ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vii ಬಂದುದು ಈತನಿಗೆ ಶೋಕಕಾರಣವಾಗಬೇಕಾದರೆ ಈ ಬ್ರಾಹ್ಮಣ ನಿಗೂ ದುರ್ಯೋಧನನಿಗೂ ಹೆಚ್ಚು ಸಂಬಂಧವಿದ್ದಿರಬೇಕೆಂದು ವಿಚಾರ ಮಾಡುತ್ತಿರುವಾಗ ಆಬ್ರಾಹ್ಮಣನಲ್ಲಿ ಸ್ಪಷ್ಟ ಸೂಚಿತವಾದ ಕೆಲವು ಲಕ್ಷ ಣಗಳು ಕಂಡು ಬಂದುದರಿಂದ, ನಾರಣಪ್ಪನಿಗೆ ಮನಸ್ಸಮಾಧಾನ ವಾಯಿತು. ಭೋಜನವಾದ ಬಳಿಕ ಆಬ್ರಾಹ್ಮಣನು ಪ್ರಯಾಣಮಾಡತೊಡ ಗಲು ನಾರಣಪ್ಪನು ಹಿಂಬಾಲಿಸಲು ಅವನು ಹಿಂದಿರುಗಿ ನೋಡಿ ನಾರಣ ಪ್ರನಿಗೆ ಹಿಂದೆ ಬರಬೇಡವೆಂದು ಎಷ್ಟು ಹೇಳಿದಾಗ್ಯೂ ಕೇಳದೆ ಇರುವಾಗ ಆ ಬ್ರಾಹ್ಮಣನು ನಿಂತು ಏಕೆ ನನ್ನನ್ನು ಬಿಡದೆ ಹಿಂಬಾಲಿಸುತ್ತಿ? ಎಂದು ಕೇಳಿದರು, ಅದಕ್ಕೆ ನಾಣಪ್ಪನು ಹೇಳಿದುದೇನೆಂದರೆ--ತಾವು ಸಾಕ್ಷಾತ ಅಶ್ವತಾ ವಾಚಾರ್ಯರೆಂದು ನಾನು ನಂಬಿರುವೆನು. ತಮ್ಮಿಂದ ಜ್ಞಾನೋ ಪದೇಶವಂ ಪಡೆದು ಶ್ರೀಮಹಾಭಾರತವನ್ನು ಕನ್ನಡಿಸುವ ಯತ್ನವಂ ನಡಿ ಸಲು ನನ್ನನ್ನು ತಿವಿರನಾರಾಯಣದೇವರು ಪ್ರೇರಿಸಿರುವರು. ಆದುದ ರಿಂದ ಅನುಗ್ರಹಿಸಿ ಮೇಲೆ ಹೇಳಿದ ಕಾರ್ಯಕ್ಕೆ ತಕ್ಕಷ್ಟು ಜ್ಞಾನಶಕ್ತಿಗಳ ನ್ನು ಕೊಟ್ಟು ನನ್ನನ್ನು ಉದ್ಧರಿಸಬೇಕೆಂದು ಬೇಡಿಕೊಳ್ಳುವೆನು ಎನಲು ಅಕ್ಷತಾಮಾಚಾರ್ಯರು ಸಂತುಷ್ಟರಾಗಿ “ ನಾನು ದುರ್ಯೋಧನನ ಮರಣದವರೆಗೂ ಯುದ್ಧದಲ್ಲಿ ಆಸಕ್ತನಾಗಿದ್ದುದರಿಂದ ಆವರಗಿನ ಕಥೆ ಗಳು ನಿನಗೆ ಚೆನ್ನಾಗಿ ಸ್ಪುರಿಸುವಂತೆ ಅನುಗ್ರಹಿಸಿರುವೆನು ; ಹೋಗು, ಗ್ರಂಥವನ್ನು ಆರಂಭಿಸು. ಸನವನ್ನು ಮಾಡಿ ನೀನುಟ್ಟ ಬಟ್ಟೆಯು ಒಣಗದೇ ಇರುವವರಿವಿಗೂ ನೀನು ಹೇಳುವ ಗ್ರಂಥವೆಲ್ಲವೂ ಶ್ಲಾಘ್ನವಾಗಿ ರಲಿ, ಶ್ರೀವೀರನಾರಾಯಣದೇವರ ಕೃಪೆಯಿಂದ ದುರ್ಯೋಧನಜಾತಪ ರ್ಯಂತ ನಿನ್ನ ಗ್ರಂಥವು ನಿರ್ವಿಘ್ನವಾಗಿ ಬೆಳಯಲಿ, ನಮ್ಮ ದರ್ಶನಾದಿ ವೃತ್ತಾಂತಗಳನ್ನು ಯಾರೊಡನೆಯಾದರೂ ನೀನು ತಿಳಿಸಿದರೆ ನಿನ್ನ ದೇಹ ಉಳಿಯಲಾರದು ” ಎಂದು ಉಪದೇಶಿಸಿ ಅಂತರ್ಹಿಕರಾದರು. ಬಳಿಕ ಈತನು ಆ ಮಹಾತ್ಯರ ಅಪ್ಪಣೆಯಂತೆ ನಿಯಮಪೂರ್ವ ಕವಾಗಿ ಗ್ರಂಥವನ್ನು ರಚಿಸುತ್ತಾ, ಒಬ್ಬ ಸ್ನೇಹಿತನ ಕಡೆಯಿಂದ ಬರೆ