಇದರಿಂದ ಉಪಕಾರಿಗಳ ಮನಸ್ಸು ಸಂತೋಷಪಡುವುದು. ಲೋಕದಲ್ಲಿ ಪ್ರತಿಯೊಬ್ಬರಲ್ಲಿ ಯ.