ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

80 [ಆದಿಪರ್ವ ಮಹಾಭಾರತ ಅಂದೊಡಿಂದ್ರಂಗವುಗಳೊಪ್ಪಿಸ ಅಂದಿರಾಧರನೆಂದ ವಾಲಿಗ ದಿಂದುಮುಖಿ ತಾರೆಯನು ಮುದದಲಿ 1 ಕೊಟ್ಟಿರಾತಂಗೆ ! ಚಂದಮಸನನುಮೇಶಗಿತ್ತರು ಕುಂದದಾಗಳ ಶಿವನು ಮೋದಿಸ ಅಂದು ವರಜಪಮಣಿಯ ಪದ್ಮಜಗೀಯೆ ವಿನಯದಲಿ | ೩೯ ಸಿಂಧುಮಥನದೊಳಾಗ ಬಹುವಿಧ ದಿಂದ ಹುಟ್ಟಿದ ವಸ್ತುಗಳನಾ ನಂದದಿಂ ಕಮಲಜನು ಕೊಟ್ಟ ಸುರರಿಗೆ ತಕ್ಕುದನು ; ಮಂದರಾಚಲವದನು ಮೇರುವಿ ಗಂದವಿಟ್ಟನು ಮರಳಿ ಮಾರುತ ಬಂದನೊಬ್ಬನು ಬಳಿಕ ಶ್ರೀಪತಿಯೆಡೆಗೆ ಕೇಳಂದ || ೪೦ ವರಸುರೋತ್ತಮರೈದೆ ಬಂದಾ ವರಮಣಿಯನುರಗೇಂದ್ರಗಿತ್ತರು ಮರಳಿ ಬಾಲೆಯ ತಂದು ಕೊಟ್ಟರು ಹರಿಯ ಚರಣದಲಿ || - ಲಕ್ಷ್ಮಿ ವಿಷ್ಣುವನು ವರಿಸುವಿಕೆ. ಸುಗರು ಬಾಲೆಯ ನೆರೆದು ಬಂದಾ ದರಿಸಿದರು ಶ್ರೀಪತಿಯನಾಗಳ | ಸರಸಿರುಹಸಂಭವನು ಬಿಂನಹ ಮಾಡಿದನು ಸಿರಿಗೆ ೧ ೪೧ ಎಲೆ ಜನನಿ ನೀನಿಂದು ಸುರಕುಲ ಬಳಗದೊಳಗತ್ಯಧಿಕರಾದರ ತಿಳಿದು ಮಾಲೆಯನಿಕ್ಕಿಕೊಂಬುದು ಲೋಕ ಮೆಚ್ಚ ಲಿಕೆ | ಒಲಿದು ವರಿಸುವುದೆನಲು ಲಕ್ಷ್ಮಿ ಲಲನೆ ಸಾಕ್ಷಾತ್ಪರಮಪುರುಷನ | ನಿಲುವನದು ಕಂಡು ಹರುಷೋತ್ಸವದಿ ಕೈಮುಗಿದು | ೪೦ ಭ 1 ಕಡಿಯನೆ, ಕ, ಖ..