ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೭] ಸಂಭವಪರ್ವ ತಾಯಿ ಮಕ್ಕಳ ಕರೆದು ತಂದೆಯ ಕಾಯದಲಿ ಕುಳ್ಳಿರಿಸುವಂದದಿ ಶ್ರೀಯು ತಂದಳು ಹರಿಯ ಹೊರೆಗಾ ದಿವಯೋಗಿಗಳ | ಕಾಯದಲಿ ತೆಗೆದಪ್ಪಿ ಕರುಣದಿ ಬಾಯ ಚುಂಬನವಿಕ್ಕಿ ಬಾಗಿಲ ಕಾಯುವರು ಕಡು ಮೂರ್ಖರಿಂದ ನಮಗೆ ಮನ್ನಿ ಪುದು | ೯ ಎಂದೊಡವರುಗಳನ್ನು ನುತಿಯಿಸಿ ಕುಂದು ಹೆಚ್ಚನು ನೀವು ಕಾಣ್ಣುದು ಮಂದರೋದರ ಎನಲು ದೇವನು ಕಂಡನದಕೊಂದ | ಇಂದು ಸನಕಾದಿಗಳ ಶಾಪವು ಬಂದುದೀ ಜಯವಿಜಯರಿಬ್ಬರಿ ಗಿಂದು ನೀವಿದ ಹೇಗೆ ಕಳೆಯುವಿರೆಂದು ಬೆಸಗೊಳಲು || .೦ ಜೀಯ ನೀವೇ ಕಾಣ್ಣು ದವರಿಗೆ ನ್ಯಾಯ ಶಾಪವದೆಂದು ನುಡಿಯಲು ವಾಯುವಾಹನ ಕರೆದು ನುಡಿದ ವಿಜಯಜಯರಿಗಂದು | ನ್ಯಾಯದಲಿ ನಿಮಗೀಗ ದೈತ್ಯರ ಕಾಯ ಬಂದುದದೇಟುಜನ್ಮದ ನ್ಯಾಯದಲು ನೀವಿದನು ಕಳವಿರೊ ಭಕ್ತಿಭಾವದಲಿ | ೧೧ ಅಲ್ಲದಿದೊಡೆ ಮಡಜನ್ಮದಿ ಫುಲ್ಲನಾಭನ ವೈರದಿಂದನೆ | ಇಲ್ಲಿಗೈದುವಿರೋ ಎನಲವರುಗಳದನೆ ಕೈಕೊಂಡು | ಅವರು ಹಿರಣ್ಯಾಕ್ಷ ಹಿರಣ್ಯಕಶಿಪುಗಳೆಂದು ಹುಟ್ಟುವಿಕೆ. ಬಲ್ಲಿದರು ಜಯವಿಜಯರಾಗಳು ಫುಲ್ಲನಾಭಂಗೆಣಗಿ ಬರುತಿರ ಅಲ್ಲಿ ಕಶ್ಯಪ ದಿತಿಯು ಸಂಧ್ಯಾ ಸಮಯರತಿಯೊಳಿರೆ || ೧4