ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

`ix ಹತ್ತು ಹನ್ನೊಂದನೆಯ ಪದ್ಯಗಳಿಂದ ವೇದವ್ಯಾಸರನ್ನು ಭಜಿಸಿರುವನು. ಬಳಿಕ ಮೇಲೆ ತೋರಿಸಿದ ಪದ್ಯದಲ್ಲಿ ಯಾರನ್ನು ಪ್ರಾರ್ಥಿಸಿರುವನೋ ಅಲ್ಲಿನ ಪದಗಳಿಂದ ಸ್ಪಸ್ಮವಾಗುವುದಿಲ್ಲ. 'ಗುರುರಾಯ' ಎಂಬ ಪದ ದಿಂದ ಒಬ್ಬ ಗುರುಗಳನ್ನು ಪ್ರಾರ್ಥಿಸಿದನೆಂದು ಮಾತ್ರ ಹೇಳಬಹುದು. ಆ ಗುರುಗಳು ಪೂರ್ವಪದ್ಯಗಳಲ್ಲಿ ಪ್ರಸಕ್ತರಾದ ವ್ಯಾಸರೇ ಎಂದು ನಿರ ಯಿಸುವುದಕ್ಕೆ ' ಗುರುಕುಲಚಕ್ರವರ್ತಿಯು ಕಂದ' 'ನಂದನಂದನಸನ್ನಿ ಭನು' ಎಂಬ ವಿಶೇಷಣಗಳು ವಿರೋಧಿಸುತ್ತವೆ. ವ್ಯಾಸರು ಪರಾಶರ ಪುತ್ರರೆಂದು ಪ್ರಸಿದ್ದರು, ಮದಕುಲದವರಲ್ಲ. ವಿಷ್ಯ Sಂಶರಾದುದ ರಿಂದ “ ನಂದನಂದನಸನ್ನಿ ಛ' ಎಂದು ಕೃಷ್ಣ ಸಾದೃಶೃದ್ಧಾಪನೆಯು ಸರಿ ಯಲ್ಲ. ಆದುದರಿಂದ ಈ ಪದ್ದದಿಂದ ಸ್ತುತ್ಯರು ಇಂತಹರೆಂದು ಹೇಳು ವುದು ಅಸಾಧ್ಯವಾಗಿರುವುದನ್ನೈ ? ಹೀಗಿರಲು ನಾವು ಶೋಧನಾ ರ್ಥವಾಗಿ ಉಪಯೋಗಿಸುತ್ತಿರುವ ಪುಸ್ತಕಗಳಲ್ಲಿ ' ಘ ' ( ಠ' ಎಂದು ಗುರ್ತು ಮಾಡಿರುವ ಪುರಾತನವಾದ ತಾಳಪ್ರತಿದು ಎರಡು ಪುಸ್ತಕಗಳಲ್ಲಿ ಮೇಲೆ ಕಂಡಪದದ ಆದಿಭಾಗದ ಪಾಠವು ವಂದಿತಾಮರಸೇವ್ಯನಾಯಕ ನಂದಮುನಿ ಯತಿಚಕ್ರವರ್ತಿಯ ೧ ೨) *ನಿರ ಕಂದ • • • • • • • • • • • • | ಜ ಎಂದು ಕಂಡು ಬರುವುದು. ಈ ಪಾಠದಲ್ಲಿ ಈ ಗುರುರಾಯರೆಂಬು ವರು 'ನಂದಮುನಿ' ಎಂದು ಪ್ರಸಿದ್ಧರಾದ ಶ್ರೀಮಧ್ವಾಚಾರ್ಯರೆಂದು ನಿಶ ಯಿಸಬಹುದು. ಇವರಲ್ಲಿ ಸಕಲ ವಿಶೇಷಣಗಳೂ ಒಪ್ಪುವುವು. ಇವರು ಈ ಸಂಪ್ರದಾಯಪ್ರಕಾರ ದೇವತಾಶ್ರೇಷ್ಠ ರಾದ ವಾಯುದೇವ ರಾದುದರಿಂದ ಅಮರಸೇವ' ಎಂಬ ವಿಶೇಷಣವು, ಶ್ರೀಮದಚ್ಯುತ ಪ್ರೇಕ್ಷಸ್ವಾಮಿಗಳವರ ಶಿಷ್ಯರಾದುದರಿಂದ ಯತಿಚಕ್ರವರ್ತಿಯ ಕಂದ ಎಂಬ ವಿಶೇಷಣವು, 'ಮಧ್ಯಾಖ್ಯನಾರಾಯಣಃ' ಎಂದು ಪ್ರಾಚೀನಗ್ರಂಥಾ ನುಸಾರವಾಗಿ 'ನಂದನಂದನಸನ್ನಿವನು' ಎಂಬ ವಿಶೇಷಣವು ಕೂಡ 8