ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಾವ ಬಾಧೆಯೂ ಇಲ್ಲದೆ ಹೊಂದುತ್ತವೆ. ಈ ಪಾಠವನ್ನೊಪ್ಪುವ ಪಕ್ಷದಲ್ಲಿ ಈ ಕವಿಯು ಮೈತ್ಮವನೆಂದು ಹೇಳಬೇಕಲ್ಲವೆ? ಮತ್ತು ಇದೇ ಪರ್ವದ 16 ನೆಯ ಸಂಧಿಯಲ್ಲಿ ಭೀಮೋತ್ಪತ್ತಿ ಪ್ರಕರಣದಲ್ಲಿ ಎಂದು ಬಣಿಕರವಿಂದಲೋಚನೆ ಬಂದು ಸಾಕ್ಷಾದೇವಮಧ್ಯರ ತಂದೆಯನು ರಜಗಣದ ಮುಖ್ಯಪ್ರಾಣದೇವನನು | ಇಂದುಮುಖಿ ವರಮಂತ್ರದಿಂದವೆ ಕಂದೆರೆದು ಕಳುಹಿದಳು . . . . || ಎಂಬ ಪದ್ಯವು ಜ' 'ಗ' ಎಂದು ಗುರ್ತು ಮಾಡಿರುವ ಪ್ರಾಚೀನ ವಾದ ತಾಳಪತಿಯ ಪುಸ್ತಕಗಳಲ್ಲಿ ದೊರಕುವುದು. ಈ ಪದ್ಯದಲ್ಲಿ ಕವಿಯು ಸ್ವತಂತ್ರವಾಗಿ ಉಪಯೋಗಿಸಿರುವ : ಸಾಕ್ಷಾದೇವಮಧ್ವರ ತಂದೆಯನು' ಎಂಬ ಮುಖ್ಯ ಪ್ರಾಣವಿಶೇಷಣವು ಈ ಕವಿಯು ವೈಪ್ಪ ವನೆಂಬುದಕ್ಕೆ ಸಾಕಾದಷ್ಟು ಸಾಧಕವು. ಮತ್ತು ಕವಿಯು ಅಲ್ಲಲ್ಲಿ ದೈತಸಿದ್ಧಾಂತದ ಪ್ರತಿತಂತ್ರ ವಿಷ ಯಗಳನ್ನು -ಅಂದರೆ, ಇತರಸಿದ್ದಾಂತದವರು ಒಪ್ಪದೆ ಇವರು ಮಾತ್ರ ಒಪ್ಪಿರುವ ವಿಷಯಗಳನ್ನು -ಮೂಲಾಭಿಪ್ರೇತವನ್ನಾಗಿ ನಿರೂಪಿಸಿರು ವನು, ಉದಾಹರಣೆಗಾಗಿ ಕೆಲವು ಇಲ್ಲಿ ತೋರಿಸಲ್ಪಡುವುದು. ಇದೇ ಪರ್ವದ ಆರನೆಯ ಸಂಧಿಯಲ್ಲಿ ಅಮೃತಮಥನಕಥಾ ಪ್ರಕ ರಣದಲ್ಲಿ ಹುಟ್ಟಿದ ವಿಷವನ್ನು ವಾಯುದೇವರು ನೀರಸವಂ ಮಾಡಿ ಮಹಾದೇವರಿಗೆ ಕೊಟ್ಟ ಕಥೆಯನ್ನು ಕೆಳಗೆ ಬರೆಯುವ 19ನೆಯ ಪದ್ಯದಿಂದ ಹೇಳಿರುವನು. ಹೊಸೆಯುಲಿಕೆ ವಾಸುಗಿಯ ಹೊಟ್ಟೆಯ ಹಸರಕಾದ್ದುಂತುರಿಯನುಗಟಿತು ವಿಷವ ಹಾಲಾಹಲವನಮರಾಸುರರು ಬೇಯಲಿಕ |